ಬ್ರೇಕಿಂಗ್ ನ್ಯೂಸ್
19-02-23 10:10 pm HK News Desk ದೇಶ - ವಿದೇಶ
ಬದೌನ್, ಫೆ.19: ಉತ್ತರ ಪ್ರದೇಶದ ಬದೌನ್ನಲ್ಲಿ ಮಹಾಶಿವರಾತ್ರಿ ನಿಮಿತ್ತ ಗಂಗಾ ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದ ಐವರು ವೈದ್ಯಕೀಯ ವಿದ್ಯಾರ್ಥಿಗಳ ಪೈಕಿ ಮೂವರು ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾರೆ.
ಸರ್ಕಾರಿ ವೈದ್ಯಕೀಯ ಕಾಲೇಜಿನ ಐವರು ಎಂಬಿಬಿಎಸ್ ವಿದ್ಯಾರ್ಥಿಗಳು ಮಧ್ಯಾಹ್ನ ಸ್ನಾನ ಮಾಡಲು ಕಚಲಾ ಗಂಗಾ ಘಾಟ್ಗೆ ಬಂದಿದ್ದರು. ಘಾಟ್ನಲ್ಲಿ ಸ್ನಾನ ಮಾಡುವಾಗ ಈ ವಿದ್ಯಾರ್ಥಿಗಳು ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ. ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡ ಸ್ಥಳೀಯರು ಇಬ್ಬರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜನರ ಪ್ರಯತ್ನದಿಂದ ಅಂಕುಶ್ ಗೆಹ್ಲೋಟ್ ಮತ್ತು ಪ್ರಮೋದ್ ಯಾದವ್ ಅವರ ಪ್ರಾಣ ಉಳಿಸಲಾಗಿದೆ.
ಆದರೆ, ಮೂವರು ವಿದ್ಯಾರ್ಥಿಗಳನ್ನು ಉಳಿಸಲು ಸಾಧ್ಯವಾಗಿಲ್ಲ. ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿರುವ ಮಾಹಿತಿ ಮೇರೆಗೆ ಆಡಳಿತ ತಂಡ ಡೈವರ್ಗಳ ಸಹಾಯದಿಂದ ಶೋಧ ಕಾರ್ಯಾಚರಣೆ ನಡೆಸಿತು. ಈ ವಿದ್ಯಾರ್ಥಿಗಳು ಶನಿವಾರ ಪತ್ತೆಯಾಗಿಲ್ಲ. ಭಾನುವಾರ ಮೂವರು ವಿದ್ಯಾರ್ಥಿಗಳ ಮೃತದೇಹಗಳು ನೀರಿನಲ್ಲಿ ಮುಳುಗಿದ ಸ್ಥಳದಿಂದ ಸುಮಾರು 800 ಮೀಟರ್ ದೂರದಲ್ಲಿ ಪತ್ತೆಯಾಗಿವೆ.
ಜೈ ಮೌರ್ಯ, ಪವನ್ ಪ್ರಕಾಶ್ ಮತ್ತು ನವೀನ್ ಸೆಂಗಾರ್ ಅವರ ಮೃತದೇಹಗಳನ್ನು ಎಸ್ಡಿಆರ್ಎಫ್ ಮತ್ತು ಆಡಳಿತ ತಂಡದ ಸಹಾಯದಿಂದ ವೈದ್ಯಕೀಯ ಕಾಲೇಜು ಅಧಿಕಾರಿಗಳು ಮತ್ತು ಸ್ಥಳೀಯ ಆಡಳಿತದ ಸಹಾಯದಿಂದ ಹೊರತೆಗೆಯಲಾಗಿದೆ. ಮೂವರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
Three students of Badaun's Government Medical College drowne while two were rescued from river Ganga at Kachla Ganga Ghat on Saturday, said police. The deceased have been identified as Jai Maurya, Naveen Sengar, and Pawan Yadav, added the police. Five students studying MBBS from Badaun's Government Medical College, went to the ghat to take bath in Ganga on the occasion of Mahashivratri.
10-04-26 03:25 pm
HK News Desk
PUC Result 2026, State Topper: ಪಿಯುಸಿ ರಿಸಲ್ಟ್...
09-04-26 09:30 pm
ಗ್ಯಾರಂಟಿ ಯೋಜನೆಗಳ ಬಗ್ಗೆ ವರದಿ ಕೇಳಿದ ಚುನಾವಣಾ ಆಯೋ...
09-04-26 04:33 pm
ಶರಣ್ಯ ನಾಪತ್ತೆ ಪ್ರಕರಣದಲ್ಲಿ ಟ್ವಿಸ್ಟ್ ; ನಕ್ಸಲ್ ಲ...
09-04-26 03:37 pm
ರಾಜ್ಯದಲ್ಲಿ ಆಟೋ ಗ್ಯಾಸ್ ಕೊರತೆಯಾಗಿದೆ ಎಂಬ ವದಂತಿಗೆ...
08-04-26 09:35 pm
10-04-26 01:26 pm
HK News Desk
Lebanon News: ಲೆಬನಾನ್ ಮೇಲೆ ಇಸ್ರೇಲ್ ಭಾರೀ ಬಾಂಬ್...
09-04-26 11:03 pm
ಹರ್ಮುಜ್ ಜಲಸಂಧಿಗೆ ಇರಾನ್ ಸುಂಕ ; ಭಾರತಕ್ಕೆ ಭಾರೀ...
09-04-26 07:43 pm
ಕದನ ವಿರಾಮದ ಅಂತಿಮ ಕ್ಷಣದಲ್ಲಿ ಇಸ್ರೇಲ್, ಯುಎಇ, ಕತಾ...
08-04-26 06:59 pm
ಜಾಗತಿಕ ಮಾರುಕಟ್ಟೆ : ಇರಾನ್-ಅಮೆರಿಕ ಕದನ ವಿರಾಮ ಹಿನ...
08-04-26 02:39 pm
10-04-26 12:35 pm
Dinesh Kumar, Mangaluru
Besant Evening College, BPL Cricket: ಬೆಸೆಂಟ್...
07-04-26 01:22 pm
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಅಪರಿಚಿತ ಶವ ಪತ...
06-04-26 07:58 pm
ಉಡುಪಿ ; ಬಾವಿಗೆ ಬಿದ್ದು ಮೂರು ದಿನ ನರಳಾಡಿತ್ತು ವೃದ...
06-04-26 07:43 pm
ಕೇರಳಕ್ಕೆ ಅಕ್ರಮ ಜಾನುವಾರು ಸಾಗಣೆ; ಕಡಬದಲ್ಲಿ ಪೊಲೀಸ...
03-04-26 11:43 am
09-04-26 09:16 pm
HK News Staffer
ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಮಗು ;...
09-04-26 01:03 pm
Arif Murder, Seven Arrested, Mangalore: ಟ್ಯಾಬ...
08-04-26 07:48 pm
ಡ್ರಗ್ಸ್ ಪೆಡ್ಲಿಂಗ್ ; ತಾವಾಗಿಯೇ ಗಾಂಜಾ, ಡ್ರಗ್ಸ್ ತ...
08-04-26 05:53 pm
Gurupura Accident, Mangalore: ಮೂಡುಬಿದ್ರೆ ಎಕ್ಸ...
08-04-26 04:29 pm