ಬ್ರೇಕಿಂಗ್ ನ್ಯೂಸ್
24-08-23 02:51 pm HK News Desk ದೇಶ - ವಿದೇಶ
ಸಹರಾನ್ಪುರ, ಆಗಸ್ಟ್ 25: ಉತ್ತರಪ್ರದೇಶದ ಸಹರಾನ್ಪುರ ಜಿಲ್ಲೆಯ ಕೊತ್ವಾಲಿ ದೇಹತ್ ಪ್ರದೇಶದಲ್ಲಿ ಭೀಕರ ಅಪಘಾತ ಸಂಭವಿಸಿದೆ. ಬಂಡ್ಕಿ ಗ್ರಾಮದ ಬಳಿ ಧಮೋಲಾ ನದಿಗೆ ಟ್ರ್ಯಾಕ್ಟರ್ ಪಲ್ಟಿಯಾಗಿ 9 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಕೆಲವರು ನಾಪತ್ತೆಯಾಗಿದ್ದಾರೆ. ಟ್ರಾಲಿಯಲ್ಲಿ 50ಕ್ಕೂ ಹೆಚ್ಚು ಭಕ್ತರಿದ್ದರು. ಮೃತ ದೇಹಗಳನ್ನು ನದಿಯಿಂದ ಹೊರತೆಗೆಯಲಾಗಿದೆ. ಇದೇ ವೇಳೆ, ಸರ್ಕಾರ ಮೃತ ಕುಟುಂಬಗಳಿಗೆ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಸಹರಾನ್ಪುರದಲ್ಲಿ ಜಹರವೀರ್ ಗೋಗಾ ಪೂಜೆ ನಡೆಯುತ್ತಿದೆದ್ದು, ಅಲ್ಲಿಗೆ 50 ಭಕ್ತರಿದ್ದ ಟ್ರ್ಯಾಕ್ಟರ್ ತೆರಳುತ್ತಿತ್ತು. ಧಮೋಲಾ ನದಿ ದಡದಲ್ಲಿ ಹೋಗುತ್ತಿದ್ದಾಗ ಅಚಾನಕ್ಕಾಗಿ ಅದರ ಟ್ರಾಲಿ ನದಿಗೆ ಜಾರಿ ಬಿದ್ದಿದೆ. ಇದರಿಂದ ಅಷ್ಟೂ ಜನರು ನದಿ ನೀರಿನಲ್ಲಿ ಮುಳುಗಿದ್ದಾರೆ. ಕೆಲವರು ಈಜಿ ದಡ ಸೇರಿ ಜೀವ ಉಳಿಸಿಕೊಂಡಿದ್ದರೆ. ಇನ್ನೂ ಕೆಲವರು ಟ್ರಾಲಿ ಒಳಗೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ.
ಅಪಘಾತದಲ್ಲಿ ಭಕ್ತರು ಟ್ರ್ಯಾಕ್ಟರ್ ಟ್ರಾಲಿಯಡಿ ಸಿಲುಕಿದ್ದರು. ಕಿರುಚಾಟ ಕೇಳಿ ಗ್ರಾಮಸ್ಥರು ಸ್ಥಳದಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ. ಕೆಲವು ಭಕ್ತರನ್ನು ಜನರು ನದಿ ನೀರಿನಿಂದ ರಕ್ಷಿಸಿದ್ದಾರೆ. ಬಾಲಕಿ, ಮಹಿಳೆ ಸೇರಿದಂತೆ ನಾಲ್ವರು ಶವವಾಗಿ ಪತ್ತೆಯಾಗಿದ್ದರು. ಗಾಯಗೊಂಡ ಭಕ್ತರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮಸ್ಥರು ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಈಜುಗಾರರನ್ನು ಮುಳುಗು ತಜ್ಞರನ್ನು ಕರೆಯಿಸಿ ನಾಪತ್ತೆಯಾದವರ ಪತ್ತೆಗೆ ಹುಡುಕಾಟ ನಡೆಸಲಾಗಿದೆ.
ಘಟನೆಯ ಬಗ್ಗೆ ಪೊಲೀಸರು ಜಿಲ್ಲೆಯ ಉನ್ನತಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಪಘಾತದ ಮಾಹಿತಿ ಮೇರೆಗೆ ಡಿಎಂ ಡಾ.ದಿನೇಶ್ ಚಂದ್ರ ಮತ್ತು ಎಸ್ಎಸ್ಪಿ ಡಾ.ವಿಪಿನ್ ರಕ್ಷಣಾ ತಂಡದೊಂದಿಗೆ ಘಟನಾ ಸ್ಥಳಕ್ಕೆ ತಲುಪಿದ್ದಾರೆ.
In a tragic incident, eight people including two minors died after a truck-trolley carrying devotees overturned into a river in Uttar Pradesh’s Saharanpur. Meanwhile, nearly 12 people are missing. According to reports, on Wednesday evening, a tractor filled with more than 45 devotees returning from a religious work got stuck in the fast current of the Dhamola River in Bondki village of Sehat Kotwali area of Saharanpur. Due to the force of the current of the river, the tractor overturned. Following the incident, most of the devotees got swept away in the strong current of water.
10-04-26 06:53 pm
HK News Desk
ಚಿಕ್ಕಮಗಳೂರು ; ಚಂದ್ರದ್ರೋಣ ಪರ್ವತ ಬಳಿ ನಾಪತ್ತೆಯಾಗ...
10-04-26 03:25 pm
PUC Result 2026, State Topper: ಪಿಯುಸಿ ರಿಸಲ್ಟ್...
09-04-26 09:30 pm
ಗ್ಯಾರಂಟಿ ಯೋಜನೆಗಳ ಬಗ್ಗೆ ವರದಿ ಕೇಳಿದ ಚುನಾವಣಾ ಆಯೋ...
09-04-26 04:33 pm
ಶರಣ್ಯ ನಾಪತ್ತೆ ಪ್ರಕರಣದಲ್ಲಿ ಟ್ವಿಸ್ಟ್ ; ನಕ್ಸಲ್ ಲ...
09-04-26 03:37 pm
10-04-26 11:05 pm
HK News Staffer
ಮನೆಯಲ್ಲಿ ಭಾರೀ ನಗದು ಪತ್ತೆ ಪ್ರಕರಣ ; ನ್ಯಾಯಮೂರ್ತಿ...
10-04-26 01:26 pm
Lebanon News: ಲೆಬನಾನ್ ಮೇಲೆ ಇಸ್ರೇಲ್ ಭಾರೀ ಬಾಂಬ್...
09-04-26 11:03 pm
ಹರ್ಮುಜ್ ಜಲಸಂಧಿಗೆ ಇರಾನ್ ಸುಂಕ ; ಭಾರತಕ್ಕೆ ಭಾರೀ...
09-04-26 07:43 pm
ಕದನ ವಿರಾಮದ ಅಂತಿಮ ಕ್ಷಣದಲ್ಲಿ ಇಸ್ರೇಲ್, ಯುಎಇ, ಕತಾ...
08-04-26 06:59 pm
10-04-26 10:12 pm
Mangalore Correspondent
ಭರತನಾಟ್ಯ ಗುರು ಶ್ರಾವಣ್ ಉಳ್ಳಾಲ್ ಹಳದಿ ಕಾಮಾಲೆ ರೋಗ...
10-04-26 09:49 pm
ಉಪ ಚುನಾವಣೆ ಫಲಿತಾಂಶಕ್ಕೂ ನಾಯಕತ್ವ ಬದಲಾವಣೆಗೂ ಸಂಬಂ...
10-04-26 06:05 pm
Puc 2026, Result, Mangalore: ಮೂವರು ಮಕ್ಕಳಾದರೂ...
10-04-26 12:35 pm
Besant Evening College, BPL Cricket: ಬೆಸೆಂಟ್...
07-04-26 01:22 pm
10-04-26 11:06 pm
HK News Staffer
Red Corner Notice, Mangalore crime: ದೇರಳಕಟ್ಟೆ...
09-04-26 09:16 pm
ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಮಗು ;...
09-04-26 01:03 pm
Arif Murder, Seven Arrested, Mangalore: ಟ್ಯಾಬ...
08-04-26 07:48 pm
ಡ್ರಗ್ಸ್ ಪೆಡ್ಲಿಂಗ್ ; ತಾವಾಗಿಯೇ ಗಾಂಜಾ, ಡ್ರಗ್ಸ್ ತ...
08-04-26 05:53 pm