ಬ್ರೇಕಿಂಗ್ ನ್ಯೂಸ್
21-03-23 04:52 pm HK News Desk ದೇಶ - ವಿದೇಶ
ತಿರುವನಂತಪುರಂ, ಮಾ.21: ಕೇಂದ್ರ ಸರಕಾರ ರಬ್ಬರ್ ಬೆಳೆಗಾರರ ನೆರವಿಗೆ ಬಂದರೆ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡುತ್ತೇವೆ ಎಂದು ಉತ್ತರ ಕೇರಳದ ಸೀರೋ ಮಲಬಾರ್ ಕೆಥೋಲಿಕ್ ಚರ್ಚ್ ಬಿಷಪ್ ಜೋಸೆಫ್ ಪಂಪ್ಲಾನಿ ಹೇಳಿಕೆ ನೀಡಿದ್ದು, ಕೇರಳ ರಾಜಕೀಯದಲ್ಲಿ ಹೊಸ ಬಿರುಗಾಳಿ ಎಬ್ಬಿಸಿದೆ.
ಆರೆಸ್ಸೆಸ್ ಮುಖ್ಯಸ್ಥ ಮೋಹನ ಭಾಗವತ್ ಇತ್ತೀಚೆಗೆ ಕೇರಳದಲ್ಲಿ ನಾವು ಕ್ರಿಸ್ತಿಯನ್ ಸಮುದಾಯದ ಜೊತೆಗೆ ಮಾತುಕತೆಗೆ ಸಿದ್ಧರಿದ್ದೇವೆ ಎಂದು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಕೇರಳದಲ್ಲಿ ಪ್ರಬಲವಾಗಿರುವ ಕ್ರಿಸ್ತಿಯನ್ ಸಮುದಾಯದ ಕೆಥೋಲಿಕ್ ಪ್ರಮುಖರು ಪ್ರತಿಕ್ರಿಯೆ ರೂಪದಲ್ಲಿ ಹೇಳಿಕೆ ನೀಡಿದ್ದಾರೆ. ಕಣ್ಣೂರಿನಲ್ಲಿ ಕೆಥೋಲಿಕ್ ಅಸೋಸಿಯೇಶನ್ ಕರೆದಿದ್ದ ರಬ್ಬರ್ ಬೆಳಗಾರರ ಸಮಾವೇಶದಲ್ಲಿ ಬಿಷಪ್ ಜೋಸೆಫ್ ಪಂಪ್ಲಾನಿ ಈ ಹೇಳಿಕೆ ನೀಡಿದ್ದಾರೆ.
ರಬ್ಬರ್ ಬೆಲೆ ವಿಪರೀತ ಕುಸಿತ ಆಗಿದೆ. ಇದಕ್ಕೆ ಯಾರು ಹೊಣೆ. ಯಾರನ್ನು ನಾವು ದೂರಬೇಕು. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷವು ರಬ್ಬರ್ ಬೆಳೆಗಾರರ ಪರವಾಗಿ ನಿಂತರೆ, ರಬ್ಬರ್ ಬೆಲೆ ಕೇಜಿಗೆ 250 ರೂ.ಗೆ ಏರಿಕೆಯಾಗುತ್ತದೆ. ನಾವು ಪ್ರಜಾಪ್ರಭುತ್ವದಲ್ಲಿ ಯಾವುದೇ ಪ್ರತಿಭಟನೆ ಮತಗಳಾಗಿ ಪರಿವರ್ತನೆಯಾದರೆ ಮಾತ್ರ ಅದರ ಲಾಭ ದೊರಕುವುದು ಎನ್ನುವುದನ್ನು ಅರ್ಥ ಮಾಡಬೇಕು. ನಾವು ಕೇಂದ್ರ ಸರಕಾರಕ್ಕೆ ಹೇಳಬೇಕಾಗಿದೆ, ನೀವು ನಮ್ಮ ರಬ್ಬರನ್ನು ಕಿಲೋಗೆ 300 ರೂ.ನಂತೆ ಖರೀದಿ ಮಾಡಿದರೆ ನಮ್ಮ ಮತವನ್ನು ನಿಮಗೆ ಕೊಡಲು ಸಿದ್ಧವೆಂದು. ಇದರಿಂದ ಕೇರಳದಲ್ಲಿ ಒಬ್ಬ ಸಂಸದನನ್ನೂ ಹೊಂದಿಲ್ಲದ ಬಿಜೆಪಿಗೆ ಒಳಿತಾಗಬಹುದು ಎಂದು ಬಿಷಪ್ ರಾಜಕೀಯದ ಮಾತುಗಳನ್ನು ಹೇಳಿದ್ದಾರೆ.
ಕಣ್ಣೂರು ಜಿಲ್ಲೆಯಲ್ಲಿ ರೈತರೇ ಪ್ರಬಲವಾಗಿರುವ ಆಲಕ್ಕೋಡ್ ನಲ್ಲಿ ಈ ಸಮಾವೇಶ ನಡೆದಿದ್ದು, ರೈತರ ಬೆಳೆಗಳಿಗೆ ಬೆಲೆ ಕುಸಿಯುವುದನ್ನು ಖಂಡಿಸಿ ರೈತರು ಸಭೆ ಸೇರಿದ್ದರು. ಈ ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದಲೂ ರೈತರು ಕಷ್ಟ ಪಡುತ್ತಿದ್ದಾರೆ. ನಮ್ಮ ಬೇಡಿಕೆ ಈಡೇರುವ ವರೆಗೂ ಪ್ರತಿಭಟನೆ ನಿಲ್ಲಿಸಬಾರದು. ಹಾಗಂತ, ನಮ್ಮ ಪ್ರತಿಭಟನೆ ಯಾವುದೇ ಸರಕಾರದ ವಿರುದ್ಧ ಅಲ್ಲ. ನಮ್ಮ ಬೆಳೆಗಾರರ ಹಿತ ಕಾಯುವುದು ಸರಕಾರದ ಕರ್ತವ್ಯ ಆಗಬೇಕಷ್ಟೇ ಎಂದು ಬಿಷಪ್ ಹೇಳಿದ್ದಾರೆ.
ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿದ್ದು, ಈ ಬಾರಿ ಕೇರಳದಲ್ಲಿ ಸ್ಥಾನ ಪಡೆಯಲು ಬಿಜೆಪಿ ಪ್ರಯತ್ನ ಮಾಡುತ್ತಿದೆ. ಇದಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಕ್ರಿಸ್ತಿಯನ್ ಮುಖಂಡರ ಜೊತೆಗೆ ಮಾತುಕತೆಗೆ ಸಿದ್ಧರಿದ್ದೇವೆ ಎಂದು ಆರೆಸ್ಸೆಸ್ ಮುಖ್ಯಸ್ಥ ಭಾಗವತ್ ಹೇಳಿದ್ದರು.
The Kerala BJP’s bid to make inroads into the state’s Christian community has received a big boost, with the Syro-Malabar Catholic Church saying that it will support the BJP if the Central government takes steps to improve the condition of rubber cultivators. The Syro-Malabar Catholic Church represents a dominant segment of Christians in the southern state.
20-07-25 08:35 pm
Bangalore Correspondent
ವಾಲ್ಮೀಕಿ ನಿಗಮ ಹಗರಣ ರೀತಿಯಲ್ಲೇ ಮತ್ತೊಂದು ಹಗರಣ ;...
20-07-25 07:55 pm
Dharmasthala SIT Case, Parameshwar: ಎಸ್ಐಟಿ ರ...
20-07-25 04:24 pm
Rcb, Bangalore: ಪೊಲೀಸರು 'ಆರ್ಸಿಬಿ ಸೇವಕರು' ಎಂಬ...
19-07-25 03:05 pm
ಎಲ್ಲ ಶಾಸಕರ ಕ್ಷೇತ್ರದ ಅಭಿವೃದ್ಧಿಗೆ ತಲಾ 50 ಕೋಟಿ ಅ...
18-07-25 10:59 pm
20-07-25 04:47 pm
HK News Desk
Kerala Nurse Yemen; ನರ್ಸ್ ನಿಮಿಷಾ ಉಳಿವಿಗೆ ಗಲ್ಫ...
16-07-25 09:58 pm
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
21-07-25 04:03 am
Mangaluru Correspondent
Mangalore Bantwal Rural PSI, Suicide: ಬಂಟ್ವಾಳ...
20-07-25 10:35 pm
Dharmasthala Case, SIT, Pronab Mohanty: ಧರ್ಮಸ...
20-07-25 03:06 pm
MRPL, MP Brijesh Chowta, Mangalore: MRPL ಹಸಿರ...
19-07-25 10:01 pm
Mangalore, Derlakatte Raid: ನಿಯಮ ಉಲ್ಲಂಘಿಸಿ ಕಾ...
19-07-25 07:18 pm
20-07-25 08:52 pm
HK News Desk
ಅಮೆರಿಕ, ಕೆನಡಾದಿಂದಲೂ ವಿದೇಶಿ ಫಂಡ್, ಯುವತಿಯರೇ ಟಾರ...
20-07-25 12:16 pm
Fraudster Roshan Saldanha, Fraud: ಬಹುಕೋಟಿ ವಂಚ...
19-07-25 09:25 pm
Mangalore Conman Roshan Saldanha Arrest: ಚಾಲಾ...
19-07-25 12:26 pm
Mangalore crime, cyber crime: ಮುಂಬೈ ಪೊಲೀಸ್ ಅಧ...
18-07-25 12:40 pm