ಭಾರತದ ಮೊದಲ ಟ್ರಾನ್ಸ್‌ಜೆಂಡರ್ ದಂಪತಿಗೆ ಮಗು ನೋಡಲು ಕಾತರ ! ಆತನೀಗ ಎಂಟು ತಿಂಗಳ ತುಂಬು ಗರ್ಭಿಣಿ ! 

02-02-23 10:32 pm       HK News Desk   ದೇಶ - ವಿದೇಶ

ಭಾರತದಲ್ಲಿ ಇದೇ ಮೊದಲ ಬಾರಿಗೆ ಟ್ರಾನ್ಸ್‌ಜೆಂಡರ್ ದಂಪತಿ ಮಗುವನ್ನು ಪಡೆಯುತ್ತಿದ್ದಾರೆ. ಇಲ್ಲಿನ ಉಮ್ಮಲತ್ತೂರು ನಿವಾಸಿಗಳಾದ ಜಿಯಾ ಮತ್ತು ಸಹದ್ ಅವರು ಈ ದಾಖಲೆ ಪಟ್ಟಿಗೆ ಸೇರುತ್ತಿರುವ ದಂಪತಿ. 

ಕೋಝಿಕ್ಕೋಡ್‌, ಫೆ.2 : ಭಾರತದಲ್ಲಿ ಇದೇ ಮೊದಲ ಬಾರಿಗೆ ಟ್ರಾನ್ಸ್‌ಜೆಂಡರ್ ದಂಪತಿ ಮಗುವನ್ನು ಪಡೆಯುತ್ತಿದ್ದಾರೆ. ಇಲ್ಲಿನ ಉಮ್ಮಲತ್ತೂರು ನಿವಾಸಿಗಳಾದ ಜಿಯಾ ಮತ್ತು ಸಹದ್ ಅವರು ಈ ದಾಖಲೆ ಪಟ್ಟಿಗೆ ಸೇರುತ್ತಿರುವ ದಂಪತಿ. 

ಹೆಣ್ಣಾಗಿ ಹುಟ್ಟಿ ಗಂಡಾಗಿ ಬದಲಾಗಿದ್ದ ಸಹದ್ ಮತ್ತು ಗಂಡಾಗಿ ಹುಟ್ಟಿ ಹೆಣ್ಣಾಗಿ ಬದಲಾಗಿದ್ದ ಜಿಯಾ ಸಹ ಜೀವನ ನಡೆಸುತ್ತಿದ್ದಾರೆ. ಇವರು ಮಗುವನ್ನು ದತ್ತು ಪಡೆಯಲು ಮುಂದಾಗಿದ್ದರು. ಕಾನೂನು ಅಡ್ಡಿ ಬಂತೆಂದು ಪರ್ಯಾಯ ದಾರಿ ಹುಡುಕಿದ್ದಾರೆ.‌ ಸಹದ್ ಮೂಲತಃ ಹೆಣ್ಣಾಗಿದ್ದರಿಂದ ತಾನೇ ಯಾಕೆ ಗರ್ಭಧಾರಣೆಗೆ ಮುಂದಾಗಬಾರದು ಎನ್ನುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಪರೀಕ್ಷೆ ನಡೆಸಿದ ವೈದ್ಯರು ಆಕೆಯಿಂದ ಮಗುವನ್ನು ಹೆರಲು ಸಾಧ್ಯ ಎಂಬ ಸರ್ಟಿಫಿಕೇಟ್ ನೀಡಿದ್ದರು. ಮೊದಲಿಗೆ ಒಮ್ಮೆ ಕೈಬಿಟ್ಟು ಹೋಗಿದ್ದ ಸ್ತ್ರೀತ್ವಕ್ಕೆ ಮರಳುವುದು ಸವಾಲಾಗಿತ್ತು. ಆದರೆ ಸಿಯಾಳ ಪ್ರೀತಿ ಮತ್ತು ತಾಯಿಯಾಗಬೇಕೆಂಬ ಅದಮ್ಯ ಬಯಕೆ ಸಹದ್ ನಿರ್ಧಾರವನ್ನೇ ಬದಲಿಸಿತ್ತು. 

ಕೋಝಿಕ್ಕೋಡ್ ಮೆಡಿಕಲ್ ಕಾಲೇಜಿನ ವೈದ್ಯರ ಮಾರ್ಗದರ್ಶನದಲ್ಲಿ ತಜ್ಞ ಪರೀಕ್ಷೆಗಳನ್ನು ನಡೆಸಿ ಆರೋಗ್ಯ ಸಮಸ್ಯೆ ಇಲ್ಲ ಎಂದು ಖಚಿತಪಡಿಸಿಕೊಂಡ ನಂತರ ಚಿಕಿತ್ಸೆ ಆರಂಭಿಸಲಾಗಿತ್ತು. ಸಹದ್ ಹೆಣ್ಣಿನಿಂದ ಗಂಡಾಗಿ ಪರಿವರ್ತನೆಯಾದ ಸಂದರ್ಭದಲ್ಲಿ ಸ್ತನಗಳನ್ನು ತೆಗೆದುಹಾಕಲಾಗಿತ್ತು. ಆದರೆ ಗರ್ಭಾಶಯ ಇತ್ಯಾದಿಗಳನ್ನು ಬದಲಾಯಿಸಿರಲಿಲ್ಲ. ಹೀಗಾಗಿ ಮಗುವನ್ನು ಹೆರಿಗೆ ಮಾಡಲು ವೈದ್ಯರು ಒಪ್ಪಿದ್ದರು. 

ಈಗ ಎಂಟು ತಿಂಗಳ ತುಂಬು ಗರ್ಭಿಣಿಯಾಗಿರುವ ಸಹದ್ ಹೆರಿಗೆಯ ದಿನಾಂಕ ಮಾರ್ಚ್ 4 ಎಂದು ವೈದ್ಯರು ತಿಳಿಸಿದ್ದಾರೆ. ಸಿಯಾ ಒಬ್ಬ ನರ್ತಕಿಯಾಗಿದ್ದು ಸಹದ್ ಖಾಸಗಿ ಸಂಸ್ಥೆಯೊಂದರಲ್ಲಿ ಅಕೌಂಟೆಂಟ್ ಆಗಿದ್ದಾರೆ. ಇವರಿಬ್ಬರ ವಿಭಿನ್ನ ರೀತಿಯ ಪ್ರೇಮ ಕಥಾನಕ ಹೊಸ ಜೀವನಕ್ಕೆ ಹೊರಳುತ್ತಿದೆ.

Transgender couple Ziya and Zahad from Kozhikode Ummalathoor are now overwhelmed with joy and excitement. Zahad, was born a woman and transformed into a man, and Ziya was born a man and changed into a man, and Ziya was born a man and changed into a woman.The couple is now awaiting for the birth of their first child. Zahad would be the first transman father in India through conception