ಬ್ರೇಕಿಂಗ್ ನ್ಯೂಸ್
08-06-23 10:34 pm HK News Desk ದೇಶ - ವಿದೇಶ
ಭುವನೇಶ್ವರ್, ಜೂನ್ 8: ಒಡಿಶಾ ರೈಲು ದುರಂತದ ಬಗ್ಗೆ ಪ್ರಾಥಮಿಕ ತನಿಖೆಗೆ ನೇಮಕಗೊಂಡಿದ್ದ ರೈಲ್ವೇಯ ಉನ್ನತ ಮಟ್ಟದ ಐವರು ಹಿರಿಯ ಅಧಿಕಾರಿಗಳ ಪೈಕಿ ಒಬ್ಬರು ಪ್ರಾಥಮಿಕ ವರದಿ ಬಗ್ಗೆ ಆಕ್ಷೇಪ ಸೂಚಿಸಿದ್ದಾರೆ. ರೈಲ್ವೇಯಲ್ಲಿ ಸೆಕ್ಷನ್ ಇಂಜಿನಿಯರ್ ಆಗಿರುವ ಎ.ಕೆ.ಮಹಾಂತ, ಈ ಬಗ್ಗೆ ರೈಲ್ವೇ ಮಂಡಳಿಗೆ ಪತ್ರ ಬರೆದು ತನ್ನ ವರದಿಯನ್ನು ಪ್ರತ್ಯೇಕವಾಗಿ ಸಲ್ಲಿಸಿದ್ದಾರೆ. ಅದರಲ್ಲಿ ಸಿಗ್ನಲ್ ವ್ಯವಸ್ಥೆಯ ಲೋಪದಿಂದಲೇ ದುರಂತ ಆಗಿದೆ ಎಂದು ಉಲ್ಲೇಖ ಮಾಡಿದ್ದಾರೆ.
ಐವರು ಸಮಿತಿಯ ಸದಸ್ಯರು ಕೋರಮಂಡಲ್ ಎಕ್ಸ್ ಪ್ರೆಸ್ ರೈಲು ಮೈನ್ ಲೈನಲ್ಲಿ ತೆರಳಲು ಸಿಗ್ನಲ್ ಇದ್ದರೂ, ಲೂಪ್ ಲೈನಲ್ಲಿ ಹೋಗಿರುವುದೇ ದುರ್ಘಟನೆಗೆ ಕಾರಣ ಎಂದು ಹೇಳಿದ್ದರು. ಇಂಟರ್ ಲಾಕಿಂಗ್ ವ್ಯವಸ್ಥೆಯಲ್ಲಿ ಆಗಿದ್ದ ಲೋಪದಿಂದಾಗಿ ರೈಲು ಲೂಪ್ ಲೈನಲ್ಲಿ ಸಾಗಿ ಅಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿಯಾಗಿತ್ತು. ಆ ಸಂದರ್ಭದಲ್ಲಿ ಕೋರಮಂಡಲ್ ಎಕ್ಸ್ ಪ್ರೆಸ್ ರೈಲು ಗಂಟೆಗೆ 123 ಕಿಮೀ ವೇಗದಲ್ಲಿ ಸಂಚರಿಸುತ್ತಿತ್ತು ಎಂದು ವರದಿಯಲ್ಲಿ ಹೇಳಿದ್ದರು. ಆದರೆ ವರದಿಯ ಕೆಲವು ಅಂಶಗಳ ಬಗ್ಗೆ ಮಹಾಂತ ವಿರೋಧ ವ್ಯಕ್ತಪಡಿಸಿದ್ದು, ಬೇರೆಯದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಹಾಂತ ನೀಡಿರುವ ವರದಿ ಪ್ರಕಾರ, ಕ್ರಾಸಿಂಗ್ ಗೇಟ್ (ಲೂಪ್ ಲೈನ್) ಇರುವ ನಂಬರ್ 94 ತಲುಪುವ ಮೊದಲೇ ರೈಲು ಉರುಳಿ ಬಿದ್ದಿದೆ. ಹೀಗಾಗಿ ರೈಲು ಲೂಪ್ ಲೈನ್ ಬರುವ ಮೊದಲೇ ಘಟನೆ ಸಂಭವಿಸಿದೆ ಎಂದು ಖರಗ್ ಪುರ ರೈಲ್ವೇ ಕಂಟ್ರೋಲರ್ ಅವರಿಗೆ ನೀಡಿದ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಐವರು ಸಮಿತಿಯ ಪ್ರಾಥಮಿಕ ವರದಿಗೆ ಸಹಿ ಹಾಕಿದ್ದರೂ, ಆನಂತರ ಮಹಾಂತ ಅವರು ತಾಂತ್ರಿಕ ಅಂಶಗಳನ್ನು ಪರಿಗಣಿಸಿ ಪ್ರತ್ಯೇಕ ವರದಿ ನೀಡಿರುವುದು ರೈಲ್ವೇ ಮಂಡಳಿಯಲ್ಲೇ ಅಲ್ಲೋಲ ಕಲ್ಲೋಲ ಉಂಟುಮಾಡಿದೆ. ಸಿಬಿಐ ತನಿಖೆ ಎತ್ತಿಕೊಂಡಿರುವಾಗಲೇ ರೈಲ್ವೇ ಅಧಿಕಾರಿ ಪ್ರಾಥಮಿಕ ತನಿಖಾ ವರದಿಯ ಬಗ್ಗೆ ಆಕ್ಷೇಪ ಎತ್ತಿರುವುದು ಮಹತ್ವ ಮೂಡಿಸಿದೆ.
ದಿ ಹಿಂದು ಪತ್ರಿಕೆಯವರು ರೈಲ್ವೇಯ ಉನ್ನತ ಮಟ್ಟದ ಅಧಿಕಾರಿಯೊಬ್ಬರಲ್ಲಿ ಈ ಬಗ್ಗೆ ಅಭಿಪ್ರಾಯ ಕೇಳಿದಾಗ, ಮೈನ್ ಲೈನಲ್ಲಿ ಗ್ರೀನ್ ಸಿಗ್ನಲ್ ಇರುವಾಗ ರೈಲು ಲೂಪ್ ಲೈನ್ ಮೂಲಕ ಅಡ್ಡದಾರಿಯಲ್ಲಿ ಸಾಗಲು ಸಾಧ್ಯವೇ ಇಲ್ಲ. ಹಾಗಿದ್ದರೂ, ರೈಲು ಲೂಪ್ ಲೈನಲ್ಲಿ ಸಾಗಲು ಅವಕಾಶ ಇರುತ್ತದೆ. ಹಾಗೊಂದ್ವೇಳೆ, ರೈಲು ತಪ್ಪಾಗಿ ಸಾಗಿದ್ದಲ್ಲಿ ಡಾಟಾ ರೆಕಾರ್ಡ್ ಅಲ್ಲಿನ ಪೂರ್ತಿ ಚಿತ್ರಣವನ್ನು ಕೊಡುತ್ತದೆ. ಸಿಗ್ನಲ್ ಯಾವ ರೀತಿಯಿತ್ತು, ಟ್ರೈನ್ ಯಾವ ಹಳಿಯಲ್ಲಿ ಸಾಗಿತ್ತು ಮತ್ತು ಹೇಗೆ ರೈಲು ಪಲ್ಟಿಯಾಯಿತು ಎನ್ನುವ ಬಗ್ಗೆ ತಾಂತ್ರಿಕ ಅಂಶಗಳು ಸಿಗುತ್ತವೆ ಎಂದಿದ್ದಾರೆ.
One of the five top-level senior officials of the Railways, who were appointed for a preliminary inquiry into the Odisha train tragedy, has objected to the preliminary report. A K Mahanta, a section engineer with the Railways, has written to the Railway Board in this regard and submitted his report separately. He mentioned that the tragedy was caused by a fault in the signalling system.
21-07-25 10:38 pm
Bangalore Correspondent
"Divine Drama: Archbishop, Justices Join Hand...
21-07-25 05:56 pm
SIT, Dharmasthala Case, Dk Shivakumar: ಧರ್ಮಸ್...
21-07-25 01:31 pm
Tulu Nadu High Court Advocates, Bangalore; ಯೇ...
21-07-25 04:16 am
ಅಣ್ಣಾಮಲೈಗೆ ಬಿಜೆಪಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಕ...
20-07-25 08:35 pm
21-07-25 11:23 pm
HK News Desk
Brijesh Chowta, Mangalore, MP: ಸ್ಟ್ಯಾಂಡ್ ಅಪ್...
21-07-25 11:20 pm
Jagdeep Dhankhar; ಆರೋಗ್ಯ ಸಮಸ್ಯೆ ; 74 ವರ್ಷದ ಉಪ...
21-07-25 10:41 pm
ಬಾಂಗ್ಲಾ ರಾಜಧಾನಿ ಢಾಕಾದಲ್ಲಿ ವಾಯುಪಡೆ ತರಬೇತಿ ವಿಮಾ...
21-07-25 09:56 pm
ತನ್ನ ಜೊತೆಗೆ ಲಿವ್ ಇನ್ ರಿಲೇಶನ್ನಲ್ಲಿದ್ದ ಎಎಸ್ಐ ಯು...
20-07-25 04:47 pm
22-07-25 11:19 am
Mangalore Correspondent
High Drama in Dharmasthala, Fake Godman Remar...
21-07-25 06:42 pm
ಉಳ್ಳಾಲಕ್ಕೆ ಎರಡು ಅಲ್ಪಸಂಖ್ಯಾತ ಹೆಣ್ಮಕ್ಕಳ ವಸತಿಯುತ...
21-07-25 03:11 pm
ತನಿಖೆ ಆಗೋ ಸಂದರ್ಭದಲ್ಲಿ ನಿರ್ಣಯಕ್ಕೆ ಬರೋದಲ್ಲ, ಪವಿ...
21-07-25 02:11 pm
Dharmasthala SIT, Parshwanath Jain; ಸರ್ಕಾರದ ಎ...
21-07-25 04:03 am
21-07-25 11:01 pm
HK News Desk
Roshan Saldanha Fraud, CID Case: ಬಿಹಾರ ಉದ್ಯಮಿ...
21-07-25 10:17 pm
S T Srinivas, Ankola Port Scam: ಅಂಕೋಲಾ ಕೇಣಿಯಲ...
20-07-25 08:52 pm
ಅಮೆರಿಕ, ಕೆನಡಾದಿಂದಲೂ ವಿದೇಶಿ ಫಂಡ್, ಯುವತಿಯರೇ ಟಾರ...
20-07-25 12:16 pm
Fraudster Roshan Saldanha, Fraud: ಬಹುಕೋಟಿ ವಂಚ...
19-07-25 09:25 pm