ಬ್ರೇಕಿಂಗ್ ನ್ಯೂಸ್
25-08-25 03:02 pm Bangalore Correspondent ಕರ್ನಾಟಕ
ಬೆಂಗಳೂರು, ಆ.25 : ಡಿಸಿಎಂ ಆಗಿದ್ದುಕೊಂಡು ಆರೆಸ್ಸೆಸ್ ಪ್ರಾರ್ಥನೆ ಹೇಳುವುದರಲ್ಲಿ ಅಭ್ಯಂತರ ಇಲ್ಲ. ಆದರೆ, ಕೆಪಿಸಿಸಿ ಅಧ್ಯಕ್ಷರಾಗಿ ಆರ್‌ಎಸ್‌ಎಸ್ ಪ್ರಾರ್ಥನೆ ಹಾಡಿದ್ದು ತಪ್ಪು. ಅಧ್ಯಕ್ಷರಾಗಿ ಹೇಳಿದ್ರೆ ಡಿಕೆ ಶಿವಕುಮಾರ್ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಎಂಎಲ್‌ಸಿ ಬಿಕೆ ಹರಿಪ್ರಸಾದ್ ಹೇಳಿದ್ದಾರೆ.
ಡಿಕೆಶಿ ವಿಧಾನಸಭೆಯಲ್ಲಿ ಆರ್‌ಎಸ್‌ಎಸ್ ಗೀತೆ ಹೇಳಿದ ಕುರಿತು ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಇಂತಹ ಹೇಳಿಕೆಯನ್ನು ಸಹಜವಾಗಿ ಸಮರ್ಥಿಸಿಕೊಳ್ಳುತ್ತಾರೆ. ಆರ್‌ಎಸ್‌ಎಸ್‌ನ ದೇಶದಲ್ಲಿ ಈಗಾಗಲೇ ಮೂರು ಬಾರಿ ನಿಷೇಧ ಮಾಡಲಾಗಿತ್ತು. ಅವರು ಡಿಸಿಎಂ ಆಗಿ ಹಾಡು ಹೇಳಿದ್ರೆ ನಮ್ಮದು ಅಭ್ಯಂತರ ಇಲ್ಲ. ಸರ್ಕಾರ ಎಲ್ಲರ ಸ್ವತ್ತು. ಅದರಲ್ಲಿ ಒಳ್ಳೆಯವರು, ಕೆಟ್ಟವರು ಎಲ್ಲಾರೂ ಇರುತ್ತಾರೆ. ಆರ್‌ಎಸ್‌ಎಸ್, ತಾಲಿಬಾನ್‌ಗಳು ಇರುತ್ತಾರೆ. ಕಾಂಗ್ರೆಸ್ ಅಧ್ಯಕ್ಷರಾಗಿ ಹೇಳುವಂತಿಲ್ಲ, ಹೇಳಿದ್ರೆ ಕ್ಷಮೆ ಕೇಳಬೇಕು ಎಂದು ಮನವಿ ಮಾಡಿದರು.
ಮಹಾತ್ಮ ಗಾಂಧಿ ಕೊಂದವರು ಆರ್‌ಎಸ್‌ಎಸ್‌ನವರು. ಹೀಗಾಗಿ ಪಕ್ಷದ ನೆಲೆಗಟ್ಟಿನಲ್ಲಿ ಹಾಗೆ ಹೇಳಿದ್ರೆ ಕ್ಷಮೆ ಕೇಳಬೇಕು. ಯಾರಿಗೆ ಸಂದೇಶ ಕೊಡಲು ಆರ್‌ಎಸ್‌ಎಸ್ ಪ್ರಾರ್ಥನೆ ಹಾಡಿದ್ದಾರೋ ಗೊತ್ತಿಲ್ಲ. ಅವರಿಗೆ ಹಲವು ಮುಖಗಳು ಇವೆ. ಕೃಷಿಕರು, ವ್ಯಾಪಾರಸ್ಥರು, ಉದ್ಯೋಗಸ್ಥರು, ರಾಜಕಾರಣಿ ಅಂತಾ ಹಲವು ಮುಖಗಳಿವೆ. ಗಾಂಧಿ ಕೊಂದ ಸಂಘಟನೆ ಬಗ್ಗೆ ಹೀಗೆ ಹೇಳಿದ್ದಾರೆ. ಇದು ಯಾರಿಗಾದ್ರು ಸಂದೇಶ ಕೊಡುತ್ತಿರಬಹುದು ಎಂದರು.
ಬಿಜೆಪಿಯಿಂದ ಧರ್ಮಸ್ಥಳ ಚಲೋ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಘಟ್ಟದ ಮೇಲೆ ಮತ್ತು ಕೆಳಗೆ ಇರುವ ಆರ್‌ಎಸ್‌ಎಸ್ ನಾಯಕರಿಂದ ಧರ್ಮಸ್ಥಳಕ್ಕೆ ಕೆಟ್ಟ ಹೆಸರು ಬರುತ್ತಿದೆ. ಸಂಘದ ಇಬ್ಬರು ಪ್ರಮುಖ ನಾಯಕರಿಂದ ಧರ್ಮಸ್ಥಳಕ್ಕೆ ಕೆಟ್ಟ ಹೆಸರು ಬರುತ್ತಿದೆ. ಧರ್ಮಸ್ಥಳದ ವಿಚಾರದಲ್ಲಿ ಈ ಹಿಂದೆ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ಸುನಿಲ್ ಕುಮಾರ್ ಹೇಳಿಕೆಗಳು ನೋಡಿ. ಸೌಜನ್ಯ ಪ್ರಕರಣದಲ್ಲಿ ತನಿಖೆ ಆಗಬೇಕೆಂದು ಧರ್ಮಸ್ಥಳಕ್ಕೆ ಹೋಗಿ ಭಾಷಣ ಮಾಡಿದ್ರು, ಎಸ್‌ಐಟಿ ಮಾಡಬೇಕು ಅಂತಾ ಹೇಳಿದ್ದು ಬಿಜೆಪಿಯವರೇ.
ಸರ್ಕಾರ ಕಾಲಮಿತಿಯೊಳಗೆ ತನಿಖೆ ಮುಗಿಸಬೇಕು. ಎಸ್‌ಐಟಿ ಧರ್ಮಸ್ಥಳ ದೇವಾಲಯ ಅಥವಾ ದೇವಾಲಯದವರನ್ನ ತನಿಖೆ ಮಾಡುತ್ತಿಲ್ಲ. ಬದಲಾಗಿ ಯಾರು ಆ ಬಗ್ಗೆ ಹೇಳಿಕೆ ನೀಡಿದ್ದಾರೋ ಮಾಸ್ಕ್ ಮ್ಯಾನ್, ಸಮೀರ್ ಸೇರಿದಂತೆ ಹಲವರ ಬಗ್ಗೆ ತನಿಖೆ ಮಾಡುತ್ತಿದೆ. ರಾಮಾಯಣ ಕಾಲದಲ್ಲಿ ಸೀತೆಯನ್ನ ಪರೀಕ್ಷಿಸಲಾಯಿತು. ಜನರು ಅರ್ಥ ಮಾಡಿಕೊಳ್ಳಬೇಕು, ಹೇಳಿಕೆ ನೀಡಿರುವವರನ್ನ ಮಾತ್ರ ತನಿಖೆ ಮಾಡುತ್ತಿದ್ದಾರೆ. ಧಾರ್ಮಿಕ ವಿಚಾರದಲ್ಲಿ ರಾಜಕೀಯಕ್ಕೆ ಬಿಜೆಪಿ ಶತಪ್ರಯತ್ನ ಮಾಡುತ್ತಿದೆ. ಆರ್‌ಎಸ್‌ಎಸ್ ಹಾಗೂ ಘಟ್ಟದ ಮೇಲೆ ಇರುವವರ ಗುಂಪಿನಿಂದ ಧರ್ಮಸ್ಥಳಕ್ಕೆ ಅಪಪ್ರಚಾರ ಮಾಡಲಾಗುತ್ತಿದೆ. ಸಂಘದ ಇಬ್ಬರು ಪ್ರಮುಖ ನಾಯಕರಿಂದ ಧರ್ಮಸ್ಥಳದ ಹೆಸರು ಹಾಳಾಗುತ್ತಿದೆ ಎಂದು ಆರೋಪಿಸಿದರು.
Congress MLC BK Hariprasad has criticized KPCC President and Deputy Chief Minister DK Shivakumar for singing an RSS prayer in the Karnataka Legislative Assembly, stating that such an act is inappropriate for someone holding the post of state Congress president. He urged Shivakumar to issue an apology if he sang it in his official capacity.
24-10-25 09:35 pm
Bangalore Correspondent
ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ಅ.28ರಂದು ಶಾಂತಿ...
24-10-25 06:04 pm
ಧರ್ಮಸ್ಥಳ ಪ್ರಕರಣಕ್ಕೆ ಕ್ಲೈಮ್ಯಾಕ್ಸ್ ; ಇದೇ ತಿಂಗಳಾ...
24-10-25 01:11 pm
ಪ್ರಿಯಾಂಕ ಖರ್ಗೆ ಹೊಸ ಸಂಪುಟದಲ್ಲಿ ಉಪ ಮುಖ್ಯಮಂತ್ರಿ...
23-10-25 03:42 pm
ಪಿಜಿಯಲ್ಲಿ ತಿಗಣೆ ಔಷಧಿ ದುರ್ವಾಸನೆಗೆ ವಿದ್ಯಾರ್ಥಿ ಬ...
23-10-25 12:46 pm
24-10-25 05:43 pm
HK News Desk
ಬಿಹಾರ ಚುನಾವಣೆ ; ಇಂಡಿಯಾ ಒಕ್ಕೂಟದ ಮುಖ್ಯಮಂತ್ರಿ ಸ್...
23-10-25 03:39 pm
ಶಬರಿಮಲೆಗೆ ಭೇಟಿಯಿತ್ತ ಮೊದಲ ಮಹಿಳಾ ರಾಷ್ಟ್ರಪತಿ ; ಪ...
22-10-25 10:56 pm
ರಾಷ್ಟ್ರಪತಿ ಮುರ್ಮು ಶಬರಿಮಲೆಗೆ ; ಹೆಲಿಪ್ಯಾಡ್ ನಲ್ಲ...
22-10-25 10:23 pm
ಜೈಶ್ ಮಹಿಳಾ ಉಗ್ರರಿಂದ ಆನ್ಲೈನ್ ತರಬೇತಿ ಕೋರ್ಸ್ ; ಜ...
22-10-25 05:45 pm
24-10-25 07:57 pm
Mangalore Correspondent
Police Commissioner Sudheer Reddy, Mangalore:...
24-10-25 11:57 am
ಎಸ್ ಸಿಎಸ್ ಆಸ್ಪತ್ರೆಯ 38ನೇ ವರ್ಷದ ಸಂಭ್ರಮಾಚರಣೆ ;...
23-10-25 10:52 pm
ಸತ್ತು ಬದುಕಿದ ಸುದ್ದಿ ಬಗ್ಗೆ ಯೇನಪೋಯ ಆಸ್ಪತ್ರೆ ಸ್ಪ...
23-10-25 10:46 pm
ಮಂಗಳೂರಿನಲ್ಲಿ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಪಂದ್ಯಾ...
23-10-25 07:35 pm
24-10-25 08:20 pm
Mangalore Correspondent
Surathkal Stabbing, Crime, Mangalore: ಸುರತ್ಕಲ...
24-10-25 10:07 am
ನೀವು ಮೋಸದ ಕರೆ ಮಾಡಿ ವಂಚಿಸುತ್ತಿದ್ದೀರಿ ಎಂದು ಹೇಳಿ...
23-10-25 06:53 pm
Dj Halli Inspector Sunil, Rape: ಠಾಣೆಗೆ ಬಂದಿದ್...
23-10-25 05:20 pm
Puttur, Illegal cattle transport, Arrest: ಗೋಪ...
22-10-25 11:51 am