ಬ್ರೇಕಿಂಗ್ ನ್ಯೂಸ್
15-02-23 04:42 pm HK News Desk ದೇಶ - ವಿದೇಶ
ವೆಲ್ಲಿಂಗ್ಟನ್, ಫೆ.15: ನ್ಯೂಜಿಲ್ಯಾಂಡ್ನಲ್ಲಿ ಬುಧವಾರ ಭಾರಿ ಪ್ರಬಲ ಭೂಕಂಪನ ಸಂಭವಿಸಿದೆ. ಕರಾವಳಿ ಭಾಗದಲ್ಲಿ ಉಂಟಾಗಿರುವ ಅವಘಡದಲ್ಲಿ, ರಿಕ್ಟರ್ ಮಾಪನದಲ್ಲಿ 6.1 ತೀವ್ರತೆಯಲ್ಲಿ ಭೂಮಿ ನಡುಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯುರೋಪಿಯನ್- ಮೆಡಿಟರೇನಿಯನ್ ಭೂಕಂಪಶಾಸ್ತ್ರ ಕೇಂದ್ರ (ಇಎಂಎಸ್ಸಿ) ಮಾಹಿತಿ ಪ್ರಕಾರ, ವೆಲ್ಲಿಂಗ್ಟನ್ ಸಮೀಪದ ಲೋವರ್ ಹಟ್ನ ವಾಯವ್ಯದ 78 ಕಿಮೀ ದೂರದಲ್ಲಿ ಭೂಕಂಪನ ಉಂಟಾಗಿದೆ. ಸುಮಾರು 48 ಕಿಮೀ (30 ಮೈಲು) ಆಳದಲ್ಲಿ ಕಂಪನ ಉಂಟಾಗಿದೆ ಎಂದು ಸರ್ಕಾರಿ ಭೂಕಂಪನ ನಿಗಾ ಕೇಂದ್ರ ಜಿಯೋನೆಟ್ ಹೇಳಿದೆ.

ಪರಾಪರೌಮು ಪಟ್ಟಣದಿಂದ 50 ಕಿಮೀ ದೂರದಲ್ಲಿ ಭೂಕಂಪನದ ಕೇಂದ್ರಬಿಂದು ದಾಖಲಾಗಿದೆ ಎಂದು ಅದು ಮಾಹಿತಿ ನೀಡಿದೆ. ಭೂಕಂಪನದ ಕಾರಣದಿಂದ ಯಾವುದೇ ಜೀವ ಅಥವಾ ಆಸ್ತಿಪಾಸ್ತಿಗಳಿಗೆ ಹಾನಿಯಾಗಿರುವ ಬಗ್ಗೆ ತಕ್ಷಣಕ್ಕೆ ವರದಿಯಾಗಿಲ್ಲ. ಸ್ಥಳೀಯ ಕಾಲಮಾನ ಸಂಜೆ 7.38ರ ಸುಮಾರಿಗೆ ಭೂಮಿ ಕಂಪಿಸಿದೆ.
ನ್ಯೂಜಿಲ್ಯಾಂಡ್, ಒಂದೆಡೆ ಅಗ್ನಿಪರ್ವತಗಳು ಹಾಗೂ ಸಮುದ್ರದ ತೀರಗಳಿಂದ ಸುತ್ತುವರಿದಿರುವುದರಿಂದ ಭೂಕಂಪನದ ಅಪಾಯಗಳಿಗೆ ಒಳಗಾಗಿದೆ. 40,000 ಕಿಮೀ ಅಗ್ನಿಪರ್ವತಗಳು ಮತ್ತು ಪೆಸಿಫಿಕ್ ಸಾಗರದ ತೀರಗಳು ಅದನ್ನು ಸುತ್ತುವರಿದಿದ್ದು, 'ಬೆಂಕಿಯ ಬಲೆ'ಯಲ್ಲಿ ದೇಶವಿದೆ.

ಟರ್ಕಿ- ಸಿರಿಯಾ ಸಾವಿನ ಸಂಖ್ಯೆ ಏರಿಕೆ
ಟರ್ಕಿ ಮತ್ತು ಸಿರಿಯಾ ದೇಶಗಳ ಜನತೆಯ ಬದುಕನ್ನು ಛಿದ್ರಗೊಳಿಸಿರುವ ಅನಾಹುತಕಾರಿ ಭೂಕಂಪನಕ್ಕೆ ಈವರೆಗೂ ಬಲಿಯಾದವರ ಸಂಖ್ಯೆ 41 ಸಾವಿರ ದಾಟಿದೆ. ಭಾರತ ಸೇರಿದಂತೆ 50ಕ್ಕೂ ಹೆಚ್ಚು ದೇಶಗಳು ಅಪಾಯಕ್ಕೆ ತುತ್ತಾದ ಈ ದೇಶಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ನಡೆಸುತ್ತಿವೆ. ಆದರೆ ಸಾವಿರಾರು ಕಟ್ಟಡಗಳು ನೆಲಸಮವಾಗಿರುವುದರಿಂದ ಅವುಗಳನ್ನು ತೆರವುಗೊಳಿಸಿ ಅವಶೇಷಗಳ ಅಡಿಯಿಂದ ಜನರನ್ನು ಜೀವಂತ ಹೊರಗೆ ತರುವುದು ಕಷ್ಟವಾಗುತ್ತಿದೆ.
ಭೂಕಂಪ ಸಂಭವಿಸಿ ಹತ್ತು ದಿನ ಕಳೆದಿದೆ. ಆದರೂ ಜನರು ಬದುಕಿ ಉಳಿದಿರಬಹುದು ಎಂಬ ಆಶಯದೊಂದಿಗೆ ಅವಶೇಷಗಳ ಅಡಿಯಲ್ಲಿ ಹುಡುಕಾಟ ಮುಂದುವರಿದಿದೆ. ಟರ್ಕಿಯ ಕಹ್ರಮಾನ್ಮರಸ್ನಲ್ಲಿ ಭೂಕಂಪ ಸಂಭವಿಸಿದ 222 ಗಂಟೆಗಳ ಬಳಿಕ 42 ವರ್ಷದ ಮಹಿಳೆಯನ್ನು ಜೀವಂತ ರಕ್ಷಿಸಲಾಗಿದೆ.
An earthquake of magnitude 6.1 on the Richter scale struck New Zealand on Wednesday. According to the European-Mediterranean Seismological Centre (EMSC), the earthquake occurred 78 km northwest of Lower Hutt, near Wellington. The tremors were felt at a depth of 48 km (30 miles), government seismic monitor Geonet stated.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
13-09-26 10:11 pm
HK News
ಕುತ್ತಾರು ರಾಜರಾಜೇಶ್ವರಿ ಸಿದ್ಧಿವಿನಾಯಕ ಕ್ಷೇತ್ರದಲ್...
13-09-26 08:10 pm
AI Centre in Madiyala: ಮಡಿಯಾಲದಲ್ಲಿ ಎಐ ಉನ್ನತ ಶ...
13-09-26 07:53 pm
ಬೆಳ್ತಂಗಡಿ ; ಹೆಬ್ಬಾವನ್ನು ನುಂಗಿ ಮನೆಯ ತೋಟದಲ್ಲಿ ಅ...
12-09-26 03:09 pm
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ಮೂಲಸೌಲಭ್ಯ, ಕೈಗಾ...
12-09-26 10:53 am
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm