ಬ್ರೇಕಿಂಗ್ ನ್ಯೂಸ್
23-08-23 10:20 pm HK News Desk ದೇಶ - ವಿದೇಶ
ನವದೆಹಲಿ, ಆಗಸ್ಟಡ್ 23: ಫಿಡೆ ರೇಟೆಡ್ ವಿಶ್ವ ಚೆಸ್ ಟೂರ್ನಮೆಂಟಿನ ಫೈನಲ್ ಸ್ಪರ್ಧೆಯ ಎರಡನೇ ಪಂದ್ಯದಲ್ಲೂ ಭಾರತದ ಅತಿ ಕಿರಿಯ ಆಟಗಾರ ಆರ್. ಪ್ರಜ್ಞಾನಂದ ಡ್ರಾ ಸಾಧನೆ ಮಾಡಿದ್ದಾರೆ.
ಜಗತ್ತಿನ ನಂಬರ್ ವನ್ ಆಟಗಾರ ನಾರ್ವೆ ಮೂಲದ ಮ್ಯಾಗ್ನಸ್ ಕಾರ್ಲ್ಸನ್ ವಿರುದ್ಧ ಬುಧವಾರ ಎರಡನೇ ಫೈನಲ್ ಪಂದ್ಯವನ್ನು ಪ್ರಜ್ಞಾನಂದ ಆಡಿದ್ದು, ಇದರಲ್ಲಿಯೂ ಡ್ರಾ ಮಾಡಿಕೊಂಡಿದ್ದಾರೆ. ಮಂಗಳವಾರ ಮೊದಲ ಪಂದ್ಯವೂ 35 ನಡೆಗಳೊಂದಿಗೆ ಡ್ರಾ ಆಗಿತ್ತು. ಎರಡನೇ ಪಂದ್ಯದಲ್ಲಿ ಕೇವಲ 30 ನಡೆಗಳಲ್ಲಿ ಪಂದ್ಯವನ್ನು ಡ್ರಾ ಮಾಡಿದ್ದು, ವಿಶ್ವ ಚೆಸ್ ಆಟಗಾರರ ಹುಬ್ಬೇರುವಂತೆ ಮಾಡಿದೆ. ಭಾರತದ ಚೆಸ್ ಮಾಂತ್ರಿಕ ವಿಶ್ವನಾಥನ್ ಆನಂದ್ ಕೂಡ 18 ವರ್ಷದ ಪ್ರಜ್ಞಾನಂದ ಆಟವನ್ನು ಶ್ಲಾಘಿಸಿದ್ದಾರೆ.
ಅಜರ್ ಬೈಜಾನಿನ ಬಾಕು ನಗರದಲ್ಲಿ ವಿಶ್ವ ಚೆಸ್ ಟೂರ್ನಿ ನಡೆಯುತ್ತಿದ್ದು, ಭಾರತದ ಪ್ರಜ್ಞಾನಂದ ಚೆಸ್ ಜಗತ್ತಿನಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ. ಮೊದಲ ಫೈನಲ್ ಪಂದ್ಯವು ನಾಲ್ಕು ಗಂಟೆಗಳ ಸುದೀರ್ಘ ಕಾಲ ನಡೆದಿದ್ದರೆ, ಎರಡನೇ ಪಂದ್ಯವು ಕೇವಲ ಒಂದು ಗಂಟೆಯಲ್ಲಿ ಮುಗಿದಿತ್ತು. ಚೆಸ್ ವಿಶ್ವಕಪ್ ವಿಜೇತ ಯಾರು ಅನ್ನುವುದನ್ನು ನಿರ್ಧರಿಸಲು ಗುರುವಾರ ಬಿರುಸಿನ ನಡೆಯ ಟೈ ಬ್ರೇಕರ್ ಪಂದ್ಯ ನಡೆಯಲಿದೆ.
ಅಂದಹಾಗೆ, ವಿಶ್ವ ಚೆಸ್ ಟೂರ್ನಿಯ ಫೈನಲ್ ಸುತ್ತು ಪ್ರವೇಶಿಸಿದ ಭಾರತದ ಎರಡನೇ ಆಟಗಾರನೆಂಬ ಶ್ರೇಯವೂ ಪ್ರಜ್ಞಾನಂದ ಅವರಿಗೆ ಸಂದಿದೆ. ಈ ಮೊದಲು ವಿಶ್ವನಾಥನ್ ಆನಂದ್ ಮಾತ್ರ ಫೈನಲ್ ಸುತ್ತು ಪ್ರವೇಶ ಮಾಡಿದ್ದು ಮತ್ತು ವಿಶ್ವ ಚೆಸ್ ಮಾಸ್ಟರ್ ಆಗಿರುವ ಸಾಧನೆ ಮಾಡಿದ್ದರು. ಸದ್ಯ ಪ್ರಜ್ಞಾನಂದ ವಿಶ್ವ ಚೆಸ್ ರ್ಯಾಂಕಿಂಗ್ ನಲ್ಲಿ 23ನೇ ಶ್ರೇಯಾಂಕದ ಆಟಗಾರನಾಗಿದ್ದರೆ, ಮ್ಯಾಗ್ನಸ್ ಕಾರ್ಲ್ಸನ್ ನಂಬರ್ ವನ್ ಆಟಗಾರ. ಗುರುವಾರದ ಮೂರನೇ ಪಂದ್ಯದಲ್ಲಿ ನಂಬರ್ ವನ್ ಆಟಗಾರನನ್ನು ಪ್ರಜ್ಞಾನಂದ ಸೋಲಿಸಿದರೆ, ಹೊಸ ಇತಿಹಾಸ ಸೃಷ್ಟಿಸಲಿದ್ದಾರೆ.
In a remarkable turn of events, Indian Grandmaster Rameshbabu Praggnanandhaa on Monday advanced to the final of the FIDE Chess World Cup 2023. His astounding victory over world number 3 Fabiano Caruana in Baku, Azerbaijan, has garnered widespread astonishment. This young talent's steady ascent in the realm of chess has been nothing short of impressive, and he is now poised to face off against world number 1, Magnus Carlsen, in the championship clash.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 11:07 pm
Mangalore Correspondent
Jail Attack, Suhas Shetty, Mangalore, Chotte...
19-05-25 10:14 pm
Konaje Suicide, Mangalore, Hair loss: ಕೂದಲು ಉ...
19-05-25 09:41 pm
Mangalore Job Scam, Police, Lawrence Dsouza,...
19-05-25 05:22 pm
Akanksha Suicide, Dharmasthala, Mangalore: ಏರ...
19-05-25 12:31 pm
19-05-25 09:38 pm
Mangalore Correspondent
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm