ರಾಜ್ಯಸಭೆಯಲ್ಲಿ ಮೋದಿ- ಅದಾನಿ ಭಾಯಿ ಭಾಯಿ ಘೋಷಣೆ ; ಕೆಸರೆರಚಿದಷ್ಟೂ ಕಮಲ ಅರಳುತ್ತದೆ ಎಂದ ಮೋದಿ

09-02-23 07:01 pm       HK News Desk   ದೇಶ - ವಿದೇಶ

ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಭಾಷಣ ಮಾಡುತ್ತಿದ್ದಾಗ ಪ್ರತಿಪಕ್ಷ ಸದಸ್ಯರು ಮೋದಿ- ಅದಾನಿ ಭಾಯಿ ಭಾಯಿ ಎಂದು ಘೋಷಣೆ ಕೂಗಿದ್ದಾರೆ.

ನವದೆಹಲಿ, ಫೆ.9: ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಭಾಷಣ ಮಾಡುತ್ತಿದ್ದಾಗ ಪ್ರತಿಪಕ್ಷ ಸದಸ್ಯರು ಮೋದಿ- ಅದಾನಿ ಭಾಯಿ ಭಾಯಿ ಎಂದು ಘೋಷಣೆ ಕೂಗಿದ್ದಾರೆ. ಪ್ರಧಾನಿ ಭಾಷಣದುದ್ದಕ್ಕೂ ಕಾಂಗ್ರೆಸ್, ಡಿಎಂಕೆ, ಟಿಎಂಸಿ ಸಂಸದರು ಸದನದ ಬಾವಿಗಿಳಿದು ಮೋದಿ – ಅದಾನಿ ಭಾಯಿ ಭಾಯಿ ಎಂದು ಘೋಷಣೆ ಕೂಗಿದ್ದಾರೆ.

ಇದೇ ವೇಳೆ, ಮೋದಿ ಪ್ರತಿಭಟನಾಕಾರರಿಗೆ ಪ್ರತಿಯಾಗಿ ಕವನವನ್ನು ಓದಿ ಟಾಂಗ್ ನೀಡಿದ್ದಾರೆ. ನಿಮ್ಮಲ್ಲಿ ಕೆಸರು ಇದೆ, ನನ್ನಲ್ಲಿ ಗುಲಾಬ್ ಇದೆ, ನೀವು ಎಷ್ಟೇ ಕೆಸರು ಎರಚಿದರೂ, ಅಲ್ಲೆಲ್ಲೆ ಕಮಲ ಅರಳುತ್ತದೆ ಎನ್ನುವ ಕವನವನ್ನು ಹೇಳಿದರು. ಆಮೂಲಕ ನಿಮ್ಮ ಕೆಸರೆರಚಾಟಕ್ಕೆ ಎದೆಗುಂದಲ್ಲ, ಇದರಿಂದ ಕಮಲ ಮತ್ತಷ್ಟು ಅರಳುತ್ತದೆ ಅನ್ನುವುದನ್ನು ಮೋದಿ ಸದನದಲ್ಲಿ ಹೇಳಿದ್ದಾರೆ.

Gautam Adani loses top India billionaire spot to Mukesh Ambani amid selloff  in Adani group stocks - BusinessToday

ಇತ್ತೀಚೆಗೆ ಉದ್ಯಮಿ ಗೌತಮ್ ಅದಾನಿ ಬಗ್ಗೆ ಅಮೆರಿಕದ ಕಂಪನಿ ನೀಡಿರುವ ವರದಿ ಜಂಟಿ ಸದನ ಸಮತಿಯಿಂದ ತನಿಖೆಗೆ ಒತ್ತಾಯಿಸಿ ಪ್ರತಿಪಕ್ಷಗಳು ಕಳೆದ ಮೂರು ದಿನಗಳಿಂದಲೂ ಪ್ರತಿಭಟನೆ ನಡೆಸುತ್ತಿದ್ದವು. ಆದರೆ, ಜಂಟಿ ಸದನ ಸಮಿತಿಯ ತನಿಖೆಯಾಗಲೀ, ಸದನದಲ್ಲಿ ಆ ಕುರಿತು ಚರ್ಚೆ ನಡೆಸುವುದಕ್ಕಾಗಲೀ ಬಿಜೆಪಿ ಸರಕಾರ ಒಪ್ಪಿಗೆ ನೀಡಿರಲಿಲ್ಲ.

Supreme Court: Latest news, Updates, Photos, Videos and more.

ಅದಾನಿ ಉದ್ಯಮದ ತನಿಖೆಗೆ ಸುಪ್ರೀಂಗೆ ಅರ್ಜಿ

ಇದೇ ವೇಳೆ, ಅದಾನಿ ಉದ್ಯಮದ ಕುರಿತು ಹಿಂಡನ್ ಬರ್ಗ್ ನೀಡಿರುವ ವರದಿ ಕುರಿತು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಬೇಕೆಂದು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಕೆಯಾಗಿದೆ. ವಕೀಲ ವಿಶಾಲ್ ತಿವಾರಿ ಸಲ್ಲಿಸಿರುವ ಅರ್ಜಿಯನ್ನು ತನಿಖೆ ಮಾಡಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದ್ದು, ಶುಕ್ರವಾರ ವಿಚಾರಣೆ ನಡೆಸಲಿದೆ. ನ್ಯಾ.ಡಿವೈ ಚಂದ್ರಚೂಡ್ ನೇತೃತ್ವದ ಪೀಠಕ್ಕೆ ಸಾರ್ವಜನಿಕ ಹಿತಾಸಕ್ತಿಯ ಈ ಅರ್ಜಿ ಸಲ್ಲಿಕೆಯಾಗಿತ್ತು. ಇದಲ್ಲದೆ, ಕಾರ್ಪೊರೇಟ್ ಸಂಸ್ಥೆಗಳಿಗೆ ನೀಡಲಾಗುವ 500 ಕೋಟಿಗೂ ಹೆಚ್ಚಿನ ಮೊತ್ತದ ಸಾಲದ ಮಂಜೂರಾತಿ ನೀತಿಯನ್ನು ಮೇಲ್ವಿಚಾರಣೆ ಮಾಡಲು ಪ್ರತ್ಯೇಕ ಸಮಿತಿಯನ್ನು ರಚಿಸಬೇಕೆಂದೂ ಅರ್ಜಿಯಲ್ಲಿ ವಿಶಾಲ್ ಕೋರಿದ್ದಾರೆ. 

As Prime Minister Narendra Modi began addressing the Rajya Sabha, the Opposition began raising slogans of ‘Modi-Adani bhai bhai’. However, the PM remained undeterred and took a jibe at the protesting lawmakers with poetic lines.“Keechad uske paas tha, mere paas gulaal. Jo jiske paas tha, diya usne woh uchaal (They had mud, I had colours. Whosoever had whatever they flung in the air)," PM Modi said, adding “jitna keechad uchaaloge, kamal utna hi khilega" (the more mud-slinging, the more number of lotus will bloom).