ಬ್ರೇಕಿಂಗ್ ನ್ಯೂಸ್
12-07-23 09:00 pm HK News Desk ದೇಶ - ವಿದೇಶ
ಕೊಚ್ಚಿ, ಜುಲೈ 12: ಪ್ರವಾದಿ ಮಹಮ್ಮದ್ ಪೈಗಂಬರ್ ಬಗ್ಗೆ ಪ್ರಶ್ನೆಪತ್ರಿಕೆ ರಚಿಸಿದ್ದ ಕಾರಣಕ್ಕೆ ಪ್ರೊಫೆಸರ್ ಟಿಜೆ ಜೋಸೆಫ್ ಕೈಯನ್ನು ಮತಾಂಧ ಪಿಎಫ್ಐ ಕಾರ್ಯಕರ್ತರು ಕಡಿದು ಹಾಕಿದ್ದ ಪ್ರಕರಣದಲ್ಲಿ ಎನ್ಐಎ ವಿಶೇಷ ನ್ಯಾಯಾಲಯ ಮತ್ತೆ ಆರು ಮಂದಿಯನ್ನು ದೋಷಿಗಳೆಂದು ತೀರ್ಪು ನೀಡಿದೆ.
ಕೇರಳದಲ್ಲಿ ಸಂಚಲನ ಸೃಷ್ಟಿಸಿದ್ದ ಪ್ರಾಧ್ಯಾಪಕರ ಕೈಕಡಿದ ಪ್ರಕರಣದ ಬಗ್ಗೆ ಎನ್ಐಎ ಅಧಿಕಾರಿಗಳು ತನಿಖೆ ನಡೆಸಿದ್ದು, ಮೊದಲ ಬಾರಿಗೆ 2013ರಲ್ಲಿ 31 ಆರೋಪಿಗಳ ವಿರುದ್ಧ ದೋಷಾರೋಪ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಕೋರ್ಟ್ 2015ರಲ್ಲಿ 13 ಮಂದಿಯನ್ನು ದೋಷಿಗಳೆಂದು ತೀರ್ಪಿತ್ತು ಉಳಿದ ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಿತ್ತು. ಕೋರ್ಟ್ ವಿಚಾರಣೆ ಆರಂಭಗೊಂಡ ಮತ್ತಷ್ಟು ಆರೋಪಿಗಳು ಬಂಧಿತರಾಗಿದ್ದು ಮತ್ತು ಆರೋಪಿಗಳೆಂದು ಗುರುತಿಸಲ್ಪಟ್ಟು ತಲೆಮರೆಸಿಕೊಂಡವರು ಸೇರಿ ಮತ್ತೆ 14 ಮಂದಿಯ ಬಗ್ಗೆ ಹೆಚ್ಚುವರಿ ಆರೋಪ ಪಟ್ಟಿಯನ್ನು ಕೋರ್ಟಿಗೆ ಸಲ್ಲಿಸಲಾಗಿತ್ತು. ಒಟ್ಟು 51 ಮಂದಿಯನ್ನು ಆರೋಪಿಗಳೆಂದು ಗುರುತಿಸಿದ್ದು, 45 ಮಂದಿಯ ಬಗ್ಗೆ ದೋಷಾರೋಪ ಸಲ್ಲಿಸಲಾಗಿತ್ತು.
ಕೊರೊನಾ ಲಾಕ್ಡೌನ್ ಕಾರಣದಿಂದ ಕೋರ್ಟ್ ವಿಚಾರಣೆ ವಿಳಂಬವಾಗಿತ್ತು. ಎರಡನೇ ಆರೋಪ ಪಟ್ಟಿಯ ವಿಚಾರಣೆಯನ್ನು 2021ರ ಎಪ್ರಿಲ್ 16ರಂದು ಎನ್ಐಎ ಕೋರ್ಟ್ ಆರಂಭಿಸಿತ್ತು. ಬುಧವಾರ ವಿಚಾರಣೆ ಪೂರ್ತಿಗೊಳಿಸಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರು ಮಂದಿಯನ್ನು ದೋಷಿಗಳೆಂದು ಕೋರ್ಟ್ ತೀರ್ಪು ನೀಡಿದೆ. ತಪ್ಪಿತಸ್ಥರಿಗೆ ಜುಲೈ 13ರ ಗುರುವಾರ ಮಧ್ಯಾಹ್ನ ಕೋರ್ಟ್ ಶಿಕ್ಷೆ ಘೋಷಣೆ ಮಾಡಲಿದೆ. ಆರೋಪಿಗಳಾದ ಸಾಜಿಲ್, ಎಂ.ಕೆ.ನಾಸರ್, ನಜೀಬ್, ಎಂ.ಕೆ.ನೌಶಾದ್, ಪಿಪಿ ಮೊಯ್ದೀನ್ ಕುಂಞ, ಪಿಎಂ ಅಯೂಬ್ ತಪ್ಪಿತಸ್ಥರೆಂದು ಕೋರ್ಟ್ ಹೇಳಿದೆ.
ಪ್ರಶ್ನೆಪತ್ರಿಕೆ ರಚಿಸಿದ್ದ ಕಾರಣಕ್ಕೆ ಕೈ ಕಡಿದಿದ್ದರು
ಇಡುಕ್ಕಿ ಜಿಲ್ಲೆಯ ಮೂವಾಟ್ಟುಪುಝ ಎಂಬಲ್ಲಿ 2010ರ ಜುಲೈ 4ರಂದು ಅಧ್ಯಾಪಕರ ಕೈ ಕಡಿದ ಘಟನೆ ನಡೆದಿತ್ತು. ನ್ಯೂಮ್ಯಾನ್ ಎಂಬ ಖಾಸಗಿ ಕಾಲೇಜಿನಲ್ಲಿ ಬಿಕಾಂ ಪದವಿ ಕಲಿಸುತ್ತಿದ್ದ ಪ್ರೊಫೆಸರ್ ಟಿಜೆ ಜೋಸೆಫ್, ರಚಿಸಿದ್ದರು ಎನ್ನಲಾದ ಪ್ರಶ್ನೆಪತ್ರಿಕೆಯಲ್ಲಿ ಪ್ರವಾದಿ ಬಗ್ಗೆ ಆಕ್ಷೇಪಾರ್ಹ ವಿಚಾರಗಳಿದ್ದವು ಎಂಬ ಕಾರಣಕ್ಕೆ ಕೃತ್ಯ ನಡೆಸಲಾಗಿತ್ತು. ಅಂದು ಜೋಸೆಫ್ ತಮ್ಮ ಕುಟುಂಬದ ಜೊತೆಗೆ ಓಮ್ನಿ ಕಾರಿನಲ್ಲಿ ಚರ್ಚ್ ಪ್ರಾರ್ಥನೆಗೆ ತೆರಳಿ ಹಿಂತಿರುಗುತ್ತಿದ್ದಾಗ ದುಷ್ಕರ್ಮಿಗಳು ಅಡ್ಡಹಾಕಿದ್ದರು. ಏಳು ಮಂದಿಯ ತಂಡ ಜೋಸೆಫ್ ಅವರಿದ್ದ ಕಾರಿಗೆ ಇನ್ನೊಂದು ಕಾರನ್ನು ಅಡ್ಡಲಾಗಿಟ್ಟು ನಿಲ್ಲಿಸಿದ್ದರೆ, ಮತ್ತೊಂದಷ್ಟು ದುಷ್ಕರ್ಮಿಗಳು ಕಾರಿನೊಳಗಿದ್ದ ಜೋಸೆಫ್ ಅವರನ್ನು ಹೊರಗೆಳೆದು ಅಂಗೈ ಮತ್ತು ಪಕ್ಕೆಲುಬು ಭಾಗಕ್ಕೆ ಕತ್ತಿಯಿಂದ ಇರಿದಿದ್ದರು. ಸವಾದ್ ಎನ್ನುವಾತ ಕೈ ಕತ್ತರಿಸಿದ್ದ ಎ 1 ಆರೋಪಿಯಾಗಿದ್ದು, ಇನ್ನೂ ಆತ ತನಿಖಾ ತಂಡಕ್ಕೆ ಸಿಗದೆ ತಲೆಮರೆಸಿಕೊಂಡಿದ್ದಾನೆ.
ಇಸ್ಲಾಂ ಕಾನೂನು ಪ್ರಕಾರ ಕೈಕಡಿವ ಶಿಕ್ಷೆ
ಇಸ್ಲಾಂ ಕಾನೂನು ಪ್ರಕಾರ, ತಪ್ಪೆಸಗಿದ ಕೈ ಉಳಿಯಬಾರದು, ಇನ್ನೆಂದೂ ಆ ಕೈಯಲ್ಲಿ ಬರವಣಿಗೆ ಮಾಡಬಾರದು ಎಂಬ ರೀತಿಯ ಶಿಕ್ಷೆಯನ್ನು ದುಷ್ಕರ್ಮಿಗಳು ನೀಡಿದ್ದರು. ಕೊಲೆ ಮಾಡುವ ಉದ್ದೇಶ ಇದ್ದರೂ, ಜೋಸೆಫ್ ಕುಟುಂಬಸ್ಥರು ದುಷ್ಕರ್ಮಿಗಳಿಗೆ ಅಡ್ಡಹಾಕಿದ್ದು ಮತ್ತು ಸಾರ್ವಜನಿಕರು ಸೇರಿದ್ದರಿಂದ ಹಂತಕರು ಜಾಗ ಬಿಟ್ಟು ಪರಾರಿಯಾಗಿದ್ದರು.
ಕೃತ್ಯಕ್ಕೆ ಪ್ರೇರಣೆ ಕೊಟ್ಟವರಿಗೆ ಶಿಕ್ಷೆಯಾಗಬೇಕು
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಪ್ರೊ.ಟಿ.ಜೆ. ಜೋಸೆಫ್, ಯಾರು ನಿಜವಾದ ಆರೋಪಿಗಳೋ ಅವರಿಗೆ ಶಿಕ್ಷೆಯಾದಾಗ ಮಾತ್ರ ಸಂತ್ರಸ್ತನಿಗೆ ನ್ಯಾಯ ಸಿಕ್ಕಂತಾಗುತ್ತದೆ. ನನ್ನ ಮೇಲೆ ಹಲ್ಲೆ ನಡೆಸಿದವರು ಇನ್ಯಾರದ್ದೋ ಅಣತಿಯಂತೆ ಕೆಲಸ ಮಾಡಿದ್ದರು. ಹಾಗಾಗಿ, ನನ್ನ ಪ್ರಕಾರ ಅವರು ಕೂಡ ಸಂತ್ರಸ್ತರು. ಯಾವುದೋ ನಂಬಿಕೆಯನ್ನು ಆಧರಿಸಿ ನನ್ನ ಮೇಲೆ ದಾಳಿ ನಡೆಸಿದ್ದರು. ನನ್ನ ವಿರುದ್ಧ ಯುದ್ಧ ಆರಂಭಿಸಿದ್ದಾರೆ, ಸತತ ಸೋಲಿನ ನಡುವೆಯೂ ನಾನು ಹೋರಾಡುತ್ತಿದ್ದೇನೆ. ತೆರೆಯ ಹಿಂದಿನ ಅಪರಾಧಿಗಳು ಯಾರಿದ್ದಾರೋ ಅವರಿಗೆ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ.
A special NIA court in Kerala on Wednesday convicted six persons, who are allegedly members of now banned radical Islamic outfit Popular Front of India (PFI), in the sensational hand chopping case of a college professor in Kerala in 2010. Special NIA court judge Anil K Bhaskar found them guilty of attempted murder, conspiracy and various other offences under the Indian Penal Code (IPC) in the second phase of the trial in the case.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 05:22 pm
Mangalore Correspondent
Akanksha Suicide, Dharmasthala, Mangalore: ಏರ...
19-05-25 12:31 pm
Akanksha Death, Punjab, Dharmasthala, Mangalo...
18-05-25 12:42 pm
Ullal, U T Khader, Mangalore: ಎರಡು ವರ್ಷವಾದರೂ...
17-05-25 10:09 pm
Mangalore Balmatta Accident, Bus, Video: ನಿಂತ...
17-05-25 08:52 pm
19-05-25 03:35 pm
HK News Desk
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm
Mangalore Stabbing, Panemangalore, Crime, Att...
16-05-25 11:06 pm