ಬ್ರೇಕಿಂಗ್ ನ್ಯೂಸ್
08-09-23 01:25 pm HK News Desk ದೇಶ - ವಿದೇಶ
ನವದೆಹಲಿ, ಸೆ.8: ಸನಾತನ ಧರ್ಮ, ಅದನ್ನು ಪಾಲಿಸುವ ಜನರ ಭಾವನೆಗಳಿಗೆ ಧಕ್ಕೆ ತರುವ ಹಕ್ಕು ಉದಯನಿಧಿ ಸ್ಟಾಲಿನ್‌ಗೆ ಇಲ್ಲ. ವಿಶ್ವದ ಅತ್ಯಂತ ಪುರಾತನ ಧರ್ಮಗಳ ಬಗ್ಗೆ ಅವರು ನೀಡಿರುವ ಹೇಳಿಕೆಗೆ ಕ್ಷಮೆ ಯಾಚಿಸಬೇಕು ಎಂದು ಉತ್ತರ ಪ್ರದೇಶದ ಮುಸ್ಲಿಂ ಧರ್ಮಗುರುಗಳು ಆಗ್ರಹಿಸಿದ್ದಾರೆ.
ಸುನ್ನಿ ಮತ್ತು ಶಿಯಾ ಪಂಗಡದ ನಾಯಕರು, ಬಿಜೆಪಿ ವಿರೋಧಿ ಬಣವಾದ 'ಇಂಡಿಯಾ'ದ ನಾಯಕರು, ತಮಿಳುನಾಡು ಸಚಿವನ ಟೀಕೆ ಬಗ್ಗೆ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಒತ್ತಾಯಿಸಿದ್ದಾರೆ. ಇಂತಹ ಹೇಳಿಕೆಗಳು ಭಾರತವನ್ನು ಧರ್ಮದ ಆಧಾರದ ಮೇಲೆ ವಿಭಜಿಸುವ ಪ್ರಯತ್ನವಾಗಿದೆ ಎಂದು ಆರೋಪಿಸಿದ್ದಾರೆ.
ಇದು ಅವಹೇಳನಕಾರಿ ಹೇಳಿಕೆಯಾಗಿದ್ದು, ವಿಶ್ವದ ಅತ್ಯಂತ ಹಳೆಯ ಧರ್ಮದ ವಿರುದ್ಧ ಇಂತಹ ಟೀಕೆಗಳನ್ನು ಮಾಡಿರುವುದಕ್ಕಾಗಿ ಉದಯನಿಧಿ ಸ್ಟಾಲಿನ್ ಕ್ಷಮೆ ಯಾಚಿಸಬೇಕು. ಜನರ ಭಾವನೆಗಳಿಗೆ ಧಕ್ಕೆ ತರುವ ಹಕ್ಕು ಯಾರಿಗೂ ಇಲ್ಲ ಎಂದು ಹಿರಿಯ ಶಿಯಾ ಧರ್ಮಗುರು ಮತ್ತು ಶಿಯಾ ಸುನ್ನಿ ಉಲೇಮಾ ಫ್ರಂಟ್ ಪ್ರಧಾನ ಕಾರ್ಯದರ್ಶಿ ಮೌಲಾನಾ ಹಬೀಬ್ ಹೈದರ್ ಆಗ್ರಹಿಸಿದ್ದಾರೆ.
ಯಾವುದೇ ಧರ್ಮವನ್ನು ಗುರಿಯಾಗಿಸುವ ಹಕ್ಕು ಉದಯನಿಧಿಗೆ ಇಲ್ಲ ಎಂದು ಬರೇಲ್ವಿ ಸ್ಕೂಲ್ ಆಫ್ ಥಾಟ್ಸ್ ಹಾಗೂ ಅಖಿಲ ಭಾರತ ಮುಸ್ಲಿಂ ಜಮಾತ್ ಮೌಲಾನಾ ಅಧ್ಯಕ್ಷ ಶಹಾಬುದ್ದೀನ್ ರಿಜ್ವಿ ಹೇಳಿದ್ದಾರೆ. ಇಂತಹ ಹೇಳಿಕೆಗಳು ಧರ್ಮದ ಆಧಾರದ ಮೇಲೆ ಜನರನ್ನು ವಿಭಜಿಸುತ್ತವೆ. ಧರ್ಮಗಳು ಜನರನ್ನು ಒಗ್ಗೂಡಿಸಲು ಇರುವಂಥದ್ದು, ಜಾತಿಯ ಆಧಾರದ ಮೇಲೆ ವಿಭಜಿಸುವುದಕ್ಕಲ್ಲ ಎಂದಿದ್ದಾರೆ.
ಸುನ್ನಿ ಧರ್ಮಗುರು ಅಬು ಜಾಫರ್ ನೊಮಾನಿ ಅವರು ಪ್ರತಿಕ್ರಿಯಿಸಿ, ಇಂತಹ ಧರ್ಮ ವಿರೋಧಿ ಹೇಳಿಕೆಗಳು ಅರಾಜಕತೆಗೆ ಕಾರಣವಾಗಬಹುದು. ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಟೀಕೆಗಳನ್ನು ಮಾಡಬಾರದು. ಉದಯನಿಧಿ ಸ್ಟಾಲಿನ್ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಬೇಕು ಎಂದು ನಾನು ಭಾವಿಸುತ್ತೇನೆ ಎಂದು ನೋಮಾನಿ ಹೇಳಿದ್ದಾರೆ.
Udhayanidhi Stalin has no right to hurt the sentiments of Sanatan Dharma followers and must apologise for his remarks on “one of the oldest religions” of the world, Muslim clerics in Uttar Pradesh have said. Many of them, across Sunni and Shia outfits, also demanded that the anti-BJP INDIA bloc clarify on the DMK leader and Tamil Nadu minister’s comments, alleging it to be an attempt to “divide India on religious lines”.
11-01-25 10:53 pm
HK News Desk
ಕೊಪ್ಪದ ಮೇಗೂರು ಅರಣ್ಯದಲ್ಲಿ ಶರಣಾಗಿದ್ದ ನಕ್ಸಲರ ಶಸ...
11-01-25 10:27 pm
BBMP Raid, Lokayukta; ಬಿಬಿಎಂಪಿ 50 ಕಡೆಗಳಲ್ಲಿ ಲ...
11-01-25 09:14 pm
CT Ravi,Threat, Lakshmi Hebbalkar; ಬೆಳಗಾವಿ ಅಭ...
11-01-25 02:11 pm
Asha Strick, CM Siddaramaiah ಆಶಾ ಕಾರ್ಯಕರ್ತೆಯರ...
10-01-25 11:01 pm
12-01-25 05:07 pm
HK News Desk
Hollywood hills, Los Angeles fires: ಲಾಸ್ ಏಂಜ...
09-01-25 12:11 pm
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
12-01-25 12:33 pm
Mangalore Correspondent
CM Siddaramaiah, Kambala Mangalore, Naringana...
11-01-25 10:34 pm
Mangalore Lit Fest 2025, Hardeep Singh Puri;...
11-01-25 07:19 pm
DYFI, CM Siddaramaiah, IPS Anupam Agrawal; ಪೊ...
11-01-25 04:57 pm
Lava Kusha Jodukare Kambala, Mangalore; ತೃತೀಯ...
11-01-25 02:25 pm
11-01-25 10:21 pm
Mangalore Correspondent
Mumbai Crime, Fruad, Torres Ponzi: ಚೈನ್ ಸ್ಕೀಮ...
10-01-25 11:05 pm
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm