ಬ್ರೇಕಿಂಗ್ ನ್ಯೂಸ್
06-11-23 01:44 pm HK News Desk ದೇಶ - ವಿದೇಶ
ನವದೆಹಲಿ, ನ.5: ಬಾಲಿವುಡ್ ನಟ- ನಟಿಯರನ್ನು ವಿವಾದಕ್ಕೆ ಸಿಲುಕಿಸಿರುವ ಮಹಾದೇವ ಬೆಟ್ಟಿಂಗ್ ಆ್ಯಪ್ ಅನ್ನು ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಮಹದೇವ್ ಬುಕ್ಕಿಂಗ್ ಆನ್ಲೈನ್ ಸೇರಿದಂತೆ ಇತರೇ 21 ಬೆಟ್ಟಿಂಗ್ ಅಪ್ಲಿಕೇಶನ್ಗಳು ಮತ್ತು ವೆಬ್ಸೈಟ್ಗಳ ವಿರುದ್ಧ ಐಟಿ ಸಚಿವಾಲಯ ಭಾನುವಾರ ನಿರ್ಬಂಧ ಹೇರಿದೆ. ಇಡಿ ಶಿಫಾರಸಿನ ನಂತರ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69ಎ ಅಡಿಯಲ್ಲಿ ಆದೇಶ ಹೊರಡಿಸಲಾಗಿದೆ.
ಈ ಕುರಿತಾಗಿ ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿಕೆ ನೀಡಿದ್ದು, “ಸೆಕ್ಷನ್ 69 ಎ ಐಟಿ ಕಾಯಿದೆ ಅಡಿಯಲ್ಲಿ ವೆಬ್ಸೈಟ್, ಆ್ಯಪ್ ಅನ್ನು ನಿಷೇಧಿಸುವ ಎಲ್ಲಾ ಅಧಿಕಾರವನ್ನು ಛತ್ತೀಸ್ಗಢ ಸರ್ಕಾರ ಹೊಂದಿದೆ. ಆದರೆ, ಅವರು ಹಾಗೆ ಮಾಡಿಲ್ಲ. ಕಳೆದ 1.5 ವರ್ಷಗಳಿಂದ ತನಿಖೆ ನಡೆಯುತ್ತಿದ್ದು, ರಾಜ್ಯ ಸರ್ಕಾರದಿಂದ ಅಂತಹ ಯಾವುದೇ ವಿನಂತಿಯನ್ನು ಮಾಡಿಲ್ಲ. ವಾಸ್ತವವಾಗಿ, ಇಡಿಯಿಂದ ಮೊದಲ ಮತ್ತು ಏಕೈಕ ಮನವಿ ಸ್ವೀಕರಿಸಲಾಗಿದೆ. ಅದರ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಮಹಾದೇವ್ ಬೆಟ್ಟಿಂಗ್ ಆ್ಯಪ್ ಮಾಲೀಕರನ್ನು ಆಗಸ್ಟ್ನಲ್ಲಿ ಮನಿ ಲಾಂಡರಿಂಗ್ ತಡೆ ಕಾಯ್ದೆಯ (ಪಿಎಂಎಲ್ಎ) ಸೆಕ್ಷನ್ 19 ರ ಅಡಿಯಲ್ಲಿ ಬಂಧಿಸಲಾಗಿತ್ತು. ಕಳೆದ ವಾರ, ಮಹಾದೇವ್ ಬೆಟ್ಟಿಂಗ್ ಆ್ಯಪ್ ಪ್ರವರ್ತಕರು ಛತ್ತೀಸ್ಗಢ ಸಿಎಂ ಭೂಪೇಶ್ ಬಾಘೇಲ್ಗೆ ಸುಮಾರು 508 ಕೋಟಿ ರೂ. ಲಂಚ ನೀಡಿದ್ದಾರೆ ಎಂಬ ಕುರಿತು ಫೋರೆನ್ಸಿಕ್ ವಿಶ್ಲೇಷಣೆ ಮತ್ತು ‘ಕ್ಯಾಶ್ ಕೊರಿಯರ್’ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ ಜಾರಿ ನಿರ್ದೇಶನಾಲಯ ಹೇಳಿಕೊಂಡಿತ್ತು. ಗಮನಾರ್ಹ ಮೊತ್ತದ ನಗದನ್ನು ತಲುಪಿಸುವ ಉದ್ದೇಶದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಿಂದ ಪಾರ್ಸೆಲ್ ಕಳುಹಿಸಲಾಗಿತ್ತು ಎಂದು ಬಂಧಿತ ಅಸಿಂ ದಾಸ್ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ. ರಾಜ್ಯದಲ್ಲಿ ಮುಂಬರುವ ಚುನಾವಣಾ ವೆಚ್ಚವನ್ನು ಬೆಂಬಲಿಸಲು ‘ಬಘೇಲ್’ ಎಂದು ಕರೆಯಲ್ಪಡುವ ಪ್ರಮುಖ ರಾಜಕಾರಣಿಗೆ ತಲುಪಿಸುವ ಉದ್ದೇಶದಿಂದ ಮಹಾದೇವ್ ಬೆಟ್ಟಿಂಗ್ ಅಪ್ಲಿಕೇಶನ್ನ ಪ್ರವರ್ತಕರು ಹಣವನ್ನು ವ್ಯವಸ್ಥೆಗೊಳಿಸಿದ್ದಾರೆ ಎಂದು ಒಪ್ಪಿಕೊಂಡಿದ್ದ. ಇದಲ್ಲದೆ, ಕೊರಿಯರ್ ಏಜಂಟ್ ಅಸೀಮ್ ದಾಸ್ ಜೊತೆಗೆ ಪೊಲೀಸ್ ಕಾನ್ಸ್ ಟೇಬಲ್ ಭೀಮ್ ಸಿಂಗ್ ಯಾದವ್ ಎಂಬಾತನನ್ನು ಕಳೆದ ವಾರ ಇಡಿ ಅಧಿಕಾರಿಗಳು ಬಂಧಿಸಿದ್ದರು.
The government on Sunday issued orders to ban 22 illegal betting and gambling apps and websites, including the controversial app Mahadev Book Online, an official notification said.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 06:25 pm
HK News Desk
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm