ಬಾಂಗ್ಲಾದೇಶದಲ್ಲಿ 14 ಹಿಂದು ದೇವಾಲಯಗಳ ಧ್ವಂಸ; ರಾತ್ರೋರಾತ್ರಿ ದಿಢೀರ್ ದಾಳಿ, ವಿಗ್ರಹಗಳಿಗೆ ಹಾನಿಗೈದು ಕೆರೆಗೆ ಎಸೆದ ಕಿಡಿಗೇಡಿಗಳು 

06-02-23 10:53 am       HK News Desk   ದೇಶ - ವಿದೇಶ

ಬಾಂಗ್ಲಾದೇಶದಲ್ಲಿ 14 ಹಿಂದೂ ದೇವಾಲಯಗಳನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ವಾಯುವ್ಯ ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯಗಳ ಮೇಲೆ ಶನಿವಾರ ರಾತ್ರಿ ಸರಣಿ ದಾಳಿ ನಡೆಸಿದ್ದಾರೆ.

ಢಾಕಾ, ಫೆ.6: ಬಾಂಗ್ಲಾದೇಶದಲ್ಲಿ 14 ಹಿಂದೂ ದೇವಾಲಯಗಳನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ವಾಯುವ್ಯ ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯಗಳ ಮೇಲೆ ಶನಿವಾರ ರಾತ್ರಿ ಸರಣಿ ದಾಳಿ ನಡೆಸಿದ್ದಾರೆ.  

ಬಾಂಗ್ಲಾದೇಶದಲ್ಲಿ 14 ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆದಿದ್ದು, ವಿಗ್ರಹಗಳನ್ನು ಧ್ವಂಸ ಮಾಡಲಾಗಿದೆ. ಘಟನೆಯ ನಂತರ, ಬಾಂಗ್ಲಾದೇಶದಲ್ಲಿ ವಾಸಿಸುವ ಹಿಂದೂಗಳು ತಮ್ಮ ಜೀವ ಮತ್ತು ಆಸ್ತಿಯ ಬಗ್ಗೆ ಭಯಭೀತರಾಗಿದ್ದಾರೆ. ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸಿ ಹಿಂದೂಗಳಿಗೆ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

Miscreants ransacked 14 Hindu temples in northwestern Banglade...

Bangladesh: Miscreants Vandalise 14 Hindu Temples In A Series Of Attacks

Miscreants vandalise 14 Hindu temples in northwestern Bangladesh- The New  Indian Express

ವರದಿ ಪ್ರಕಾರ, ವಿಧ್ವಂಸಕ ಘಟನೆಯು ಬಾಂಗ್ಲಾದೇಶದ ವಾಯುವ್ಯ ಪ್ರದೇಶದ ಠಾಕೂರ್ಗಾಂವ್ ಪರಿಸರದಲ್ಲಿ ನಡೆದಿದೆ. ಗ್ರಾಮದಲ್ಲಿ ವಾಸಿಸುವ ಹಿಂದೂ ಸಮುದಾಯದ ಮುಖಂಡ ಬಿದ್ಯನಾಥ್ ಬರ್ಮನ್ ಪ್ರಕಾರ, ಶನಿವಾರ ರಾತ್ರಿ ಮತ್ತು ಭಾನುವಾರದ ನಸುಕಿನಲ್ಲಿ ಅಪರಿಚಿತರು ಕತ್ತಲಿನ ಸಮಯದಲ್ಲಿ ದೇವಾಲಯಗಳ ಮೇಲೆ ಯೋಜಿತ ರೀತಿಯಲ್ಲಿ ದಾಳಿ ನಡೆಸಿದ್ದಾರೆ. ಕೋಲು ಮತ್ತಿತರ ಆಯುಧಗಳೊಂದಿಗೆ ಬಂದ ದುಷ್ಕರ್ಮಿಗಳು 14 ದೇವಸ್ಥಾನಗಳನ್ನು ಧ್ವಂಸಗೊಳಿಸಿದ್ದಾರೆ. ಈ ಸಂದರ್ಭದಲ್ಲಿ, ಅನೇಕ ವಿಗ್ರಹಗಳನ್ನು ಮುರಿದು ಕೆರೆ, ಕೊಳಕ್ಕೆ ಎಸೆದಿದ್ದಾರೆ.

14 Hindu Temples Vandalised In Northwestern Bangladesh As Miscreants  Destroy Idols

Miscreants vandalise 14 Hindu temples in northwestern Bangladesh - India  Today

ದೇವಾಲಯಗಳ ಮೇಲೆ ದಾಳಿ ನಡೆಸಿದವರು ಯಾರು ಎಂಬುದು ಇನ್ನೂ ಪತ್ತೆಯಾಗಿಲ್ಲ ಎಂದು ಬರ್ಮನ್ ಹೇಳಿದ್ದಾರೆ. ಕತ್ತಲೆಯಿಂದಾಗಿ ಯಾರೂ ಅವರನ್ನು ನೋಡಲಿಲ್ಲ. ಘಟನೆ ಬೆಳಕಿಗೆ ಬಂದಿದ್ದರಿಂದ ಈ ಪ್ರದೇಶದಲ್ಲಿ ವಾಸಿಸುವ ಹಿಂದೂಗಳು ತಮ್ಮ ಸುರಕ್ಷತೆಯ ಬಗ್ಗೆ ಚಿಂತಿತರಾಗಿದ್ದಾರೆ ಮತ್ತು ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಈ ಪ್ರದೇಶದಲ್ಲಿ ಶಾಂತಿ ನೆಲೆಸಿತ್ತು. ಮುಸ್ಲಿಂ ಬಾಂಧವರೊಂದಿಗೆ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ. ಈವರೆಗೂ ಈ ರೀತಿಯ ಘಟನೆ ಇಲ್ಲಿ ನಡೆದದ್ದಿಲ್ಲ. ಇಲ್ಲಿ ಮುಸ್ಲಿಮರು ಮೆಜಾರಿಟಿ ಇದ್ದರೂ, ನಾವು ಸೌಹಾರ್ದ ಹೊಂದಿದ್ದೆವು. ಇದು ಯಾರೋ ಕಿಡಿಗೇಡಿಗಳು ಸಾನರಸ್ಯ ಕದಡುವುದಕ್ಕಾಗಿ ನಡೆಸಿರುವ ಕೃತ್ಯ ಎಂದು ಹಿಂದು ಸಮುದಾಯದ ನಾಯಕ ಸಮರ್ ಚಟರ್ಜಿ ಹೇಳಿದ್ದಾರೆ.

14 Hindu temples were vandalised by unidentified miscreants in northwestern Bangladesh in a series of orchestrated attacks overnight, police said on Sunday, as reported by the news agency PTI. "Unidentified people carried out the attacks under the cover of darkness, vandalising idols in 14 temples in three unions (lowest local government tier)," said Bidyanath Barman, a Hindu community leader at Baliadangi) “upazila” or “sub-district” in Thakurgaon.