ಪುಲ್ವಾಮಾ ದಾಳಿಗೆ 4 ವರ್ಷ ; ಫೆ.14 ರ ಆ ದಿನ ನಡೆದಿದ್ದಾದರು ಏನು? ವೀರರ ಮರಣಕ್ಕೆ ಭಾರತ ಸೇಡು ತೀರಿಸಿಕೊಂಡಿದ್ದು ಹೇಗೆ ?

14-02-23 12:15 pm       HK News Desk   ದೇಶ - ವಿದೇಶ

ಇಲ್ಲಿಗೆ ಸರಿಯಾಗಿ ನಾಲ್ಕು ವರ್ಷಗಳ ಹಿಂದೆ, ಇಡೀ ಜಗತ್ತು ಪ್ರೇಮಿಗಳ ದಿನವನ್ನು ಆಚರಿಸುವ ಸಂದರ್ಭದಲ್ಲೇ ಜಮ್ಮು ಕಾಶ್ಮೀರದ ಫುಲ್ವಾಮಾದಲ್ಲಿ ರಕ್ತದ ಕೋಡಿ ಹರಿದಿತ್ತು.

ಹೊಸದಿಲ್ಲಿ, ಫೆ.14: ಇಲ್ಲಿಗೆ ಸರಿಯಾಗಿ ನಾಲ್ಕು ವರ್ಷಗಳ ಹಿಂದೆ, ಇಡೀ ಜಗತ್ತು ಪ್ರೇಮಿಗಳ ದಿನವನ್ನು ಆಚರಿಸುವ ಸಂದರ್ಭದಲ್ಲೇ ಜಮ್ಮು ಕಾಶ್ಮೀರದ ಫುಲ್ವಾಮಾದಲ್ಲಿ ರಕ್ತದ ಕೋಡಿ ಹರಿದಿತ್ತು. ಆ ದಿನ, ಜಮ್ಮು- ಶ್ರೀನಗರ ನಡುವಿನ 44ನೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಕೇಂದ್ರೀಯ ಮೀಸಲು ಪಡೆಯ ಯೋಧರು ತೆರಳುತ್ತಿದ್ದ ಬಸ್ ಗಳ ಮೇಲೆ ಉಗ್ರರು ಆತ್ಮಹತ್ಯಾ ಬಾಂಬಾ ದಾಳಿ ನಡೆಸಿದ್ದರು. ಪುಲ್ವಾಮಾ ಜಿಲ್ಲೆಯ ಲೇತಾಪೊರಾ ಎಂಬಲ್ಲಿ ನಡೆದಿದ್ದ ಈ ದಾಳಿಯಲ್ಲಿ ಸುಮಾರು 40 ಸಿಆರ್ ಪಿಎಫ್ ಯೋಧರು ಮೃತಪಟ್ಟಿದ್ದರು. ಇದು 1989ರ ನಂತರ ಜಮ್ಮು ಕಾಶ್ಮೀರದಲ್ಲಿ ನಡೆದ ಅತಿ ಭೀಕರ ದಾಳಿ ಎಂದು ಪರಿಗಣಿಸಲ್ಪಟ್ಟಿದೆ.

ಪಾಕಿಸ್ತಾನ ಮೂಲದ ಜೈಶ್ ಎ ಮೊಹಮ್ಮದ್ ಎಂಬ ಸಂಘಟನೆ ಈ ದಾಳಿಯ ಹೊಣೆ ಹೊತ್ತಿತ್ತು. ವರ್ಷದ ಹಿಂದೆ ತನ್ನಲ್ಲಿ ಸೇರ್ಪಡೆಗೊಂಡಿದ್ದ ಕಾಶ್ಮೀರ ಕಣಿವೆಯ ಕಾಕಪೋರಾ ಎಂಬಲ್ಲಿ ನಡೆಯುತ್ತಿದ್ದ ಆದಿಲ್ ಅಹಮದ್ ಎಂಬಾತ (22) ಆತ್ಮಹತ್ಯಾ ದಾಳಿಯನ್ನು ನಡೆಸಿದ್ದಾನೆ ಎಂದು ಆ ಸಂಘಟನೆ ಆತನದ್ದೊಂದು ಹಳೆಯ ವಿಡಿಯೋವನ್ನು ರಿಲೀಸ್ ಮಾಡಿತ್ತು. ಆದರೆ, ಪಾಕಿಸ್ತಾನ ಮಾತ್ರ ತನ್ನ ಹಳೆಯ ಚಾಳಿಯನ್ನು ಮುಂದುವರಿಸಿ ಈ ಕೃತ್ಯಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದಿತು.

Narendra Modi: Army to decide time, place of response: PM Modi on Pulwama  attacks | India News - Times of India

ಇದು ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಉಗ್ರ ನಿಗ್ರಹ ಪಣಕ್ಕೆ ಸವಾಲೊಡ್ಡುವಂಥ ಘಟನೆಯಾಗಿತ್ತು. ಇದನ್ನು ಮೋದಿ ಸರ್ಕಾರ ಗಂಭೀರವಾಗಿ ಪರಿಗಣಿಸಿತು. ಗುಪ್ತಚರ ಮಾಹಿತಿಯನ್ನು ಬಳಸಿಕೊಂಡು ಕಾಶ್ಮೀರದಲ್ಲೇ ಅಡಗಿದ್ದ ಪುಲ್ವಾಮಾ ವಿಧ್ವಂಸಕೋರರ ಬೇಟೆಗೆ ಸಿದ್ಧವಾಯಿತು. ಉಗ್ರರ ಅಡಗುದಾಣಗಳನ್ನು ನಿಖರವಾಗಿ ಗುರುತಿಸಿ, ಸಿಆರ್ ಪಿಎಫ್ ಹಾಗೂ 55 ರಾಷ್ಟ್ರೀಯ ರೈಫಲ್ಸ್ ನ ಜಂಟಿ ಪಡೆಯೊಂದನ್ನು ರಚಿಸಿ, ಫೆ. 18ರಂದು ಪುಲ್ವಾಮಾ ವಿಧ್ವಂಸಕೋರರ ಬೇಟೆಗೆ ಕಳುಹಿಸಿತು. ಫುಲ್ವಾಮಾದಲ್ಲಿ ಇಬ್ಬರು ಯೋಧರು ಮೃತಪಟ್ಟರು.

Profile in terror: List of terror attacks carried out by Masood Azhar and  his Jaish-e-Mohammad | India News,The Indian Express

ಫೆ. 26ರಂದು, ಭಾರತೀಯ ವಾಯುಪಡೆಗೆ ಸೇರಿದ 12 ಮಿರಾಜ್ 2000 ಮಾದರಿಯ ಯುದ್ಧ ವಿಮಾನಗಳು, ಭಾರತ - ಪಾಕಿಸ್ತಾನ ನಡುವಿನ ಗಡಿ ರೇಖೆಯನ್ನು ದಾಟಿ (ಎಲ್ಒಸಿ), ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಬಾಲಾಕೋಟ್ ನಲ್ಲಿದ್ದ ಜೈಶ್-ಎ- ಮೊಹಮ್ಮದ್ ಸಂಘಟನೆಯ ಉಗ್ರ ತರಬೇತಿ ಕೇಂದ್ರದ ಮೇಲೆ ವೈಮಾನಿಕ ದಾಳಿ ನಡೆಸಿತು. ಇದರಲ್ಲಿ 300ರಿಂದ 350 ಉಗ್ರರು ಹತರಾದರು.

IAF Air Strike in Pakistan Highlights: Pak summons India's envoy | India  News,The Indian Express

ಇದಕ್ಕೆ ಪ್ರತೀಕಾರ ಎಂಬಂತೆ, ಫೆ. 27ರಂದು ಪಾಕಿಸ್ತಾನದ ವಾಯುಪಡೆಯ ವಿಮಾನಗಳು ಭಾರತದ ಮೇಲೆ ದಾಳಿ ನಡೆಸಲು ಎಲ್ಒಸಿ ದಾಟಿ ಬಂದವು. ಅವುಗಳನ್ನು ಹಿಮ್ಮೆಟ್ಟಿಸಲು ಭಾರತದ ಮಿಗ್ - 21 ವಿಮಾನಗಳಲ್ಲಿ ಭಾರತೀಯ ಯೋಧರು ಆಗಸಕ್ಕೆ ನೆಗೆದಿದ್ದರು. ಅವುಗಳಲ್ಲೊಂದನ್ನು ಪಾಕಿಸ್ತಾನ ಸೇನೆಯು ಹೊಡೆದುರುಳಿಸಿತು. ಅದರಲ್ಲಿದ್ದ ವಿಂಗ್ ಕಮಾಂಡರ್ ನನ್ನು ಸೆರೆ ಹಿಡಿಯಿತು. ಆದರೆ, ಮೋದಿ ಸರ್ಕಾರದ ಪ್ರಯತ್ನದಿಂದಾಗಿ ಪಾಕಿಸ್ತಾನದ ಮೇಲೆ ಅಂತಾರಾಷ್ಟ್ರೀಯ ಒತ್ತಡ ಹೆಚ್ಚಾಯಿತು. ಇದರಿಂದಾಗಿ, ಪಾಕಿಸ್ತಾನ ಸರ್ಕಾರ ಆತನನ್ನು ಬಿಡುಗಡೆ ಮಾಡಿತು.

Remembering Our Heroes: PM Narendra Modi's Tribute On Pulwama Attack  Anniversary

NIA raids NGOs in Kashmir, Delhi in terror funding case

ಫುಲ್ವಾಮಾ ದಾಳಿಯ ಷಡ್ಯಂತ್ರ ರೂಪಿಸಿದವರನ್ನು ಹಾಗೂ ಅದಕ್ಕೆ ಸಹಕಾರ ನೀಡಿದವರನ್ನು ಭಾರತ ಹೆಡೆಮುರಿ ಕಟ್ಟುವಲ್ಲಿ ಸಫಲವಾಯಿತು. ಬಾಲಾಕೋಟ್ ನಲ್ಲಿ ದಾಳಿ ನಡೆಸಿತು. ಆದರೆ, ಸ್ಫೋಟಕದ ಮೂಲ ಮಾತ್ರ ಪತ್ತೆಯಾಗಲಿಲ್ಲ. 2020ರ ಆಗಸ್ಟ್ ನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತನ್ನ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು. 2021ರ ಆಗಸ್ಟ್ ನಲ್ಲಿ ಫುಲ್ವಾಮಾ ದಾಳಿಗೆ ಸಂಬಂಧಿಸಿದ ಇನ್ನೂ ಏಳು ಉಗ್ರರನ್ನು ಭದ್ರತಾ ಪಡೆಗಳು ಕಾಶ್ಮೀರದಲ್ಲಿ ಹೊಸಕಿಹಾಕಿದವು. ಇನ್ನೂ ಏಳು ಮಂದಿಯನ್ನು ಬಂಧಿಸಲಾಯಿತು.

Leaving the video message of ‘Don’t fall in love', a brainwashed youth rammed up an explosive laden vehicle into a CRPF convoy killing 40 CRPF personnel in Jammu and Kashmir on Valentine's Day on February 14, 2019.