ಬ್ರೇಕಿಂಗ್ ನ್ಯೂಸ್
09-03-23 10:46 pm HK News Desk ದೇಶ - ವಿದೇಶ
ತಿರುವನಂತಪುರಂ, ಮಾ.9 : ಆ ದಂಪತಿಗೆ ಹಿಂದೆ ಮದುವೆಯಾಗಿದ್ದು ಮೂವರು ಹೆಣ್ಮಕ್ಕಳನ್ನು ಹೊಂದಿದ್ದಾರೆ. ಆದರೆ ಮುಸ್ಲಿಂ ಹೆಣ್ಮಕ್ಕಳಿಗೆ ಹೆತ್ತವರ ಆಸ್ತಿ ಪಡೆಯುವಲ್ಲಿ ತೊಡಕಿದೆ ಎನ್ನುವುದನ್ನು ಮನಗಂಡ ಆ ದಂಪತಿ ತಮ್ಮ ಹಳೆಯ ಮದುವೆಯನ್ನೇ ರದ್ದುಪಡಿಸಿ ವಿಶೇಷ ವಿವಾಹ ಕಾಯಿದೆಯಲ್ಲಿ ಹೊಸತಾಗಿ ಮದುವೆಯಾಗಿದ್ದಾರೆ.
ಕೇರಳದ ಕಾಞಂಗಾಡ್ ಮೂಲದ ಖ್ಯಾತ ವಕೀಲ ಸಿ. ಶುಕ್ಕೂರ್ ಮತ್ತು ಮಹಾತ್ಮ ಗಾಂಧಿ ವಿವಿಯ ಮಾಜಿ ಉಪ ಕುಲಪತಿ ಡಾ. ಶೀನಾ ಅವರು ಅಂತಾರಾಷ್ಟ್ರೀಯ ಮಹಿಳಾ ದಿನವಾದ ಮಾರ್ಚ್ 8ರಂದು ಮರು ಮದುವೆಯಾಗಿದ್ದಾರೆ. ಇಳಿ ವಯಸ್ಸಿನಲ್ಲಿ ಇವರ ಮರು ಮದುವೆ ಮುಸ್ಲಿಮರ ಅಂಧ ಕಟ್ಟುಪಾಡುಗಳ ಬಗ್ಗೆ ಮರು ಚಿಂತಿಸುವಂತೆ ಮಾಡಿದೆ.

ಅಕ್ಟೋಬರ್ 6, 1994 ರಂದು ಷರಿಯಾ ಕಾನೂನಿನಡಿ ಇವರು ಮದುವೆಯಾಗಿದ್ದರು. ಈಗ ವಿಶೇಷ ವಿವಾಹ ಕಾಯಿದೆಯಡಿ ಮರು ಮದುವೆ ಮಾಡಿಕೊಂಡಿದ್ದು ಆಮೂಲಕ ತಮ್ಮ ಮೂವರು ಹೆಣ್ಮಕ್ಕಳಿಗೆ ಸಂಪೂರ್ಣ ಆಸ್ತಿ ಹಕ್ಕನ್ನು ದಯಪಾಲಿಸಿದ್ದಾರೆ. ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ, ಹೆಣ್ಣು ಮಕ್ಕಳು ತಂದೆಯ ಆಸ್ತಿಯಲ್ಲಿ ಮೂರನೇ ಎರಡರಷ್ಟು ಭಾಗವನ್ನು ಮಾತ್ರ ಪಡೆಯುತ್ತಾರೆ, ಉಳಿದವು ಯಾರೂ ಇಲ್ಲದಿದ್ದರೆ ತಂದೆಯ ಸಹೋದರರಿಗೆ ಹೋಗುತ್ತದೆ. ಹೀಗಾಗಿ ದಂಪತಿ ಆಯ್ಕೆ ಮಾಡಿಕೊಂಡಿದ್ದು ಮರು ಮದುವೆಯನ್ನು.
ನಮಗೆ ಪುರುಷ ಸಂತತಿ ಇಲ್ಲದಿರುವುದರಿಂದ ಆಸ್ತಿ ಸೋದರರಿಗೆ ಹೋಗುತ್ತದೆ. ಇದು ಮಹಿಳೆಯರ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಮತ್ತು ತಾರತಮ್ಯವಾಗಿದೆ, ಮುಸ್ಲಿ ಧರ್ಮದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆಯ ಹಕ್ಕನ್ನು ನಿರಾಕರಿಸಿರುವುದು ವಿಷಾದನೀಯ ಎಂದು ಶುಕೂರ್ ಹೇಳುತ್ತಾರೆ.
ಸಂವಿಧಾನದ ಸೆಕ್ಷನ್ 14 ರ ಪ್ರಕಾರ, ಧರ್ಮ, ಜಾತಿ ಅಥವಾ ಲಿಂಗವನ್ನು ಲೆಕ್ಕಿಸದೆ ಎಲ್ಲರಿಗೂ ಸಮಾನ ಹಕ್ಕುಗಳಿವೆ. ಮುಸ್ಲಿಮರ ಹೆಣ್ಣುಮಕ್ಕಳಿಗೆ ಮಾತ್ರ ಈ ಹಕ್ಕನ್ನು ನಿರಾಕರಿಸಿರುವುದು ಅತ್ಯಂತ ವಿಷಾದನೀಯ. ನಾನು ಎರಡು ಬಾರಿ ಅಪಘಾತಗಳನ್ನು ಎದುರಿಸಿದ್ದೇನೆ, ಅದರಿಂದ ಸ್ವಲ್ಪದರಲ್ಲಿಯೇ ಪಾರಾಗಿದ್ದೇನೆ. ನಾನು ಜಗತ್ತನ್ನು ತೊರೆದ ನಂತರ ಏನಾಗುತ್ತದೆ ಎಂಬ ಚಿಂತನೆ ನನ್ನನ್ನು ಯೋಚಿಸುವಂತೆ ಮಾಡಿತು. ನನ್ನ ಹೆಣ್ಣು ಮಕ್ಕಳು ನನ್ನ ಆಸ್ತಿಯ ಏಕೈಕ ವಾರಸುದಾರರಾಗಬೇಕೆಂದು ನಾನು ಬಯಸುತ್ತೇನೆ ಎನ್ನುತ್ತಾರೆ.
The remarriage of advocate and actor C Shukkur and his wife Sheena, the former Pro Vice Chancellor of Mahatma Gandhi University under the Special Marriage Act, 29 years after they got married led to a storm on social media. The duo got married on Wednesday and took their vows again. But the purpose is what has been drawing the criticism. Their remarriage is to ensure their daughter's 'financial security', which is not permitted in Muslim law. Their three daughters were also present at the remarriage event.
10-04-26 03:25 pm
HK News Desk
PUC Result 2026, State Topper: ಪಿಯುಸಿ ರಿಸಲ್ಟ್...
09-04-26 09:30 pm
ಗ್ಯಾರಂಟಿ ಯೋಜನೆಗಳ ಬಗ್ಗೆ ವರದಿ ಕೇಳಿದ ಚುನಾವಣಾ ಆಯೋ...
09-04-26 04:33 pm
ಶರಣ್ಯ ನಾಪತ್ತೆ ಪ್ರಕರಣದಲ್ಲಿ ಟ್ವಿಸ್ಟ್ ; ನಕ್ಸಲ್ ಲ...
09-04-26 03:37 pm
ರಾಜ್ಯದಲ್ಲಿ ಆಟೋ ಗ್ಯಾಸ್ ಕೊರತೆಯಾಗಿದೆ ಎಂಬ ವದಂತಿಗೆ...
08-04-26 09:35 pm
10-04-26 01:26 pm
HK News Desk
Lebanon News: ಲೆಬನಾನ್ ಮೇಲೆ ಇಸ್ರೇಲ್ ಭಾರೀ ಬಾಂಬ್...
09-04-26 11:03 pm
ಹರ್ಮುಜ್ ಜಲಸಂಧಿಗೆ ಇರಾನ್ ಸುಂಕ ; ಭಾರತಕ್ಕೆ ಭಾರೀ...
09-04-26 07:43 pm
ಕದನ ವಿರಾಮದ ಅಂತಿಮ ಕ್ಷಣದಲ್ಲಿ ಇಸ್ರೇಲ್, ಯುಎಇ, ಕತಾ...
08-04-26 06:59 pm
ಜಾಗತಿಕ ಮಾರುಕಟ್ಟೆ : ಇರಾನ್-ಅಮೆರಿಕ ಕದನ ವಿರಾಮ ಹಿನ...
08-04-26 02:39 pm
10-04-26 06:05 pm
Mangalore Correspondent
Puc 2026, Result, Mangalore: ಮೂವರು ಮಕ್ಕಳಾದರೂ...
10-04-26 12:35 pm
Besant Evening College, BPL Cricket: ಬೆಸೆಂಟ್...
07-04-26 01:22 pm
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಅಪರಿಚಿತ ಶವ ಪತ...
06-04-26 07:58 pm
ಉಡುಪಿ ; ಬಾವಿಗೆ ಬಿದ್ದು ಮೂರು ದಿನ ನರಳಾಡಿತ್ತು ವೃದ...
06-04-26 07:43 pm
09-04-26 09:16 pm
HK News Staffer
ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಮಗು ;...
09-04-26 01:03 pm
Arif Murder, Seven Arrested, Mangalore: ಟ್ಯಾಬ...
08-04-26 07:48 pm
ಡ್ರಗ್ಸ್ ಪೆಡ್ಲಿಂಗ್ ; ತಾವಾಗಿಯೇ ಗಾಂಜಾ, ಡ್ರಗ್ಸ್ ತ...
08-04-26 05:53 pm
Gurupura Accident, Mangalore: ಮೂಡುಬಿದ್ರೆ ಎಕ್ಸ...
08-04-26 04:29 pm