ಪಾಕಿಸ್ತಾನದಲ್ಲಿ ಭೀಕರ ರಸ್ತೆ ಅಪಘಾತ, ಬಸ್‌ – ಕಾರು ನಡುವೆ ಢಿಕ್ಕಿ ; 30 ಮಂದಿ ಸಾವು 

08-02-23 08:09 pm       HK News Desk   ದೇಶ - ವಿದೇಶ

ಬಸ್‌ – ಕಾರು ನಡುವೆ ಢಿಕ್ಕಿ ಸಂಭವಿಸಿ ಕನಿಷ್ಠ 30 ಮಂದಿ ಮೃತಪಟ್ಟು, 15 ಮಂದಿ ಗಾಯಗೊಂಡ ಘಟನೆ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದ ಕೊಹಿಸ್ತಾನ್ ಜಿಲ್ಲೆಯಲ್ಲಿ ನಡೆದಿದೆ.

ಕರಾಚಿ, ಫೆ.8 : ಬಸ್‌ – ಕಾರು ನಡುವೆ ಢಿಕ್ಕಿ ಸಂಭವಿಸಿ ಕನಿಷ್ಠ 30 ಮಂದಿ ಮೃತಪಟ್ಟು, 15 ಮಂದಿ ಗಾಯಗೊಂಡ ಘಟನೆ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದ ಕೊಹಿಸ್ತಾನ್ ಜಿಲ್ಲೆಯಲ್ಲಿ ನಡೆದಿದೆ.

ಬಸ್‌ ಗಿಲ್ಗಿಟ್‌ನಿಂದ ರಾವಲ್ಪಿಂಡಿಗೆ ಬರುತ್ತಿತ್ತು, ಈ ವೇಳೆ ಎದುರುಗಡೆ ಬಂದ ಕಾರಿಗೆ ಮುಖಾಮುಖಿ ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ಪರಿಣಾಮ ಕಾರು ಹಾಗೂ ಬಸ್ ಎರಡೂ ಆಳವಾದ ಕಂದಕಕ್ಕೆ ಉರುಳಿ ಬಿದ್ದಿದೆ. ಇದರಿಂದ ಕನಿಷ್ಠ 30 ಮಂದಿ ಮೃತಪಟ್ಟಿದ್ದಾರೆ. ಅಪಘಾತದ ತೀವ್ರತೆಗೆ 15 ಕ್ಕೂ ಹೆಚ್ಚಿನ ಮಂದಿ ಗಾಯಗೊಂಡಿದ್ದಾರೆ.

30 dead after bus, car collide and fall into ravine in Pakistan's Khyber  Pakhtunkhwa

ಘಟನೆ ನಡೆದ ಕೆಲ ಸಮಯದ ಬಳಿಕ ರಕ್ಷಣಾ ಕಾರ್ಯಚರಣೆ ಆರಂಭಿಸಿ, ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪಾಕ್‌ ಪ್ರಧಾನಿ ಶೆಹಬಾಜ್ ಷರೀಫ್ ಮೃತರಿಗೆ ಸಂತಾಪ ಸೂಚಿಸಿ, ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಕೂಡಲೇ ತಲುಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಪಾಕಿಸ್ತಾನದಲ್ಲಿ ರಸ್ತೆ ಅಪಘಾತಗಳು ಇತ್ತೀಚೆಗೆ ಸಾಮಾನ್ಯವಾಗಿದ್ದು, ಕಳಪೆ ರಸ್ತೆಗಳು, ಕಳಪೆ ನಿರ್ವಹಣೆಯಿಂದ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿವೆ. ಕಳೆದ ತಿಂಗಳು, ಬಲೂಚಿಸ್ತಾನದ ಲಾಸ್ಬೆಲಾದಲ್ಲಿ ಪ್ರಯಾಣಿಕರ ಕೋಚ್ ಕಂದಕಕ್ಕೆ ಬಿದ್ದು ಕನಿಷ್ಠ 41 ಜನರು ಸಾವನ್ನಪ್ಪಿದ್ದರು.

At least 30 people were killed and 15 were injured when a passenger bus and a car plunged into a deep ravine after colliding with each other in the Kohistan district of Khyber Pakhtunkhwa on Tuesday, Geo News reported. Police said the passenger bus was heading to Rawalpindi from Gilgit when it collided head-on with the car coming from the opposite side in the Shitial area of the province.