ಲೆಬನಾನ್ ರಾಜಧಾನಿ ಬೈರುತ್ ನಲ್ಲಿ ಭಾರೀ ಸ್ಫೋಟ

04-08-20 06:02 pm       Headline Karnataka News Network   ದೇಶ - ವಿದೇಶ

ಕಳೆದ ಹಲವು ವರ್ಷಗಳಿಂದ ಯುದ್ಧಭೂಮಿಯಂತಾಗಿರುವ ಲೆಬನಾನ್‌ನಲ್ಲಿ ಕಳೆದ ಕೆಲ ದಿನಗಳಿಂದ ಗುಂಡಿನ ಮೊರೆತ ನಿಶ್ಯಬ್ಧತೆಯನ್ನು ತಬ್ಬಿತ್ತು. ಆದರೆ, ಇಂದು ಬೈರುತ್ ನಗರದ ಬಂದರಿನಲ್ಲಿ ಸಂಭವಿಸಿರುವ ಭಾರೀ ಸ್ಪೋಟವು ಲೆಬನಾನ್‌ನಲ್ಲಿ ಮತ್ತೆ ಆಘಾತದ ತರಂಗಗಳನ್ನು ಎಬ್ಬಿಸಿವೆ.

ಬೈರುತ್‌ (ಆಗಸ್ಟ್‌ 04); ಲೆಬನಾನ್ ರಾಜಧಾನಿ ಬೀರತ್ ನಲ್ಲಿ ಮಂಗಳವಾರ ಸಂಭವಿಸಿದ ಭೀಕರ ಸ್ಫೋಟದಲ್ಲಿ 100ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ದೇಶದ ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ. ಸ್ಫೋಟದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲೂ ಸಖತ್ ವೈರಲ್ ಆಗುತ್ತಿದೆ.

ಕಳೆದ ಹಲವು ವರ್ಷಗಳಿಂದ ಯುದ್ಧಭೂಮಿಯಂತಾಗಿರುವ ಲೆಬನಾನ್‌ನಲ್ಲಿ ಕಳೆದ ಕೆಲ ದಿನಗಳಿಂದ ಗುಂಡಿನ ಮೊರೆತ ನಿಶ್ಯಬ್ಧತೆಯನ್ನು ತಬ್ಬಿತ್ತು. ಆದರೆ, ಇಂದು ಬೈರುತ್ ನಗರದ ಬಂದರಿನಲ್ಲಿ ಸಂಭವಿಸಿರುವ ಭಾರೀ ಸ್ಪೋಟವು ಲೆಬನಾನ್‌ನಲ್ಲಿ ಮತ್ತೆ ಆಘಾತದ ತರಂಗಗಳನ್ನು ಎಬ್ಬಿಸಿವೆ. ಈ ಸ್ಪೋಟದಲ್ಲಿ ನೂರಾರು ಜನ ಗಾಯಗೊಂಡಿದ್ದಲ್ಲದೆ ಹಲವಾರು ಮನೆಗಳು ಹಾನಿಗೊಳಗಾಗಿವೆ ಎಂದು ವರದಿಯಾಗಿದೆ.

ಆದರೆ, ಸ್ಪೋಟದ ರುವಾರಿ ಯಾರು? ಮತ್ತು ಈ ಸ್ಪೋಟಕ್ಕೆ ಕಾರಣ ಏನು? ಎಂಬ ಕುರಿತು ಈವರೆಗೆ ತಿಳಿದುಬಂದಿಲ್ಲ ಎಂದು ಲೆಬನಾನ್ ಸರ್ಕಾರದ ಅಧಿಕಾರಿಗಳು ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಸ್ಪೋಟದ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ದೃಶ್ಯದಲ್ಲಿ ಸ್ಪೋಟ ಸಂಭವಿಸಿದ ತಕ್ಷಣ ಕಿತ್ತಳೆ ಬಣ್ಣದಲ್ಲಿ ಗೋಪುರ ಆಕಾರದಲ್ಲಿ ಹೊಗೆ ಆಕಾಶದ ಎತ್ತರಕ್ಕೆ ಹಾರಿದೆ. ಅಲ್ಲದೆ, ಶಬ್ಧದ ತೀವ್ರತೆ ದೊಡ್ಡ ತರಂಗಗಳನ್ನು ಸೃಷ್ಟಿಸಿದೆ. ಪರಿಣಾಮ ಬಂದರು ಪ್ರದೇಶದಲ್ಲಿದ್ದ ಗೋದಾಮುಗಳು ಕಿಟಕಿ ಗಾಜುಗಳು ಮತ್ತು ಬಾಗಿಲುಗಳು ಹಾನಿಗೊಳಗಾಗಿವೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.