ಅದಾನಿ ಸಮೂಹದ ಬಗ್ಗೆ ಮುಚ್ಚಿಡುವಂಥದ್ದೇನೂ ಇಲ್ಲ ; ದಾಖಲೆ ಇದ್ದರೆ ಕೋರ್ಟಿಗೆ ಹೋಗಲಿ ಎಂದ ಅಮಿತ್ ಷಾ 

14-02-23 01:10 pm       HK News Desk   ದೇಶ - ವಿದೇಶ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅದಾನಿ ಸಮೂಹದ ಕಂಪನಿಗಳಿಗೆ ರಕ್ಷಣೆ ನೀಡುತ್ತಿದೆ ಎಂದು ವಿರೋಧ ಪಕ್ಷಗಳ ಆರೋಪಗಳಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಪ್ರತಿಕ್ರಿಯಿಸಿದ್ದಾರೆ.

ನವದೆಹಲಿ, ಫೆ.14: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅದಾನಿ ಸಮೂಹದ ಕಂಪನಿಗಳಿಗೆ ರಕ್ಷಣೆ ನೀಡುತ್ತಿದೆ ಎಂದು ವಿರೋಧ ಪಕ್ಷಗಳ ಆರೋಪಗಳಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಪ್ರತಿಕ್ರಿಯಿಸಿದ್ದಾರೆ. ಅದಾನಿ ಸಮೂಹದ ವಿಚಾರದಲ್ಲಿ ಮುಚ್ಚಿಡುವಂಥದ್ದು ಅಥವಾ ಭಯ ಪಡುವಂತಹದ್ದು ಏನೂ ಇಲ್ಲ ಎಂದು ಹೇಳಿದ್ದಾರೆ.

ಅದಾನಿ ಸಮೂಹದ ಷೇರು ಅಕ್ರಮದ ಕುರಿತು ಇತ್ತೀಚೆಗೆ ಹಿಂಡನ್‌ ಬರ್ಗ್‌ ಎಂಬ ಅಮೆರಿಕದ ಸಂಶೋಧನಾ ಸಂಸ್ಥೆ ವರದಿ ಬಿಡುಗಡೆ ಮಾಡಿತ್ತು. ಅದಾನಿ ಸಮೂಹವು 'ಷೇರು ಮೌಲ್ಯದ ಮೇಲೆ ಕೃತಕವಾಗಿ ಪ್ರಭಾವ ಬೀರಬಲ್ಲ ಕೃತ್ಯಗಳಲ್ಲಿ ತೊಡಗಿಸಿಕೊಂಡಿದೆ ಹಾಗೂ ಲೆಕ್ಕಪತ್ರ ವಂಚನೆ ಎಸಗಿದೆ ಎಂದು‌ ವರದಿಯಲ್ಲಿ ಆರೋಪಿಸಿದ್ದು ಜಾಗತಿಕ ಮಟ್ಟದಲ್ಲಿ ತೀವ್ರ ಸಂಚಲನ ಮೂಡಿಸಿತ್ತು.  

Gautam Adani says NDTV takeover a 'responsibility', not 'business  opportunity': Here is why

ಪರಿಣಾಮ ಅದಾನಿ ಸಮೂಹದ ಷೇರು ಮೌಲ್ಯದಲ್ಲಿ ತೀವ್ರ ಕುಸಿತ ಆಗಿತ್ತು. ಪ್ರತಿಪಕ್ಷಗಳು ಅದಾನಿ ಸಮೂಹ ಹಗರಣ ನಡೆಸಿದೆ ಎಂದು ಆರೋಪ ಮಾಡಿದ್ದವು. ಹೀಗಾಗಿ ಪ್ರಕರಣವನ್ನು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ ಒಪ್ಪಿಸಬೇಕೆಂದು ಪಟ್ಟು ಹಿಡಿದು ವಿಪಕ್ಷಗಳ ಸಂಸದರು ಸಂಸತ್ತಿನಲ್ಲಿ ಗದ್ದಲ ಎಬ್ಬಿಸಿದ್ದರು. ಸೋಮವಾರವೂ ರಾಜ್ಯಸಭೆಯಲ್ಲಿ ಬಜೆಟ್‌ ಅಧಿವೇಶನದ ಕಲಾಪಕ್ಕೆ ಪದೇ ಪದೇ ಅಡ್ಡಿಪಡಿಸಿದ್ದವು. ಇದರಿಂದಾಗಿ ಅಧಿವೇಶನವನ್ನು ಮಾರ್ಚ್‌ 13ಕ್ಕೆ ಮುಂದೂಡಲಾಗಿದೆ. 

ಪ್ರತಿಪಕ್ಷಗಳ ಆರೋಪಗಳ ಬಗ್ಗೆ ಮಾಧ್ಯದವರೊಂದಿಗೆ ಮಾತನಾಡಿರುವ ಅಮಿತ್‌ ಶಾ, ಅದಾನಿ ಸಮೂಹದ ವಿಚಾರದಲ್ಲಿ ಮುಚ್ಚಿಡುವುದಕ್ಕೆ ಅಥವಾ ಭಯ ಪಡುವುದಕ್ಕೆ ಏನೂ ಇಲ್ಲ' ಎಂದು ತಿರುಗೇಟು ನೀಡಿದ್ದಾರೆ.

Streaming of high court proceedings widens judicial accountability

ವಿರೋಧ ಪಕ್ಷದವರಲ್ಲಿ ದಾಖಲೆ ಇದ್ದರೆ ಏಕೆ ನ್ಯಾಯಾಲಯದಲ್ಲಿ ದೂರು ದಾಖಲಿಸುತ್ತಿಲ್ಲ? ಪೆಗಾಸಸ್‌ ಪ್ರಕರಣ ಬೆಳಕಿಗೆ ಬಂದಾಗಲೂ ಸಾಕ್ಷಿಯೊಂದಿಗೆ ಕೋರ್ಟ್‌ಗೆ ಹೋಗಿ ಎಂದು ಅವರಿಗೆ ಹೇಳಿದ್ದೆ. ಆದರೆ, ಹಾಗೆ ಮಾಡಲಿಲ್ಲ. ಅವರಿಗೆ ಬೊಬ್ಬೆ ಹೊಡೆಯುವುದಷ್ಟೇ ಗೊತ್ತಿದೆ. ನ್ಯಾಯಾಲಯ ನಮ್ಮ ಹಿಡಿತದಲ್ಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

A look into PM Modi's packed schedule on his 72nd birthday | Mint

ಇದೇ ವೇಳೆ ಮಾತನಾಡಿರುವ ಅವರು, 'ಕೇಸರಿ ಪಕ್ಷಕ್ಕೆ (ಬಿಜೆಪಿಗೆ) 2024ರ ಸಾರ್ವತ್ರಿಕ ಚುನಾವಣೆಗೆ ಪ್ರತಿಸ್ಪರ್ಧಿಗಳೇ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಶದ ಸಂಪೂರ್ಣ ಬೆಂಬಲವಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

BJP has "nothing to hide or be afraid of" on the controversy over Adani Group,  Home Minister Amit Shah told in an exclusive interview with ANI. Led by billionaire Gautam Adani, the business house's seven listed companies bearing his name have together lost about $120 billion in market value since a Jan. 24 report by Hindenburg Research alleged improper use of offshore tax havens and stock manipulation. The Adani group has denied the allegations and threatened legal action against Hindenburg.