ಬ್ರೇಕಿಂಗ್ ನ್ಯೂಸ್
29-10-23 01:02 pm HK News Desk ದೇಶ - ವಿದೇಶ
ಎರ್ನಾಕುಲಂ, ಅ.29: ಕೇರಳದ ಎರ್ನಾಕುಲಂ ಜಿಲ್ಲೆಯ ಕಲಮಶ್ಶೇರಿ ಎಂಬಲ್ಲಿ ಸೀರಿಯಲ್ ಬಾಂಬ್ ಬ್ಲಾಸ್ಟ್ ಆಗಿದ್ದು ಒಬ್ಬರು ಮೃತಪಟ್ಟಿದ್ದು 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಜೆಹೋವಾ ವಿಟ್ನೆಸ್ ವರ್ಗಕ್ಕೆ ಸೇರಿದ ಕ್ರಿಸ್ತಿಯನ್ನರು ಸಮಾವೇಶ ಸೇರಿದ್ದಾಗ ಬಾಂಬ್ ಸ್ಫೋಟ ಸಂಭವಿಸಿದೆ. ಇಬ್ಬರು ತೀವ್ರ ಗಾಯಗೊಂಡಿದ್ದಾರೆ ಎಂದು ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಸ್ಥಳದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು. ಈ ವೇಳೆ, ಹತ್ತು ಸೆಕೆಂಡ್ ಅಂತರದಲ್ಲಿ ಎರಡು ಕಡೆ ಬಾಂಬ್ ಸ್ಫೋಟ ಆಗಿದೆ. ಮೇಲ್ನೋಟಕ್ಕೆ ಭಯೋತ್ಪಾದಕ ಕೃತ್ಯ ಎನ್ನುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಬಾಂಬ್ ಸ್ಕ್ವಾಡ್, ವಿಧಿ ವಿಜ್ಞಾನ ದಳ ಮತ್ತು ಎನ್ಐಎ ಅಧಿಕಾರಿಗಳು ಆಗಮಿಸಿದ್ದು ತನಿಖೆ ಆರಂಭಿಸಿದ್ದಾರೆ.
ಜೆಹೋವಾ ಪಂಗಡದ ಕ್ರಿಸ್ತಿಯನ್ನರು ವಾರ್ಷಿಕವಾಗಿ ವಲಯವಾರು ಸಮಾವೇಶ ಹಮ್ಮಿಕೊಂಡಿದ್ದರು. ಬೃಹತ್ ಸಮ್ಮೇಳನವನ್ನು ಮೂರು ದಿನ ದೀರ್ಘವಾಗಿ ಆಯೋಜಿಸಲಾಗಿತ್ತು. ಶುಕ್ರವಾರದಿಂದ ಭಾನುವಾರದ ವರೆಗೆ ಸಮಾವೇಶ ನಡೆದಿತ್ತು. ಇಂದು ಬೆಳಗ್ಗೆ ಹತ್ತು ಗಂಟೆ ವೇಳೆಗೆ ಬೈಬಲ್ ಕುರಿತ ಭಾಷಣ ನಡೆಯುತ್ತಿದ್ದಾಗಲೇ ಹಾಲ್ ಒಳಗಡೆಯೇ ಬೇರೆ ಬೇರೆ ಕಡೆ ಬಾಂಬ್ ಸ್ಫೋಟ ಆಗಿದೆ. ಜೆಹೋವಾ ವರ್ಗವೇ ಇದರ ಟಾರ್ಗೆಟ್ ಎನ್ನಲಾಗುತ್ತಿದ್ದು ಭಯೋತ್ಪಾದಕ ಕೃತ್ಯ ಎನ್ನುವ ಶಂಕೆ ಕೇಳಿಬಂದಿದೆ.
ಶನಿವಾರ ಇಸ್ಲಾಮಿಕ್ ಗುಂಪೊಂದು ಹಮಾಸ್ ಉಗ್ರರ ಪರವಾಗಿ ಆಯೋಜಿಸಿದ್ದ ಪ್ರತಿಭಟನೆ ಕಾರ್ಯಕ್ರಮದಲ್ಲಿ ಹಮಾಸ್ ನಾಯಕ ಖಾಲಿದ್ ಮಾಶಲ್ ಎಂಬಾತ ವರ್ಚುವಲ್ ಆಗಿ ಪಾಲ್ಗೊಂಡು ಭಾಷಣ ಮಾಡಿದ್ದ. ಈ ವಿಚಾರದಲ್ಲಿ ಕ್ರಿಸ್ತಿಯನ್ನರ ಕಡೆಯಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಪಿಣರಾಯಿ ವಿಜಯನ್ ಸರ್ಕಾರದ ವೈಫಲ್ಯ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿತ್ತು. ಇದರ ಬೆನ್ನಲ್ಲೇ ಕ್ರಿಸ್ತಿಯನ್ನರ ಸಮಾವೇಶ ಗುರಿಯಾಗಿಸಿ ಬಾಂಬ್ ದಾಳಿಯಾಗಿದೆ.
Bomb blast at Jehovah Witness believers convention centre in Kalamassery kerala, one killed many injured, NIA arrives. One person was killed and five critically wounded in a bomb explosion that took place at a convention centre in Kalamassery where a meeting of Jehovah Witness believers was taking place on the morning of October 29.
20-05-25 03:30 pm
Bangalore Correspondent
Shashi Kumar IPS, Corruption, Hubballi, polic...
19-05-25 04:00 pm
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
20-05-25 02:36 pm
HK News Desk
Operation Sindhoor, Rahul Gandhi,.Pakistan: ಆ...
20-05-25 01:42 pm
ಆಡಲು ಹೋಗಿದ್ದಾಗ ಮಳೆ ಬಂತೆಂದು ನಿಲ್ಲಿಸಿದ್ದ ಕಾರಿನ...
19-05-25 02:25 pm
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
20-05-25 02:03 pm
Mangalore Correspondent
Job Scam Mangalore, Police Suspend, Hireglow...
19-05-25 11:07 pm
Jail Attack, Suhas Shetty, Mangalore, Chotte...
19-05-25 10:14 pm
Konaje Suicide, Mangalore, Hair loss: ಕೂದಲು ಉ...
19-05-25 09:41 pm
Mangalore Job Scam, Police, Lawrence Dsouza,...
19-05-25 05:22 pm
19-05-25 09:38 pm
Mangalore Correspondent
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm