ಬ್ರೇಕಿಂಗ್ ನ್ಯೂಸ್
28-02-26 01:08 pm HK News Desk ದೇಶ - ವಿದೇಶ
ಚೆನ್ನೈ, ಫೆ.28: ನಟ ಮತ್ತು ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್ ಪತ್ನಿ ಸಂಗೀತಾ ಅವರು ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆ ಮೂಲಕ ನಟನ ಜೊತೆಗಿನ 27 ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸಲು ನಿರ್ಧರಿಸಿದ್ದಾರೆ. ಇತ್ತೀಚೆಗೆ ವಿಜಯ್, ತ್ರಿಶಾ ಎಂಬ ನಟಿಯೊಂದಿಗೆ ಸಂಬಂಧ ಹೊಂದಿದ್ದಾರೆಂದು ಗಂಭೀರ ಆರೋಪ ಕೇಳಿಬಂದಿತ್ತು. ಇದರ ಬೆನ್ನಲ್ಲೇ ವಿಜಯ್- ಸಂಗೀತಾ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿದೆ.
1999ರ ಆಗಸ್ಟ್ನಲ್ಲಿ ವಿವಾಹವಾಗಿದ್ದ ವಿಜಯ್ - ಸಂಗೀತಾ ದಂಪತಿಗೆ ಜೇಸನ್ ಸಂಜಯ್ ಮತ್ತು ದಿವ್ಯಾ ಶಶಾ ಎಂಬ ಇಬ್ಬರು ಮಕ್ಕಳಿದ್ದಾರೆ. ವಿಜಯ್ ಅವರು ನಟಿಯೊಂದಿಗಿನ ಸಂಬಂಧವನ್ನು ನಿಲ್ಲಿಸುತ್ತೇನೆ ಅಂತ ಭರವಸೆ ಕೊಟ್ಟಿದ್ದರು. ಆದರೆ, ಅದು ಹಾಗೆಯೇ ಮುಂದುವರಿದಿದೆ ಎಂದು ಅರ್ಜಿಯಲ್ಲಿ ಸಂಗೀತಾ ಆಕ್ಷೇಪಿಸಿದ್ದಾರೆ.
ಪತಿ ನನ್ನನ್ನು ಸಾಮಾಜಿಕ ಮತ್ತು ವೃತ್ತಿಪರ ಜೀವನದಿಂದ ದೂರ ಇಟ್ಟಿದ್ದಾರೆ. ವಿದೇಶ ಪ್ರವಾಸ ಮಾಡುವುದು ಮತ್ತು ಆ ನಟಿಯೊಂದಿಗೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನು ಮುಂದುವರಿಸಿದ್ದಾರೆ. ಈ ಪ್ರವಾಸದ ಫೋಟೊಗಳನ್ನು ನಟಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಇದರಿಂದ ನನಗೆ ಮತ್ತು ಮಕ್ಕಳಿಗೆ ಅವಮಾನವಾಗಿದೆ ಎಂದು ವಿಜಯ್ ಪತ್ನಿ ಆರೋಪಿಸಿದ್ದಾರೆ.

ಲಂಡನ್ ಮೂಲದ ತಮಿಳುನಾಡು ಮೂಲದ ಉದ್ಯಮಿಯ ಪುತ್ರಿಯಾಗಿರುವ ಸಂಗೀತಾ ಅವರನ್ನು 1999ರ ಆಗಸ್ಟ್ 25ರಂದು ವಿಜಯ್ ವಿವಾಹವಾಗಿದ್ದರು. ಇದಕ್ಕೂ ಮೊದಲು ಸಂಗೀತಾ, ವಿಜಯ್ ಅವರ ಕಟ್ಟಾ ಅಭಿಯಾನಿಯಾಗಿದ್ದರು. ವಿಜಯ್ ಸಿನಿಮಾಗಳಿಂದ ಪ್ರಭಾವಿತರಾಗಿ ಬೆನ್ನು ಬಿದ್ದು ಬಳಿಕ ಮದುವೆಯಾಗಿದ್ದರು. ಸಂಗೀತಾ ಹಿಂದುವಾಗಿದ್ದು ವಿಜಯ್ ಕ್ರಿಸ್ತಿಯನ್ ಸಂಪ್ರದಾಯದವರಾಗಿದ್ದು ಇಬ್ಬರ ವಿವಾಹವು ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ನಡೆದಿತ್ತು. ಮದುವೆ ಬಳಿಕ ಸಂಗೀತಾ ಚೆನ್ನೈನಲ್ಲಿಯೇ ನೆಲೆಸಿದ್ದರು.
ಹಲವು ಸಮಯದ ವಿರಸದ ಬಳಿಕ ಸಂಗೀತಾ ಕಳೆದ ಡಿ.5ರಂದು ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು ತಡವಾಗಿ ಸುದ್ದಿಯಾಗಿದೆ. ಆದರೆ ಈ ಬಗ್ಗೆ ವಿಜಯ್ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಇದೇ ವೇಳೆ, ಜ್ಯೋತಿಷಿ ಪ್ರಶಾಂತ್ ಕಿಣಿಯವರು ಈಗಲ್ಲದಿದ್ದರೂ ಮುಂದಿನ ಬಾರಿಯಾದರೂ ವಿಜಯ್ ಅವರು ತಮಿಳುನಾಡು ಮುಖ್ಯಮಂತ್ರಿ ಆಗಲಿದ್ದಾರೆ. 2030ರ ಬಳಿಕ ದೊಡ್ಡ ಸಕ್ಸಸ್ ಸಿಗಲಿದೆ ಎಂದಿದ್ದಾರೆ. ಆದರೆ ಚುನಾವಣೆ ಹೊತ್ತಲ್ಲೇ ವಿಚ್ಚೇದನ ಸುದ್ದಿಯಾಗಿದ್ದು ಯಾವ ರೀತಿಯ ಪರಿಣಾಮ ಬೀರುತ್ತೆ ನೋಡಬೇಕು.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
26-07-26 09:57 pm
HK News Desk
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
27-07-26 01:09 pm
HK News Staffer
ಸಮಾಜ ಸೇವೆಯ ಹೆಸರಲ್ಲಿ ಡ್ರಗ್ಸ್ ದಂಧೆ ; ಜಲೀಲ್ ಬಾಬಾ...
27-07-26 11:47 am
ಡೆಲ್ಲಿ ಟು ಮಂಗಳೂರು ಡ್ರಗ್ ನೆಟ್ವರ್ಕ್ ; ಪೊಲೀಸರ ಕಣ...
26-07-26 04:30 pm
ಶಾಲಾ ಬಸ್ಸಿಗೆ ಮರ ಬಿದ್ದು ಮಗು ಸಾವು ಪ್ರಕರಣ ; ಬಸ್ಸ...
25-07-26 07:36 pm
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm