ಬ್ರೇಕಿಂಗ್ ನ್ಯೂಸ್
04-06-23 08:55 pm HK News Desk ದೇಶ - ವಿದೇಶ
ಭುವನೇಶ್ವರ್, ಜೂನ್ 4: ಬಾಲಸೋರ್ ರೈಲು ದುರಂತ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಲು ರೈಲ್ವೇ ಮಂಡಳಿ ಶಿಫಾರಸು ಮಾಡಿದೆ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ದೇಶದ ಘನಘೋರ ರೈಲು ದುರಂತ ಇದಾಗಿದ್ದು, 290ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದರು. ಸಾವಿರಾರು ಮಂದಿ ಗಾಯಗೊಂಡಿದ್ದರೆ, 50 ಕ್ಕೂ ಹೆಚ್ಚು ಮಂದಿ ಸ್ಥಿತಿ ಗಂಭೀರವಾಗಿದೆ. ಈ ನಡುವೆ, ಬಾಲಸೋರ್‌ನ ಎರಡು ರೈಲು ಮಾರ್ಗಗಳನ್ನು ಭಾನುವಾರ ರಾತ್ರಿ ಪುನಃಸ್ಥಾಪಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ದುರಂತ ಪ್ರದೇಶದಲ್ಲಿ ಹಳಿಗಳ ಮರುಸ್ಥಾಪನೆ ಕಾರ್ಯ ವೇಗವಾಗಿ ನಡೆಯುತ್ತಿದೆ ಎಂದು ಸಚಿವರು ಟ್ವೀಟ್‌ಗಳಲ್ಲಿ ಉಲ್ಲೇಖಿಸಿದ್ದಾರೆ. ಬಾಲಸೋರ್‌ನ ಅಪಘಾತ ಸ್ಥಳದಲ್ಲಿ ಓವರ್‌ಹೆಡ್ ವಿದ್ಯುದ್ದೀಕರಣ ಕಾರ್ಯ ಆರಂಭವಾಗಿದೆ ಎಂದವರು ತಿಳಿಸಿದ್ದಾರೆ.
ದುರಂತದಲ್ಲಿ ಸಾವನ್ನಪ್ಪಿದ ಸುಮಾರು 290 ಜನರು ವಿವಿಧ ರಾಜ್ಯಕ್ಕೆ ಸೇರಿದವರಾಗಿದ್ದಾರೆ. ಹಾಗಾಗಿ ಮೃತರನ್ನು ಗುರುತಿಸುವುದು ಕಷ್ಟಕರವಾಗಿದೆ. ಈ ಹಿನ್ನೆಲೆಯಲ್ಲಿ ಮೃತರ ಫೋಟೋಗಳನ್ನು ಮೂರು ವೆಬ್‌ಸೈಟ್‌ಗಳಲ್ಲಿ ಅಪ್ಲೋಡ್ ಮಾಡಲಾಗಿದೆ. ರೈಲು ಪ್ರಯಾಣಿಕರ ವಿವರಗಳನ್ನು ಮೃತರ ಛಾಯಾಚಿತ್ರಗಳೊಂದಿಗೆ Special Relief Commissioner (SRC), Bhubaneswar Municipal Corporation ಮತ್ತು Odisha State Disaster Management Authority ವೆಬ್‌ಸೈಟ್‌ಗಳಲ್ಲಿ ಅಪ್ಲೋಡ್ ಮಾಡಲಾಗಿದೆ ಎಂದು ಒಡಿಶಾ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
1929 ಸಹಾಯವಾಣಿಗೆ ಕರೆ ಮಾಡಲು ಸೂಚನೆ
ಆದರೆ ಸತ್ತವರ ಚಿತ್ರಗಳು ಭಯಾನಕವಾಗಿವೆ ಎಂದವರು ಹೇಳಿದ್ದು ಈ ಹಿನ್ನೆಲೆಯಲ್ಲಿ ಒಡಿಶಾ ಪರಿಹಾರ ಆಯೋಗದ ಲಿಖಿತ ಅನುಮತಿ ಇಲ್ಲದೆ ಯಾರೂ ಈ ಫೋಟೋಗಳನ್ನು ಪ್ರಕಟಿಸಬಾರದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೃತರನ್ನು ಗುರುತಿಸಿದ ಸಂತ್ರಸ್ತರ ಕುಟುಂಬಗಳು 1929 ಸಹಾಯವಾಣಿಗೆ ಕರೆ ಮಾಡಲು ತಿಳಿಸಲಾಗಿದೆ.
ಒಡಿಶಾದ ರಾಜಧಾನಿ ಭುವನೇಶ್ವರದ ಮುನ್ಸಿಪಲ್ ಕಮಿಷನರ್ ಕಚೇರಿಯಲ್ಲಿ ಕಂಟ್ರೋಲ್ ರೂಮ್ ಸಹ ಸ್ಥಾಪಿಸಲಾಗಿದೆ. ಚಿಕಿತ್ಸೆ ಪಡೆಯುತ್ತಿರುವವರ ವಿವರಗಳು, ಮೃತರ ವಿವರಗಳು, ಮಾಹಿತಿ ಮತ್ತು ಮೃತದೇಹಗಳನ್ನು ಗುರುತಿಸಲು ಸಹಾಯ ಮಾಡಲು ಜನರು ಈ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೂರು ವೆಬ್‌ಸೈಟ್‌ಗಳ ಲಿಂಕ್ ಮೂಲಕ ರೈಲು ಅಪಘಾತಕ್ಕೊಳಗಾದವರನ್ನು ಸಹ ಪತ್ತೆಹಚ್ಚಬಹುದು ಎಂದು ಉಲ್ಲೇಖಿಸಲಾಗಿದೆ.
The Union Railway minister Ashwini Vaishnaw on Sunday said that the railway board has recommended a Central Bureau of Investigation (CBI) probe into the horrific triple train accident in Odisha's Balasore that killed at least 275 people and injured over 1,100.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 12:33 pm
HK News Desk
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 18ರಂದು ಶಬರಿಮಲೆಗೆ...
08-05-25 12:47 pm
09-05-25 01:32 pm
Mangalore Correspondent
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
Satish Kumapla, Mangalore, U T Khader: ಮೂಡಾ ಅ...
08-05-25 09:06 pm
Mangalore Rohan Corporation, Shah Rukh Khan:...
08-05-25 04:52 pm
Mangalore, Suhas Shetty, NIA, Sunil Kumar: ಸು...
08-05-25 04:14 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm