ಬ್ರೇಕಿಂಗ್ ನ್ಯೂಸ್
07-07-23 10:43 am HK News Desk ದೇಶ - ವಿದೇಶ
ಸಿಡ್ನಿ, ಜುಲೈ 07: ಭಾರತ ಮೂಲದ ನರ್ಸಿಂಗ್ ವಿದ್ಯಾರ್ಥಿನಿಯನ್ನು ಆಕೆಯ ಪ್ರಿಯಕರನೇ ಸಜೀವ ಸಮಾಧಿ ಮಾಡಿದ್ದ ಅಮಾನುಷ ಕೃತ್ಯ ನ್ಯಾಯಾಲಯದ ವಿಚಾರಣೆ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ.
ಅಡಿಲೇಡ್ ನಗರದಲ್ಲಿ ವಾಸವಿದ್ದ ವಿದ್ಯಾರ್ಥಿನಿ ಜಾಸ್ಮೀನ್ ಕೌರ್ ಮತ್ತು ತಾರಿಕ್ ಜೋತ್ ಸಿಂಗ್ ಪರಸ್ಪರ ಪ್ರೀತಿಸುತ್ತಿದ್ದರು. ಈ ನಡುವೆ, ಜಾಸ್ಮಿನ್ ಕೌರ್ ತನ್ನ ಪ್ರೀತಿಯನ್ನು ನಿರಾಕರಿಸುತ್ತಿದ್ದಾಳೆಂಬ ಕಾರಣಕ್ಕೆ ತಾರಿಕ್ ಆಕೆಯನ್ನು ಕೊಲ್ಲಲು ಪ್ಲಾನ್ ಹಾಕಿದ್ದ. 2021ರ ಮಾರ್ಚ್ ತಿಂಗಳಲ್ಲಿ ಆಡಿಲೇಡ್ ನಿಂದ ಆಕೆಯನ್ನು ಅಪಹರಿಸಿ ಕಾರಿನ ಹಿಂಭಾಗದ ಡಿಕ್ಕಿಯಲ್ಲಿರಿಸಿ 400 ಕಿಮೀ ದೂರಕ್ಕೆ ಪ್ರಯಾಣಿಸಿದ್ದಾನೆ. ಯುವತಿ ಬಾಯಿಗೆ ಟೇಪ್ ನಲ್ಲಿ ಕಟ್ಟಿ ಕೈಕಾಲುಗಳನ್ನೂ ಕಟ್ಟಿಹಾಕಿ ಕಾರಿನಲ್ಲಿ ಕರೆದೊಯ್ದಿದ್ದ. ಬಳಿಕ ಫ್ಲಿಂಡರ್ಸ್ ರೇಂಜ್ ಎಂಬಲ್ಲಿ ಅರೆಪ್ರಜ್ಞೆ ಸ್ಥಿತಿಯಲ್ಲಿದ್ದ ಯುವತಿಯನ್ನು ಜೀವಂತ ಇದ್ದಾಗಲೇ ಮಣ್ಣಿನಲ್ಲಿ ಹೂತು ಹಾಕಿದ್ದಾನೆ.
ಇತ್ತ ಜಾಸ್ಮಿನ್ ಕಾಣೆಯಾದ ಬಗ್ಗೆ ಪೊಲೀಸ್ ದೂರು ದಾಖಲಾಗಿತ್ತು. ಪೊಲೀಸರು ಸಂಶಯದಲ್ಲಿ ಹಳೆ ಬಾಯ್ ಫ್ರೆಂಡ್ ಆಗಿದ್ದ ತಾರಿಕ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಕೊನೆಯ ಬಾರಿಗೆ ಆಕೆ ಮಿಸ್ ಆಗಿದ್ದ ಅಡಿಲೇಡ್ ನಗರದಲ್ಲಿ ತಾರಿಕ್ ಟೇಪ್ ಮತ್ತು ಹಗ್ಗವನ್ನು ಖರೀದಿಸಿದ್ದು ಸಿಸಿಟಿವಿಯಲ್ಲಿ ದಾಖಲಾಗಿತ್ತು. ಇದನ್ನು ಆಧರಿಸಿ ತನಿಖೆ ಚುರುಕುಗೊಳಿಸಿದಾಗ ಕೊಲೆ ಪ್ರಕರಣ ಬಯಲಾಗಿದ್ದಲ್ಲದೆ, ಆರೋಪಿ ತಾರಿಕ್ ನನ್ನು ಕೆಲವೇ ದಿನಗಳಲ್ಲಿ ಬಂಧಿಸಿದ್ದರು.
ಜಾಸ್ಮಿನ್ ಶವ ಹೊರತೆಗೆದು ಪರೀಕ್ಷೆ ನಡೆಸಿದಾಗ ಸಜೀವ ಹೂತು ಹಾಕಿದ್ದು ಮಣ್ಣು ಮುಚ್ಚಿದ್ದರೂ ಉಸಿರಾಡುತ್ತಿದ್ದ ವಿಚಾರ ಬೆಳಕಿಗೆ ಬಂದಿತ್ತು. ಕಾರಿನಲ್ಲಿ ಕೈಕಾಲು ಕಟ್ಟಿ ತಂದು ಗುಂಡಿ ತೋಡಿ ಹಾಗೆಯೇ ಹೂತು ಹಾಕಿರುವುದು ಅತ್ಯಂತ ಅಮಾನುಷ ಕೃತ್ಯ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. ವಿಚಾರಣೆ ಸಂದರ್ಭದಲ್ಲಿ ಪೊಲೀಸರು ನೀಡಿದ್ದ ಸಾಕ್ಷ್ಯ, ಕ್ರೂರವಾಗಿ ಹಿಂಸಿಸಿ ಸಜೀವ ಸಮಾಧಿ ಮಾಡಿರುವ ವಿಚಾರಗಳಿದ್ದವು. ಅಲ್ಲದೆ, ತಾನೊಬ್ಬನೇ ಕೃತ್ಯ ಎಸಗಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದ.
ಸಂತ್ರಸ್ತ ಯುವತಿ ಪರ ವಕೀಲರು, ಅತ್ಯಂತ ಅಮಾನುಷ ಕೃತ್ಯವಾಗಿದ್ದು ಆರೋಪಿಗೆ ಗರಿಷ್ಠ ಶಿಕ್ಷೆಯಾಗಬೇಕೆಂದು ಹೇಳಿದ್ದರು. ನ್ಯಾಯಾಲಯ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಯುವತಿ ತಾಯಿ, ತನ್ನ ಮಗಳನ್ನು ಅಮಾನುಷವಾಗಿ ಕೊಂದ ಆರೋಪಿ ಉಳಿಯಬಾರದು. ಆತನಿಗೆ ಗಲ್ಲು ಶಿಕ್ಷೆಯನ್ನೇ ನೀಡಬೇಕೆಂದು ಆಗ್ರಹ ಮಾಡಿದ್ದರು.
In a horrific act of vengeance, a 21-year-old Punjab-origin nursing student in Australia was abducted by her spurned ex-boyfriend, also from India, driven nearly 650 km and buried alive in South Australia state’s remote Flinders Ranges, a court has heard. Jasmeen Kaur from Adelaide City was killed by Tarikjot Singh in March 2021, a month after reporting him to the police for stalking.
22-07-25 03:02 pm
HK News Desk
Dharmasthala Case, SIT, BJP: ಧರ್ಮಸ್ಥಳ ಪ್ರಕರಣ...
21-07-25 10:38 pm
"Divine Drama: Archbishop, Justices Join Hand...
21-07-25 05:56 pm
SIT, Dharmasthala Case, Dk Shivakumar: ಧರ್ಮಸ್...
21-07-25 01:31 pm
Tulu Nadu High Court Advocates, Bangalore; ಯೇ...
21-07-25 04:16 am
22-07-25 07:21 pm
HK News Desk
Shashi Tharoor, Thiruvananthapuram: ಶಶಿ ತರೂರ್...
22-07-25 03:04 pm
ಕೇರಳ ನರ್ಸ್ ನಿಮಿಷಾ ಪ್ರಿಯಾ ಗಲ್ಲು ಶಿಕ್ಷೆಗೆ ತಡೆ ;...
22-07-25 12:58 pm
ಕೇರಳ ಮಾಜಿ ಮುಖ್ಯಮಂತ್ರಿ, ಶತಾಯುಷಿ, ಸಿಪಿಎಂ ಸ್ಥಾಪಕ...
21-07-25 11:23 pm
Brijesh Chowta, Mangalore, MP: ಸ್ಟ್ಯಾಂಡ್ ಅಪ್...
21-07-25 11:20 pm
22-07-25 01:27 pm
Mangalore Correspondent
Mangalore Landslide, Permanki: ಕೆತ್ತಿಕಲ್ ರೀತಿ...
22-07-25 11:19 am
High Drama in Dharmasthala, Fake Godman Remar...
21-07-25 06:42 pm
ಉಳ್ಳಾಲಕ್ಕೆ ಎರಡು ಅಲ್ಪಸಂಖ್ಯಾತ ಹೆಣ್ಮಕ್ಕಳ ವಸತಿಯುತ...
21-07-25 03:11 pm
ತನಿಖೆ ಆಗೋ ಸಂದರ್ಭದಲ್ಲಿ ನಿರ್ಣಯಕ್ಕೆ ಬರೋದಲ್ಲ, ಪವಿ...
21-07-25 02:11 pm
22-07-25 12:38 pm
HK News Desk
BJP MLA Prabhu Chauhan Son, Rape; ಮದುವೆ ಆಗ್ತೀ...
21-07-25 11:01 pm
Roshan Saldanha Fraud, CID Case: ಬಿಹಾರ ಉದ್ಯಮಿ...
21-07-25 10:17 pm
S T Srinivas, Ankola Port Scam: ಅಂಕೋಲಾ ಕೇಣಿಯಲ...
20-07-25 08:52 pm
ಅಮೆರಿಕ, ಕೆನಡಾದಿಂದಲೂ ವಿದೇಶಿ ಫಂಡ್, ಯುವತಿಯರೇ ಟಾರ...
20-07-25 12:16 pm