ಬ್ರೇಕಿಂಗ್ ನ್ಯೂಸ್
19-05-23 08:28 pm HK News Desk ದೇಶ - ವಿದೇಶ
ನವದೆಹಲಿ, ಮೇ 19 : ತಕ್ಷಣದಿಂದಲೇ ಎರಡು ಸಾವಿರದ ನೋಟುಗಳನ್ನು ದೇಶಾದ್ಯಂತ ಚಲಾವಣೆ ನಿಲ್ಲಿಸುವಂತೆ ಬ್ಯಾಂಕುಗಳಿಗೆ ರಿಸರ್ವ್ ಬ್ಯಾಂಕ್ ಸೂಚನೆ ನೀಡಿದೆ. 2016ರಲ್ಲಿ ಜಾರಿಗೆ ತಂದಿದ್ದ ಪಿಂಕ್ ನೋಟುಗಳನ್ನು ಈಗ ಹಿಂಪಡೆದಿದ್ದು ನೋಟುಗಳನ್ನು ದೊಡ್ಡ ಪ್ರಮಾಣದಲ್ಲಿ ಕೂಡಿಟ್ಟವರಿಗೆ ಕಷ್ಟ ಎದುರಾಗಿದೆ.
ಹಾಲಿ ಇರುವ ನೋಟುಗಳನ್ನು ಮೇ 23ರಿಂದಲೇ ಬ್ಯಾಂಕಿನಲ್ಲಿ ಬದಲಾವಣೆ ಮಾಡಿಕೊಳ್ಳಲು ಸಲಹೆ ನೀಡಲಾಗಿದೆ. ಒಂದು ಬಾರಿಗೆ 20 ಸಾವಿರ ರೂಪಾಯಿ ಮೌಲ್ಯದ ನೋಟುಗಳನ್ನಷ್ಟೆ ಬದಲು ಮಾಡಿಕೊಳ್ಳಬಹುದು. ಸೆಪ್ಟೆಂಬರ್ 30ರ ವರೆಗೆ ನೋಟು ಬದಲಿಸಿಕೊಳ್ಳಲು ಅವಕಾಶ ಇರುತ್ತದೆ.
2018ರಲ್ಲಿಯೇ 2000 ರೂಪಾಯಿ ನೋಟುಗಳ ಮುದ್ರಣವನ್ನು ಸ್ಥಗಿತಗೊಳಿಸಲಾಗಿತ್ತು. ಈ ಕುರಿತಾಗಿ ಸದನಕ್ಕೆ ಕೇಂದ್ರ ಸರ್ಕಾರ ಮಾಹಿತಿ ನೀಡಿತ್ತು. ಇದೀಗ ಕ್ಲೀನ್ ನೋಟ್ ಅಭಿಯಾನದಡಿ ನೋಟ್‌ಗಳನ್ನು ಹಿಂಪಡೆಯಲು ಆರ್‌ಬಿಐ ಮುಂದಾಗಿದೆ.
ಮೇ 23, 2023 ರಿಂದ ಯಾವುದೇ ಬ್ಯಾಂಕ್‌ನಲ್ಲಿ ರೂ. 2000 ಮುಖ ಬೆಲೆಯ ಬ್ಯಾಂಕ್ ನೋಟುಗಳನ್ನು ಇತರ ಮುಖಬೆಲೆಯ ನೋಟುಗಳಾಗಿ ವಿನಿಮಯ ಮಾಡಿಕೊಳ್ಳಬಹುದು. ಎಲ್ಲಾ ಬ್ಯಾಂಕುಗಳು ಸೆಪ್ಟೆಂಬರ್ 30, 2023 ರ ವರೆಗೆ ರೂ. 2000 ಬ್ಯಾಂಕ್ ನೋಟುಗಳಿಗೆ ಠೇವಣಿ ಅಥವಾ ವಿನಿಮಯ ಸೌಲಭ್ಯವನ್ನು ಒದಗಿಸುತ್ತವೆ ಎಂದು ಆರ್‌ಬಿಐ ಹೇಳಿಕೆಯಲ್ಲಿ ತಿಳಿಸಿದೆ. ಆದರೆ ಈ ಅವಧಿಯಲ್ಲಿ ಎರಡು ಸಾವಿರದ ನೋಟು ಚಲಾವಣೆಯಲ್ಲಿ ಇರುತ್ತದೆ. ಬದಲಿಗೆ, ಇದರ ವ್ಯಾಲಿಡಿಟಿ ಅವಧಿ ಇನ್ನು ನಾಲ್ಕು ತಿಂಗಳಷ್ಟೆ ಇರುತ್ತದೆ ಎಂದು ಅರ್ಥ ಮಾಡಿಕೊಳ್ಳಬಹುದು.
The Reserve Bank of India (RBI) on Friday announced that Rs 2,000 currency notes are being withdrawn from circulation. In a release, the central bank said that this is being done under its "Clean Note Policy".
14-09-25 05:18 pm
Bangalore Correspondent
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
14-09-25 10:49 pm
HK News Desk
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
14-09-25 10:55 pm
Mangalore Correspondent
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
Kundapura Accident, Samba Deer, Bike: ಕುಂದಾಪು...
13-09-25 11:05 pm
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
Mahesh Vikram Hegde Arrested, Post Card Kanna...
12-09-25 09:25 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm