ಪೇಶಾವರದ ಮಸೀದಿಯಲ್ಲಿ ಆತ್ಮಹತ್ಯಾ ಬಾಂಬ್ ದಾಳಿ ; ಪೊಲೀಸರನ್ನೇ ಗುರಿಯಾಗಿಸಿ ಸ್ಫೋಟ, 46 ಸಾವು, ನೂರಕ್ಕೂ ಹೆಚ್ಚು ಗಾಯ   

30-01-23 08:46 pm       HK News Desk   ದೇಶ - ವಿದೇಶ

ಪಾಕಿಸ್ಥಾನದ ಉತ್ತರ ಪ್ರಾಂತ್ಯ ಪೇಶಾವರ ನಗರದ ಮಸೀದಿಯಲ್ಲಿ ಆತ್ಮಹತ್ಯಾ ಬಾಂಬ್ ದಾಳಿ ನಡೆದಿದ್ದು, 46 ಮಂದಿ ಸಾವಿಗೀಡಾಗಿದ್ದು 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಪೇಶಾವರ, ಜ.30: ಪಾಕಿಸ್ಥಾನದ ಉತ್ತರ ಪ್ರಾಂತ್ಯ ಪೇಶಾವರ ನಗರದ ಮಸೀದಿಯಲ್ಲಿ ಆತ್ಮಹತ್ಯಾ ಬಾಂಬ್ ದಾಳಿ ನಡೆದಿದ್ದು, 46 ಮಂದಿ ಸಾವಿಗೀಡಾಗಿದ್ದು 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸೋಮವಾರ ಮಧ್ಯಾಹ್ನ ಮಸೀದಿಯಲ್ಲಿ ಕಿಕ್ಕಿರಿದು ತುಂಬಿಕೊಂಡು ಪ್ರಾರ್ಥನೆ ನಡೆಸುತ್ತಿದ್ದಾಗಲೇ ತಾಲಿಬಾನಿ ಬಾಂಬರ್ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ. ಮೃತಪಟ್ಟವರಲ್ಲಿ ಹೆಚ್ಚಿನವರು ಪೊಲೀಸರು, ಭದ್ರತಾ ಸಿಬಂದಿ ಇದ್ದಾರೆ ಎಂದು ಆರೋಗ್ಯ ಸಿಬಂದಿ ತಿಳಿಸಿದ್ದಾರೆ.  

ಮಧ್ಯಾಹ್ನ 1.40ಕ್ಕೆ ಪೊಲೀಸ್ ಲೈನ್ಸ್ ಪ್ರದೇಶದ ಮಸೀದಿಯಲ್ಲಿ ಸ್ಫೋಟ ಸಂಭವಿಸಿದೆ. ಪೊಲೀಸರು, ಸೇನಾ ಸಿಬಂದಿ ಹೆಚ್ಚಾಗಿ ಅಲ್ಲಿ ಪ್ರಾರ್ಥನೆಗೆ ಸೇರಿದ್ದರು. ಬಾಂಬರ್ ಆಗಿದ್ದವನು ಪ್ರಾರ್ಥನೆಗೆ ಸೇರಿದ್ದವರಲ್ಲಿ ಮೊದಲ ಸಾಲಿನಲ್ಲಿದ್ದ ಎಂದು ಅಧಿಕಾರಿಗಳು ಸಂಶಯ ಪಟ್ಟಿದ್ದಾರೆ. ತೆಹ್ರೀಕ್ ಇ- ತಾಲಿಬಾನ್ ಪಾಕಿಸ್ಥಾನಿ ಇದರ ಕಮಾಂಡರ್ ಉಮರ್ ಖಾಲಿದ್ ಖುರಸಾನಿ, ಇದು ತಾಲಿಬಾನ್ ಪರವಾಗಿ ನಡೆಸಿರುವ ಸುಸೈಡ್ ಬಾಂಬರ್ ಕೃತ್ಯ ಎಂದು ಹೇಳಿದ್ದಾನೆ. ಕಳೆದ ಬಾರಿ ಅಫ್ಘಾನಿಸ್ತಾನದಲ್ಲಿ ತನ್ನ ಸೋದರನ ಹತ್ಯೆಗೆ ಪ್ರತೀಕಾರವಾಗಿ ಈ ಕೃತ್ಯ ಎಸಗಿದ್ದೇವೆ ಎಂದಿದ್ದಾನೆ. ತೆಹ್ರೀಕ್ ಸಂಘಟನೆ, ಪಾಕಿಸ್ಥಾನದಲ್ಲಿರುವ ತಾಲಿಬಾನಿ ಸಂಘಟನೆ ಎಂದು ಕರೆಸಿಕೊಂಡಿದೆ.

46 killed, over 100 injured in Taliban suicide attack at mosque in  high-security zone in Pakistan's Peshawar

46 killed, over 100 injured in Taliban suicide attack at mosque in  high-security zone in Pakistan's Peshawar

Pakistan mosque bombing: Dozens dead, scores injured as suicide bomber  targets police in Peshawar - CBS News

ಪೇಶಾವರ ನಗರದ ಎಸ್ಪಿ ಶಾಜಾದ್ ಕೌಕಾಬ್ ಟಾರ್ಗೆಟ್ ಇಟ್ಟುಕೊಂಡು ದಾಳಿ ನಡೆದಿತ್ತು. ಶಾಜಾದ್ ಇರುವ ಎಸ್ಪಿ ಕಚೇರಿ ದಾಳಿ ನಡೆದಿರುವ ಮಸೀದಿ ಬಳಿಯಲ್ಲೇ ಇದೆ. ಮಧ್ಯಾಹ್ನ ಶಾಜಾದ್ ಕೌಕಾಬ್ ಪ್ರಾರ್ಥನೆಗೆ ಬಂದಿದ್ದು, ಒಳಗೆ ಎಂಟರ್ ಆಗುತ್ತಲೇ ಬ್ಲಾಸ್ಟ್ ಆಗಿತ್ತು. ಇದರಿಂದಾಗಿ ಶಾಜಾದ್ ಬಚಾವ್ ಆಗಿದ್ದಾರೆ.

A Taliban suicide bomber blew himself up in a mosque packed with worshippers during afternoon prayers on Monday in the high-security zone in Pakistan's restive northwestern Peshawar city, killing 46 people and wounding nearly 150 others, mostly policemen, officials said. The blast occurred inside the mosque in the Police Lines area around 1.40 pm when worshippers, which included personnel of the police, army and bomb disposal squad - were offering the Zuhr (afternoon) prayers.