ಬ್ರೇಕಿಂಗ್ ನ್ಯೂಸ್
09-08-23 07:45 pm HK News Desk ದೇಶ - ವಿದೇಶ
ನವದೆಹಲಿ, ಆಗಸ್ಟ್ 9: ಅನರ್ಹತೆಯ ಬಳಿಕ ಸಂಸತ್ ಸ್ಥಾನವನ್ನು ಮತ್ತೆ ಪಡೆದ ರಾಹುಲ್ ಗಾಂಧಿ ಮೊದಲ ಬಾರಿಗೆ ಸಂಸತ್ತಿನಲ್ಲಿ ಸುದೀರ್ಘವಾಗಿ ಮಾತನಾಡಿದ್ದಾರೆ. ಪ್ರತಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿ ಕುರಿತ ಚರ್ಚೆಯಲ್ಲಿ ಪಾಲ್ಗೊಂಡ ರಾಹುಲ್, ಪ್ರಧಾನಿ ಮೋದಿ ಮತ್ತು ಬಿಜೆಪಿಯನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದಾರೆ.
ಹೃದಯದಿಂದ ಮಾತನಾಡುತ್ತೇನೆ ಎನ್ನುತ್ತಲೇ ಮಾತು ಆರಂಭಿಸಿದ ರಾಹುಲ್ ಗಾಂಧಿ, ಭಾರತದ ಹೃದಯ ಮಣಿಪುರಕ್ಕಾಗಿ ಬಡಿದುಕೊಳ್ಳುತ್ತಿದೆ. ಆದರೆ ದೇಶದ ಹೃದಯದ ಮಾತನ್ನು ಕೇಳಲು ಪ್ರಧಾನಿ ಮೋದಿ ತಯಾರಿಲ್ಲ. ಭಾರತವು ಒಂದು ಧ್ವನಿ, ಹೃದಯದ ಧ್ವನಿಯಾಗಿದೆ, ನೀವು ಮಣಿಪುರದಲ್ಲಿ ಆ ಧ್ವನಿಯನ್ನು ಕೊಂದಿದ್ದೀರಿ, ನೀವು ಮಣಿಪುರದಲ್ಲಿ ಭಾರತ ಮಾತೆಯನ್ನು ಕೊಂದಿದ್ದೀರಿ. ನೀವು ದೇಶದ್ರೋಹಿಗಳು, ನನ್ನ ಒಬ್ಬ ತಾಯಿ ಇಲ್ಲಿ ಕುಳಿತಿದ್ದಾರೆ, ಇನ್ನೊಂದು ತಾಯಿ ಭಾರತ ಮಾತೆ. ನೀವು ಅವಳನ್ನು ಮಣಿಪುರದಲ್ಲಿ ಕೊಂದಿದ್ದೀರಿ, ಅದಕ್ಕಾಗಿಯೇ ಪ್ರಧಾನಿ ಮಣಿಪುರಕ್ಕೆ ಭೇಟಿ ನೀಡುವುದಿಲ್ಲ. ನೀವು ಭಾರತ ಮಾತೆಯ ರಕ್ಷಕರಲ್ಲ. ನೀವು ಅವಳ ಹಂತಕರು" ಎಂದು ಕಿಡಿ ಕಾರಿದರು.
ಪ್ರಧಾನಿ ಮೋದಿ ಮಣಿಪುರಕ್ಕೆ ಹೋಗಿಲ್ಲ ಏಕೆಂದರೆ, ಅವರು ಅದನ್ನು ಭಾರತದ ಭಾಗವೆಂದು ಪರಿಗಣಿಸುವುದಿಲ್ಲ. ನೀವು (ಬಿಜೆಪಿ) ಮಣಿಪುರವನ್ನು ವಿಭಜಿಸಿದ್ದೀರಿ. ಸೇನೆಯನ್ನು ನಿಯೋಜಿಸುವ ಮೂಲಕ ಮಣಿಪುರದಲ್ಲಿ ಹಿಂಸಾಚಾರವನ್ನು ತಡೆಯಬಹುದಿತ್ತು. ಆದರೆ ಭಾರತದ ಸೇನೆ ಶಾಂತಿ ಸ್ಥಾಪನೆ ಕೆಲಸ ಯಾಕೆ ಮಾಡಿಲ್ಲ. ಬಿಜೆಪಿಗೆ ದೇಶದಲ್ಲಿ ಶಾಂತಿ ಬೇಕಾಗಿಲ್ಲ. ಮಣಿಪುರದ ಬಳಿಕ ಹರ್ಯಾಣದಲ್ಲಿ ಹಿಂಸೆ ಆರಂಭಿಸಿದ್ದೀರಿ. ಇಡೀ ದೇಶ ಉರಿಯಬೇಕೆನ್ನುವುದೇ ನಿಮ್ಮ ಉದ್ದೇಶ ಎಂದು ಆರೋಪಿಸಿದರು.
ರಾಮಾಯಣದ ಕತೆ ಉಲ್ಲೇಖಿಸಿದ ರಾಹುಲ್ ಗಾಂಧಿ, ರಾವಣನನ್ನು ರಾಮನು ಕೊಲ್ಲಲಿಲ್ಲ. ಆದರೆ ಅವನ ದುರಹಂಕಾರದಿಂದ ಕೊಲ್ಲಲ್ಪಟ್ಟನು. ನೀವು ಎಲ್ಲೆಡೆ ಸೀಮೆಎಣ್ಣೆ ಎರಚಿದ್ದೀರಿ, ನೀವು ಮಣಿಪುರಕ್ಕೆ ಬೆಂಕಿ ಹಚ್ಚಿದ್ದೀರಿ. ಈಗ ಹರ್ಯಾಣದಲ್ಲಿ ಅದೇ ಪ್ರಯತ್ನ ಮಾಡುತ್ತಿದ್ದೀರಿ ಎಂದು ಅವರು ಹೇಳಿದರು. ಇತ್ತೀಚೆಗೆ ಗುರುಗ್ರಾಮ್ ಮತ್ತು ನುಹ್ನಲ್ಲಿ ಆರು ಜನರನ್ನು ಹತ್ಯೆಗೈದ ಕೋಮು ಗಲಭೆಯನ್ನು ಉಲ್ಲೇಖಿಸಿ ಕೇಂದ್ರ ಸರ್ಕಾರಕ್ಕೆ ತಿವಿದರು. ರಾಹುಲ್ ಗಾಂಧಿ ಈ ಹೇಳಿಕೆ ಸದನದಲ್ಲಿ ಆಕ್ಷೇಪಕ್ಕೆ ಕಾರಣವಾಯಿತಲ್ಲದೆ, ಭಾರಿ ಕೋಲಾಹಲಕ್ಕೆ ಕಾರಣವಾಯಿತು. ಕೆಲವು ಹಿರಿಯ ಸಚಿವರು ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು.
Prime Minister Narendra Modi will face his second no-confidence motion in Parliament on Tuesday, the first in his second term as the PM. People will also keep an eye on Congress leader Rahul Gandhi, who is set to participate in the no-confidence motion debate today.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 10:14 pm
Mangalore Correspondent
Konaje Suicide, Mangalore, Hair loss: ಕೂದಲು ಉ...
19-05-25 09:41 pm
Mangalore Job Scam, Police, Lawrence Dsouza,...
19-05-25 05:22 pm
Akanksha Suicide, Dharmasthala, Mangalore: ಏರ...
19-05-25 12:31 pm
Akanksha Death, Punjab, Dharmasthala, Mangalo...
18-05-25 12:42 pm
19-05-25 09:38 pm
Mangalore Correspondent
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm