ಬ್ರೇಕಿಂಗ್ ನ್ಯೂಸ್
11-08-23 11:17 pm HK News Desk ದೇಶ - ವಿದೇಶ
ನವದೆಹಲಿ, ಆಗಸ್ಟ್ 11: ಭಾರತವು ತಿಂಗಳ ಹಿಂದಷ್ಟೇ ಚಂದ್ರನಲ್ಲಿಗೆ ಬಾಹ್ಯಾಕಾಶ ನೌಕೆ ಉಡಾವಣೆ ಮಾಡಿತ್ತು. ಅದಿನ್ನೂ ಚಂದ್ರನ ಕಕ್ಷೆಯಲ್ಲಿದ್ದು ಅಂಗಳಕ್ಕೆ ಇಳಿಯಲು ಸಾಧ್ಯವಾಗಿಲ್ಲ. ಬಾಹ್ಯಾಕಾಶ ಕ್ಷೇತ್ರದಲ್ಲಿ ಅಗಾಧ ಸಾಧನೆ ಮಾಡಿರುವ ರಷ್ಯಾ ಈಗ ತರಾತುರಿಯಲ್ಲಿ ಚಂದ್ರನೆಡೆಗೆ ನೌಕೆ ಕಳಿಸಿಕೊಟ್ಟಿದೆ. ಸುಮಾರು 50 ವರ್ಷಗಳ ಬಳಿಕ ಮೊದಲ ಬಾರಿ ದಿಢೀರ್ ಎಂಬಂತೆ ಚಂದ್ರನೆಡೆಗೆ ನೌಕೆಯನ್ನು ಕಳುಹಿಸಿದ್ದು ಜಗತ್ತಿನ ಗಮನ ಸೆಳೆದಿದೆ.
ಒಂದು ವರ್ಷದಿಂದ ಉಕ್ರೇನ್ನೊಂದಿಗೆ ಸಂಘರ್ಷದಲ್ಲಿ ತೊಡಗಿರುವ ರಷ್ಯಾ ಈಗ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಸಾಧನೆಗೆ ಹೆಜ್ಜೆ ಇಟ್ಟಿದೆ. ಅಂದಹಾಗೆ, 1976ರ ಬಳಿಕ ರಷ್ಯಾ ಮೊದಲ ಬಾರಿಗೆ ಚಂದ್ರನೆಡೆಗೆ ಕುತೂಹಲದ ದೃಷ್ಟಿ ಬೀರಿದೆ.
ಲೂನಾ-25 ಪ್ರೋಬ್ ಅನ್ನು ಹೊತ್ತ ರಾಕೆಟ್ ಗುರುವಾರ ಮಧ್ಯಾಹ್ನ ವೇಳೆಗೆ ವೊಸ್ಟೊಚ್ನಿ ಕಾಸ್ಮೊಡ್ರೋಮ್ನಿಂದ ಉಡಾವಣೆಯಾಗಿದೆ ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮಾಸ್ ತಿಳಿಸಿದೆ. ಈ ನೌಕೆಯು ಒಂದೇ ವಾರದ ಅಂತರದಲ್ಲಿ ಅಂದರೆ, ಆಗಸ್ಟ್ 21ರ ವೇಳೆಗೆ ಚಂದ್ರನ ಅಂಗಳ ತಲುಪಲಿದೆ.
ಕೇವಲ 5 ದಿನಗಳಲ್ಲಿ ಚಂದ್ರನ ಕಕ್ಷೆಯನ್ನು ತಲುಪಲಿದ್ದು ಅಲ್ಲಿಂದ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಇಳಿಯುವುದಕ್ಕೆ ತಯಾರಿ ನಡೆಸಲಿದೆ. ಇದೇ ಮೊದಲ ಬಾರಿಗೆ, ಭೂಮಿಯಿಂದ ಕಳಿಸಲ್ಪಟ್ಟ ನೌಕೆಯು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವ ಸಾಹಸ ಮಾಡಲಿದೆ. ಇಲ್ಲಿವರೆಗೆ ಚಂದ್ರನ ಮೇಲೆ ನಡೆಸಲಾಗಿರುವ ಎಲ್ಲಾ ಕಾರ್ಯಾಚರಣೆಗಳು ಸಮಭಾಜಕ ವಲಯದಲ್ಲಿ ಮಾತ್ರ ಇಳಿದಿವೆ ಎಂದು ರೋಸ್ಕೊಸ್ಮಾಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ತಿಂಗಳು ಭಾರತದಿಂದ ಉಡಾವಣೆ ಮಾಡಿರುವ ನೌಕೆಯು ಸದ್ಯ ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿದ್ದು ಆಗಸ್ಟ್ 24ರ ವೇಳೆಗೆ ಚಂದ್ರನ ಅಂಗಳ ತಲುಪಲಿದೆ ಎನ್ನಲಾಗುತ್ತಿದೆ. ಆದರೆ ರಷ್ಯಾ ಮತ್ತು ಅಮೆರಿಕ ರಾಕೆಟ್ ತಂತ್ರಜ್ಞಾನದಲ್ಲಿ ಮುಂದುವರಿದಿದ್ದು ಕೇವಲ ಐದೇ ದಿನದಲ್ಲಿ ಚಂದ್ರನಲ್ಲಿಗೆ ತಲುಪುವ ತಂತ್ರಜ್ಞಾನ ಹೊಂದಿದೆ.
Russia has launched its first mission to the moon in nearly 50 years, pitting it in a space race with India, which is also aiming to land a lunar craft this month. The launch of the Luna-25 craft to the moon on Friday was Russia’s first since 1976 when it was part of the Soviet Union and was conducted without assistance from the European Space Agency, which ended cooperation with Russia after its invasion of Ukraine.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 11:07 pm
Mangalore Correspondent
Jail Attack, Suhas Shetty, Mangalore, Chotte...
19-05-25 10:14 pm
Konaje Suicide, Mangalore, Hair loss: ಕೂದಲು ಉ...
19-05-25 09:41 pm
Mangalore Job Scam, Police, Lawrence Dsouza,...
19-05-25 05:22 pm
Akanksha Suicide, Dharmasthala, Mangalore: ಏರ...
19-05-25 12:31 pm
19-05-25 09:38 pm
Mangalore Correspondent
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm