ಬ್ರೇಕಿಂಗ್ ನ್ಯೂಸ್
29-10-23 06:51 pm HK News Desk ದೇಶ - ವಿದೇಶ
Photo credits : Onmanorama News
ತಿರುವನಂತಪುರ, ಅ.29: ಎರ್ನಾಕುಲಂ ಜಿಲ್ಲೆಯ ಕಳಮಶ್ಶೇರಿಯಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಕೊಚ್ಚಿಯಲ್ಲಿ ವ್ಯಕ್ತಿಯೊಬ್ಬ ಪೊಲೀಸರಿಗೆ ಶರಣಾಗಿದ್ದು ತಾನೇ ಕೃತ್ಯ ಎಸಗಿದ್ದಾಗಿ ಹೇಳಿಕೊಂಡಿದ್ದಾನೆ. ತೃಶ್ಶೂರು ಜಿಲ್ಲೆಯ ಕೊಡಕ್ಕರ ಪೊಲೀಸ್ ಠಾಣೆಯಲ್ಲಿ ಡೊಮಿನಿಕ್ ಮಾರ್ಟಿನ್ ಎಂಬಾತ ಪೊಲೀಸರಿಗೆ ಶರಣಾಗಿದ್ದು ತನ್ನದೇ ಕೃತ್ಯವೆಂದು ಹೇಳಿಕೊಂಡಿದ್ದಾನೆ.
ಪೊಲೀಸರು ಆತನನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಡೊಮಿನಿಕ್ ಮಾರ್ಟಿನ್ ತಾನು ಕೂಡ ಜೆಹೋವಾ ವಿಟ್ನೆಸ್ ಪಂಗಡಕ್ಕೆ ಸೇರಿದವನು ಎಂದು ತಿಳಿಸಿದ್ದಾನೆ. ನಾವು ಎಲ್ಲ ಕೋನದಿಂದಲೂ ತನಿಖೆ ನಡೆಸುತ್ತಿದ್ದೇವೆ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಜಿತ್ ಕುಮಾರ್ ತಿಳಿಸಿದ್ದಾರೆ.
ಕಳಮಶ್ಶೇರಿಯಲ್ಲಿ ಜೆಹೋವಾ ವಿಟ್ನೆಸ್ ಕ್ರಿಸ್ತಿಯನ್ ವರ್ಗದ ಮೂರು ದಿನದ ಸಮ್ಮೇಳನ ನಡೆಯುತ್ತಿದ್ದಾಗ, ಇಂದು ಬೆಳಗ್ಗೆ ಹಾಲ್ ಒಳಗಡೆ ಎರಡು ಕಡೆ ಬಾಂಬ್ ಸ್ಫೋಟ ಆಗಿತ್ತು. ಪ್ರಾಥಮಿಕ ಮಾಹಿತಿ ಪ್ರಕಾರ, ಐಇಡಿ ಬಾಂಬ್ ಬ್ಲಾಸ್ಟ್ ಆಗಿದೆ ಎನ್ನಲಾಗುತ್ತಿದೆ. ಸ್ಥಳದಲ್ಲಿ ಕೇರಳ ಪೊಲೀಸರು ಮತ್ತು ಎನ್ಐಎ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಘಟನೆಯಲ್ಲಿ ಒಬ್ಬ ಮಹಿಳೆ ಸಾವು ಕಂಡಿದ್ದು, 52 ಮಂದಿ ಗಾಯಗೊಂಡಿದ್ದಾರೆ. ಆರು ಮತ್ತು 12 ವರ್ಷದ ಇಬ್ಬರು ಮಕ್ಕಳು ತೀವ್ರ ಗಾಯಗೊಂಡಿದ್ದು ಐಸಿಯುನಲ್ಲಿದ್ದಾರೆ.
ಸ್ಫೋಟ ಘಟನೆ ಹಿನ್ನೆಲೆಯಲ್ಲಿ ಮುಂಬೈ, ದೆಹಲಿ ಸೇರಿದಂತೆ ಪ್ರಮುಖ ನಗರಗಳಲ್ಲಿ ಎಲರ್ಟ್ ಮಾಡಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಕೇರಳದ ಸಿಎಂ ಪಿಣರಾಯಿ ವಿಜಯನ್ ಅವರ ಜೊತೆಗೆ ಮಾತನಾಡಿದ್ದು, ಎನ್ಐಎ ಮತ್ತು ಎನ್ಎಸ್ ಜಿ ಕಮಾಂಡೋ ಪಡೆಯನ್ನು ಸ್ಥಳಕ್ಕೆ ಕಳಿಸಿಕೊಟ್ಟಿದ್ದಾಗಿ ತಿಳಿಸಿದ್ದಾರೆ. ಇದೇ ವೇಳೆ, ಸ್ಫೋಟ ಘಟನೆ ಸಂಬಂಧಿಸಿ ಗುಜರಾತ್ ಮೂಲದ ವ್ಯಕ್ತಿಯೊಬ್ಬನನ್ನು ಕಣ್ಣೂರು ರೈಲು ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
Church blast in Kochi kerala, Dominic Martin confesses crime of planting IED bomb in Jehova's Witness centre. Kerala police on Sunday confirmed that Thammanam native Dominic Martin planted the bomb which went off at a convention centre in Kalamassery in the morning. Police found visuals of the remote control used to detonate the IED on Dominic's phone.
06-01-25 09:41 pm
Bengaluru Correspondent
Chamarajanagar, Heart Attack School Student:...
06-01-25 06:53 pm
Bangalore Suicide, Software engineer family:...
06-01-25 02:03 pm
HMPV virus Karnataka, Guidelines: ಹೆಚ್ಎಂಪಿವ...
06-01-25 01:39 pm
ಬೆಂಗಳೂರಿನಲ್ಲಿ ಎರಡು ಶಿಶುಗಳಲ್ಲಿ ಎಚ್ಎಂಪಿವಿ ವೈರಸ್...
06-01-25 01:04 pm
05-01-25 09:41 pm
HK News Desk
Chhattisgarh Journalist Murder: ಛತ್ತೀಸ್ಗಢದಲ್ಲ...
04-01-25 06:01 pm
ಉತ್ತರ ಚೀನಾದಲ್ಲಿ ಮತ್ತೊಂದು ವೈರಸ್ ದಾಳಿ ; ಕೋವಿಡ್...
03-01-25 06:22 pm
ಅಮೆರಿಕದಲ್ಲಿ ಟ್ರಕ್ ನುಗ್ಗಿಸಿ ಭಯೋತ್ಪಾದಕ ಘಟನೆ ; ಐ...
03-01-25 11:57 am
ಸ್ವಿಜರ್ಲ್ಯಾಂಡಿನಲ್ಲಿ ಜನವರಿ 1ರಿಂದಲೇ ಬುರ್ಖಾ ನಿಷೇ...
02-01-25 06:20 pm
06-01-25 08:29 pm
Mangalore Correspondent
Beary community, convention, Mangalore: ಬ್ಯಾ...
06-01-25 08:04 pm
Naxal Surrender, Vikram Gowda, Mangalore: ವಿಕ...
06-01-25 03:59 pm
Mangalore, Kotekar Samaja Seva Sahakari Sangh...
05-01-25 10:51 pm
Dr Na DSouza passes, Death, Mangalore: ಖ್ಯಾತ...
05-01-25 10:16 pm
06-01-25 05:37 pm
HK News Desk
Mangalore Robbery, Singari Beedi owner, Crime...
04-01-25 11:31 am
Madhugiri DySP Ramachandrappa Arrest, Video:...
03-01-25 11:02 pm
Sri Bhagavathi Co Operative Bank fraud, Manga...
03-01-25 09:26 pm
Belagavi Murder, Crime; ಕುಡಿಯಲು ಹಣಕ್ಕಾಗಿ ಪೀಡಿ...
02-01-25 11:00 pm