ಟೇಕಾಫ್‌ ಆದ ಕೆಲವೇ ನಿಮಿಷಗಳಲ್ಲಿ ಎಂಜಿನ್ ನಲ್ಲಿ ಬೆಂಕಿ ; ಅಬುಧಾಬಿಯಲ್ಲಿ ತುರ್ತು ಭೂಸ್ಪರ್ಶ, ಪ್ರಯಾಣಿಕರು ಸುರಕ್ಷಿತ

03-02-23 03:13 pm       HK News Desk   ದೇಶ - ವಿದೇಶ

ಟೇಕಾಫ್‌ ಆದ ಕೆಲವೇ ನಿಮಿಷಗಳಲ್ಲಿ ಎಂಜಿನ್‌ ವಿಫಲವಾಗಿದ್ದರಿಂದ ಏರ್‌ ಇಂಡಿಯಾ ವಿಮಾನವೊಂದು ಇಲ್ಲಿನ ಏರ್‌ಪೋರ್ಟ್‌ನಲ್ಲಿ ಶುಕ್ರವಾರ ತುರ್ತು ಲ್ಯಾಂಡ್ ಆಗಿದೆ. ಈ ವಿಮಾನವು ಅಬುಧಾಬಿಯಿಂದ ಕೋಯಿಕ್ಕೋಡ್‌ಗೆ ಹೊರಟಿತ್ತು.

ಅಬುಧಾಬಿ, ಫೆ.3: ಟೇಕಾಫ್‌ ಆದ ಕೆಲವೇ ನಿಮಿಷಗಳಲ್ಲಿ ಎಂಜಿನ್‌ ವಿಫಲವಾಗಿದ್ದರಿಂದ ಏರ್‌ ಇಂಡಿಯಾ ವಿಮಾನವೊಂದು ಇಲ್ಲಿನ ಏರ್‌ಪೋರ್ಟ್‌ನಲ್ಲಿ ಶುಕ್ರವಾರ ತುರ್ತು ಲ್ಯಾಂಡ್ ಆಗಿದೆ. ಈ ವಿಮಾನವು ಅಬುಧಾಬಿಯಿಂದ ಕೋಯಿಕ್ಕೋಡ್‌ಗೆ ಹೊರಟಿತ್ತು.

ಟೇಕಾಫ್‌ ಆಗಿ 1000 ಅಡಿ ಎತ್ತರ ಹಾರಿದ ಬಳಿಕ ಈ ಘಟನೆ ನಡೆದಿದೆ. ಸುದೈವವಶಾತ್‌ ಯಾವುದೇ ಸಾವು–ನೋವು ಉಂಟಾಗಿಲ್ಲ.

ವಿಮಾನದಲ್ಲಿ ಅಗ್ನಿ ಕಾಣಿಸಿಕೊಂಡಿದ್ದರಿಂದ ತುರ್ತು ಭೂಸ್ಪರ್ಶ ಮಾಡಲಾಗಿತ್ತು. 

BREAKING NEWS: Air India flight catches fire in air

184 ಪ್ರಯಾಣಿಕರಿದ್ದ ಬೋಯಿಂಗ್‌ 737–800 ವಿಮಾನದಲ್ಲಿ ಈ ದೋಷ ಕಂಡು ಬಂದಿದ್ದು, ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಎಂದು ವಿಮಾನ ಸಂಸ್ಥೆಯ ವಕ್ತಾರ ಪ್ರತಿಕ್ರಿಯಿಸಿದ್ದಾರೆ.

ಟೇಕಾಫ್‌ ವೇಳೆ ಒಂದು ಎಂಜಿನ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿ ಹೀಗಾಗಿದೆ ಎಂದು ವಿಮಾನಯಾನ ಸಂಸ್ಥೆ ಹೇಳಿದೆ.

Calicut-Bound Air India Express Flight Catches Fire, Returns To Abu Dhabi  Airport; All Passengers Safe

ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಹೇಳಿಕೆಯಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ B737-800 ವಿಮಾನ VT-AYC ಆಪರೇಟಿಂಗ್ ಫ್ಲೈಟ್ IX 348 (ಅಬುಧಾಬಿ-ಕ್ಯಾಲಿಕಟ್) ತಾಂತ್ರಿಕ ದೋಶಕ್ಕೆ ಕಾರಣವನ್ನು ಪತ್ತೆ ಹಚ್ಚಲಾಗುತ್ತಿದೆ.

A Kozhikode-bound Air India Express flight from Abu Dhabi landed back at the airport as flames were detected in one of the engines soon after take-off, the Directorate General of Civil Aviation said on Friday. Air India Express said that the aircraft landed safely and all passengers are safe. According to DGCA, 184 passengers were onboard when the flight took off.