ಬ್ರೇಕಿಂಗ್ ನ್ಯೂಸ್
20-04-23 11:02 pm HK News Desk ದೇಶ - ವಿದೇಶ
ಜಮ್ಮು, ಎ.20: ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದ ಜಮ್ಮು ಕಾಶ್ಮೀರದ ಬಾಲಕಿಯ ಶಾಲೆ ಅಭಿವೃದ್ಧಿಗೆ 91 ಲಕ್ಷ ರೂ. ಸರ್ಕಾರದಿಂದ ಮಂಜೂರಾಗಿದೆ. ಸದ್ಯ ಬಾಲಕಿ ಸಂತಸಗೊಂಡಿದ್ದು, ಪ್ರಧಾನಿ ಮೋದಿ ಅವರಿಗೆ ಥ್ಯಾಂಕ್ಯೂ ಹೇಳಿದಿದ್ದಾಳೆ.
ಜಮ್ಮು ಮತ್ತು ಕಾಶ್ಮೀರದ ಕಠುವಾ ಜಿಲ್ಲೆಯ ಲೋಹಾಯ್ ಮಲ್ಹಾರ್ ಎಂಬ ಗ್ರಾಮದ 3ನೇ ತರಗತಿ ವಿದ್ಯಾರ್ಥಿನಿ ಸೀರಾತ್ ನಾಜ್ ಕೆಲ ದಿನಗಳ ಮುನ್ನ ತನ್ನ ಶಾಲೆಯ ದುಃಸ್ಥಿತಿಯ ಬಗ್ಗೆ ಮಾಡಿದ್ದ ವಿಡಿಯೊ ವೈರಲ್ ಆಗಿತ್ತು. ಕೇವಲ 5 ನಿಮಿಷ ಇರುವ ಈ ವಿಡಿಯೋವನ್ನು ಬಾಲಕಿ ತನ್ನ ಪರಿಚಯ ಹಾಗೂ ಮೋದಿ ಅವರ ಕುಶಲೋಪದಿ ವಿಚಾರಿಸಿ ಆರಂಭಿಸುತ್ತಾಳೆ.

''ನನ್ನ ಶಾಲೆ ಎಷ್ಟು ಕೊಳಕಾಗಿದೆ ನೋಡಿ ಮೋದಿ ಜೀ, ಈ ಕಲ್ಲು ಹಾಗೂ ಮಣ್ಣು ಎದ್ದಿರುವ ನೆಲದ ಮೇಲೆ ಕುಳಿತುಕೊಂಡು ನಾವು ಪಾಠ ಆಲಿಸುವುದಾದರೂ ಹೇಗೆ? ಶಾಲೆಯ ನೆಲ ಗಲೀಜಾಗಿದ್ದು, ನಮ್ಮ ಬಟ್ಟೆ ಕೊಳೆಯಾಗುತ್ತದೆ. ಶಾಲೆಯಲ್ಲಿ ಸೂಕ್ತ ಶೌಚಾಲಯವೂ ಇಲ್ಲ. ಹೀಗಾಗಿ, ಈ ಸಮಸ್ಯೆಗೆ ಪರಿಹಾರ ಕೊಡಿ. ದಯವಿಟ್ಟು ನಮಗಾಗಿ ಒಂದು ಒಳ್ಳೆ ಶಾಲೆ ಕಟ್ಟಿಸಿಕೊಡಿ,'' ಎಂದು ಬಾಲಕಿ ಸೀರಾತ್ ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಳು.
ಆ ವಿದ್ಯಾರ್ಥಿನಿಯ ಕೋರಿಕೆಗೆ ಪ್ರಧಾನಿ ಕಾರ್ಯಾಲಯ ಸ್ಪಂದಿಸಿದೆ. ಜಮ್ಮು ಶಾಲಾ ಶಿಕ್ಷಣ ಇಲಾಖೆ ನಿರ್ದೇಶಕ ಡಾ. ರವಿ ಶಂಕರ್ ಶರ್ಮಾ ಅವರು ಲೋಹಾಯ್ ಹಳ್ಳಿಯಲ್ಲಿರುವ ಬಾಲಕಿಯ ಶಾಲೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಶಾಲೆ ಅಭಿವೃದ್ಧಿಗೆ 91 ಲಕ್ಷ ರೂ. ಮಂಜೂರು ;
ಶಾಲೆಯನ್ನು ದುರಸ್ತಿ ಮಾಡಿ , ಆಧುನಿಕವಾಗಿ ಅಭಿವೃದ್ಧಿಗೊಳಿಸುವ ಸಲುವಾಗಿ 91 ಲಕ್ಷ ರೂ. ಗಳನ್ನು ಇಲಾಖೆಯು ಮಂಜೂರು ಮಾಡಿದೆ. ಬಾಲಕಿ ಸೀರಾತ್ ನಾಜ್ ಖುಷಿಯಾಗಿದ್ದು, ಮತ್ತೊಂದು ವಿಡಿಯೊ ಹರಿಬಿಟ್ಟಿದ್ದಾಳೆ. ಅದರಲ್ಲಿ, ತಾನು ಐಎಎಸ್ ಅಧಿಕಾರಿಯಾಗಬೇಕು ಎಂದು ಕನಸು ಹೊಂದಿರುವ ಬಗ್ಗೆ ಮಾತನಾಡಿದ್ದಾಳೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾಳೆ.
ಈ ಬಾಲಕಿ ಮಾಡಿದ್ದ ವಿಡಿಯೋವನ್ನು ಮರ್ಮಿಕ್ ನ್ಯೂಸ್ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ಪ್ರಕಟ ಮಾಡಲಾಗಿತ್ತು. ಈ ವಿಡಿಯೋಗೆ ಸದ್ಯ 2 ಮಿಲಿಯನ್ ಹೆಚ್ಚು ಜನ ವೀಕ್ಷಣೆ ಮಾಡಿದ್ದಾರೆ. ಮಾತ್ರವಲ್ಲದೇ ಒಂದೂವರೆ ಲಕ್ಷ ಮಂದಿ ಮಂದಿ ಈ ವಿಡಿಯೋ ಲೈಕ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
The Jammu and Kashmir government has begun work to modernise the school days after a Class 3 student pleaded with Prime Minister Narendra Modi in a video message to guarantee basic amenities at her school in the Kathua area. Ravi Shankar Sharma, the director of school education in Jammu, visited the public school that is located in the isolated Lohai-Malhar block after seeing Seerat Naaz's video appeal to the prime minister last week, which was extensively circulated on social media.
21-02-26 11:27 am
HK News Desk
ಹಾಸನಾಂಬೆ ಉತ್ಸವ ಟೆಂಡರ್ನಲ್ಲಿ ಭಾರೀ ಗೋಲ್ಮಾಲ್ ? ;...
20-02-26 09:20 pm
ಸಾರಿಗೆ ನೌಕರರ ಮುಷ್ಕರ ತಾತ್ಕಾಲಿಕ ಹಿಂದಕ್ಕೆ ; 26 ತ...
19-02-26 09:29 pm
ಪರಮೇಶ್ವರ್ ಅಥವಾ ಡಿಕೆಶಿ ಯಾರಾಗ್ತಾರೆ ಮುಂದಿನ ಮುಖ್ಯ...
19-02-26 03:11 pm
ವಿಧಾನಸೌಧ ಒಳಗಡೆ ಮಾಧ್ಯಮಗಳಿಗೆ ಲಕ್ಷ್ಮಣ ರೇಖೆ ; ಭದ್...
18-02-26 09:02 pm
21-02-26 05:01 pm
HK News Desk
ಸುಂಕ ನೀತಿ ಕಾನೂನುಬಾಹಿರ ಎಂದ ಅಮೆರಿಕ ಸುಪ್ರೀಂ ಕೋರ್...
21-02-26 03:07 pm
ಎಐ ಶೃಂಗಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಶರ್ಟ್ ಬಿ...
20-02-26 08:45 pm
ಗಲ್ಫ್ ದೇಶಗಳತ್ತ ಅಮೆರಿಕದ ಯುದ್ಧ ವಿಮಾನಗಳು ; ಇರಾನ್...
19-02-26 11:04 pm
'ಉಚಿತ' ಕೊಡುಗೆಗಳು ದೇಶದ ಅಭಿವೃದ್ಧಿಗೆ ಅಡ್ಡಿ ; ಆದಾ...
19-02-26 10:10 pm
21-02-26 09:30 pm
Mangalore Correspondent
ಲೂಡೋ ಆಡುವಾಗ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟು ವರ್...
21-02-26 09:02 pm
Mangalore, SIT, Sridhar: ಶಿಬಾಜೆ ಶ್ರೀಧರ ಮುಗೇರ...
20-02-26 06:05 pm
Kotekar, Mangalore News: ಕೋಟೆಕಾರು ಪ.ಪಂ ಸದಸ್ಯ...
20-02-26 04:18 pm
ಕುತ್ಲೂರಿನಲ್ಲಿ ನಕ್ಸಲ್ ಕರಪತ್ರ ಹಂಚಿದ್ದ ಪ್ರಕರಣ ;...
19-02-26 10:37 pm
21-02-26 05:50 pm
HK News Desk
ಬೆಂಗಳೂರಿನಲ್ಲಿ ಭಯೋತ್ಪಾದಕ ಜಾಲ ; ಎನ್ಐಎ ವಾಂಟೆಡ್ ಲ...
21-02-26 04:29 pm
ಕೊಲೆ- ಆತ್ಮಹತ್ಯೆ-ನಾಪತ್ತೆ ಕತೆ ಕಟ್ಟಿದ್ದ ಮಹಿಳೆ ;...
21-02-26 02:22 pm
Mangalore Police, Safwan Hussain Arrest : ನಟೋ...
20-02-26 10:08 pm
ಲಕ್ಕುಂಡಿ ನಿಧಿ ಹೆಸ್ರಲ್ಲಿ ಜನರಿಗೆ ಟೋಪಿ ; ಹಂಡಿಯೊಳ...
20-02-26 09:07 pm