ಬ್ರೇಕಿಂಗ್ ನ್ಯೂಸ್
16-09-23 03:26 pm HK Desk news ದೇಶ - ವಿದೇಶ
ಚೆನ್ನೈ, ಸೆ.16: ಉಗ್ರ ತರಬೇತಿ ಹಾಗೂ ನೇಮಕಾತಿ ಮಾಡಿಕೊಳ್ಳುತ್ತಿರುವ ಶಂಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಎನ್ಐಎ ಅಧಿಕಾರಿಗಳು ತಮಿಳುನಾಡು ಮತ್ತು ತೆಲಂಗಾಣ ಸೇರಿದಂತೆ ಸುಮಾರು 30 ಸ್ಥಳಗಳ ಮೇಲೆ ದಾಳಿ ನಡೆಸಿ ಶೋಧ ಕಾರ್ಯಾ ನಡೆಸಿದೆ.
ಅಧಿಕಾರಿಗಳ ತಂಡ ತಮಿಳುನಾಡಿನ ಕೊಯಮತ್ತೂರು ಮತ್ತು ಚೆನ್ನೈನಲ್ಲೂ ದಾಳಿ ನಡೆದಿದೆ ಎಂದು ಮಾಹಿತಿ ಲಭ್ಯವಾಗಿದ್ದು. ದಕ್ಷಿಣ ಭಾರತದಲ್ಲಿ ಉಗ್ರ ತರಬೇತಿ ಕೇಂದ್ರಗಳನ್ನು ನಿರ್ನಾಮ ಮಾಡುವ ಉದ್ದೇಶದಿಂದ ತಪಾಸಣೆ ನಡೆಸಲಾಗಿದೆ ಎಂದು ಎನ್ಐಎ ತಿಳಿಸಿದೆ.
ಕೊಯಮತ್ತೂರಿನ 21 ಸ್ಥಳಗಳು, ಚೆನ್ನೈನ ಮೂರು ಸ್ಥಳಗಳು, ಹೈದರಾಬಾದ್ನ ಐದು ಸ್ಥಳಗಳು ಮತ್ತು ತೆಂಕಶಿಯ ಒಂದು ಸ್ಥಳಗಳಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿ ದಾಖಲೆಗಳ ತಪಾಸಣೆ ನಡೆಸುತ್ತಿದೆ ಎನ್ನಲಾಗಿದೆ.
ಕೊಯಮತ್ತೂರಿನಲ್ಲಿ, ಕೋವೈ ಅರೇಬಿಕ್ ಕಾಲೇಜಿಗೆ ಸಂಬಂಧಿಸಿದ ಸ್ಥಳಗಳಲ್ಲಿ ವಿದ್ಯಾರ್ಥಿಗಳಿಗೆ ಉಗ್ರ ತರಬೇತಿ ನೀಡಲಾಗುತ್ತಿದೆ ಎಂಬ ಮಾಹಿತಿಯ ಮೇಲೆ ಅರೇಬಿಕ್ ಕಾಲೇಜಿನ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಷ್ಟು ಮಾತ್ರವಲ್ಲದೆ ಕೊಯಮತ್ತೂರು ಕಾರ್ಪೊರೇಷನ್ ನ 82ನೇ ವಾರ್ಡ್ ಕೌನ್ಸಿಲರ್ ಡಿ.ಎಂ.ಕೆ. ಸದಸ್ಯರ ಮನೆಯಲ್ಲೂ ತಪಾಸಣೆ ನಡೆಸಲಾಯಿತು. ಕೊಯಮತ್ತೂರಿನ ಪೆರುಮಾಳ್ ಕೋವಿಲ್ ಸ್ಟ್ರೀಟ್ ನ ಎಂ. ಮುಬಾಶಿರಾ ಅವರ ಮನೆ ಮೇಲೆ ದಾಳಿ ನಡೆಸಿ ಅವರ ಪತಿಯನ್ನು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ಕೊಯಮತ್ತೂರಿನ ಉಕ್ಕಡಮ್ನಲ್ಲಿರುವ ಈಶ್ವರನ್ ಕೋವಿಲ್ ಸ್ಟ್ರೀಟ್ನಲ್ಲಿರುವ ಕೊಟ್ಟೈ ಸಂಗಮೇಶ್ವರರ್ ದೇವಸ್ಥಾನದ ಮುಂಭಾಗದಲ್ಲಿ 2022 ರ ಅಕ್ಟೋಬರ್ 23 ರಂದು ಸ್ಫೋಟ ಸಂಭವಿಸಿತ್ತು. ಈ ಸಂದರ್ಭ ಸುಧಾರಿತ ಸ್ಫೋಟಕ ಸಾಧನದೊಂದಿಗೆ ಕಾರನ್ನು ಓಡಿಸಿದ ಐಸಿಸ್ ಅನುಯಾಯಿ ಜಮೇಶಾ ಮುಬೀನ್ ಸಾವನ್ನಪ್ಪಿದ್ದ. ತನಿಖೆ ನಡೆಸುತ್ತಿದ್ದ ಸಂದರ್ಭ ಅವನು ಕೊಯಮತ್ತೂರಿನ ಕುನಿಯಮುತ್ತೂರಿನಲ್ಲಿ ಕೋವೈ ಅರೇಬಿಕ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ.
ಕೆಲ ವರ್ಷಗಳ ಹಿಂದೆ ಕಾಲೇಜಿನಲ್ಲಿ ಮುಬೀನ್ ಜೊತೆ 25ಕ್ಕೂ ಹೆಚ್ಚು ಮಂದಿ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ. ಇದರ ನಡುವೆ, ಚೆನ್ನೈನ ಎನ್ಐಎ ಅಧಿಕಾರಿಗಳು ಕೊಯಮತ್ತೂರಿನ ಅರೇಬಿಕ್ ಕಾಲೇಜಿನಲ್ಲಿ ಕಳೆದ ತಿಂಗಳು ಶೋಧ ಕಾರ್ಯ ನಡೆಸಿದ್ದರು ಎಂದು ತಿಳಿದುಬಂದಿದೆ. ತಮಿಳುನಾಡು ಇಸಿಸ್ ಉಗ್ರ ಸಂಘಟನೆ ಮತ್ತು ಅದರ ನೇಮಕಾತಿ ಮತ್ತು ಆಮೂಲಾಗ್ರೀಕರಣ ಒಳಗೊಂಡಂತೆ ಸಂಸ್ಥೆಯು ದಾಖಲೆಗಳನ್ನು ಸಂಗ್ರಹ ಮಾಡಿದ್ದು, ಹೊಸ ಎಫ್ಐಆರ್ ಅನ್ನು ದಾಖಲು ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.
National Investigation Agency (NIA) conducts raids at 30 locations in both Tamil Nadu and Telangana in ISIS Radicalization and Recruitment case. The raids are underway in 21 locations in Coimbatore, 3 locations in Chennai, 5 locations in Hyderabad/Cyberabad, and 1 location in Tenkasi.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 11:07 pm
Mangalore Correspondent
Jail Attack, Suhas Shetty, Mangalore, Chotte...
19-05-25 10:14 pm
Konaje Suicide, Mangalore, Hair loss: ಕೂದಲು ಉ...
19-05-25 09:41 pm
Mangalore Job Scam, Police, Lawrence Dsouza,...
19-05-25 05:22 pm
Akanksha Suicide, Dharmasthala, Mangalore: ಏರ...
19-05-25 12:31 pm
19-05-25 09:38 pm
Mangalore Correspondent
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm