ಬ್ರೇಕಿಂಗ್ ನ್ಯೂಸ್
18-11-23 11:04 pm HK News Desk ದೇಶ - ವಿದೇಶ
ಲಕ್ನೋ, ನ.18: ಹಲಾಲ್ ಮಾರ್ಕ್ ಬಳಸಿ ಯಾವುದೇ ಸಾಮಗ್ರಿಗಳನ್ನು ಮಾರಾಟ ಮಾಡುವುದನ್ನು ಉತ್ತರ ಪ್ರದೇಶ ಸರಕಾರ ನಿಷೇಧಿಸಿದೆ. ಹಲಾಲ್ ಮಾರ್ಕ್ ವಿಚಾರದಲ್ಲಿ ರಾಜ್ಯದ ಹಲವು ಕಡೆ ಎಫ್ಐಆರ್ ದಾಖಲಾದ ಬೆನ್ನಲ್ಲೇ ಆದಿತ್ಯನಾಥ್ ಸರ್ಕಾರ, ಇಡೀ ರಾಜ್ಯದಲ್ಲಿ ಹಲಾಲ್ ಮಾರ್ಕ್ ಬ್ಯಾನ್ ಮಾಡಿ ಆದೇಶ ಮಾಡಿದೆ.
ಹಲಾಲ್ ಮಾರ್ಕ್ ಮಾರಾಟ, ಸ್ಟೋರ್ ಮಾಡುವುದು, ವಿತರಣೆ ಮಾಡುವುದು, ಬಳಕೆ ಮಾಡುವುದನ್ನು ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ ಎಂದು ಉತ್ತರ ಪ್ರದೇಶ ಅಧಿಕೃತ ಆದೇಶ ಮಾಡಿದೆ. ಹಲಾಲ್ ಸರ್ಟಿಫಿಕೇಟ್ ಮೂಲಕ ಜನರ ಧಾರ್ಮಿಕ ಭಾವನೆ ಕೆರಳಿಸಿ, ಕಂಪನಿಯ ಉತ್ಪನ್ನಗಳ ಮಾರಾಟ ಹೆಚ್ಚಿಸುತ್ತಿದ್ದಾರೆ ಎಂದು ನೀಡಿರುವ ದೂರು ಆಧರಿಸಿ ಲಕ್ನೋ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಹಜರತ್ ಗಂಜ್ ಪೊಲೀಸ್ ಠಾಣೆಯಲ್ಲಿ ಶೈಲೇಂದ್ರ ಕುಮಾರ್ ಶರ್ಮಾ ಎಂಬವರು ದೂರು ನೀಡಿದ್ದಾರೆ. ಇದರಂತೆ, ಹಲಾಲ್ ಸರ್ಟಿಫಿಕೇಟ್ ಪೂರೈಕೆ ಮಾಡುತ್ತಿದ್ದ ಹಲಾಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಚೆನ್ನೈ, ಜಮೀಯತ್ ಉಲೇಮಾ ಹಿಂದ್ ಹಲಾಲ್ ಟ್ರಸ್ಟ್ ನವದೆಹಲಿ, ಹಲಾಲ್ ಕೌನ್ಸಿಲ್ ಆಫ್ ಇಂಡಿಯಾ ಮುಂಬೈ, ಜಮೀಯತ್ ಉಲೇಮಾ ಮುಂಬೈ ಎಂಬೀ ಸಂಸ್ಥೆಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ರೀತಿಯ ಹಲಾಲ್ ಸರ್ಟಿಫಿಕೇಟ್ ಮೂಲಕ ಒಂದು ಕೋಮಿನ ಜನರನ್ನು ಗ್ರಾಹಕರಾಗಿ ಆಕರ್ಷಿಸುತ್ತಾರೆ. ಆಮೂಲಕ ಹಲಾಲ್ ಸರ್ಟಿಫಿಕೇಟ್ ಇಲ್ಲದ ಕಂಪನಿಯ ಉತ್ಪನ್ನಗಳಿಗೆ ಮಾರಾಟ ಇಲ್ಲದಂತೆ ಮಾಡಲಾಗುತ್ತದೆ. ಈ ರೀತಿ ಮಾಡುವುದು ಕಾನೂನು ರೀತ್ಯ ಅಪರಾಧ ಎಂದು ದೂರು ನೀಡಲಾಗಿತ್ತು.
The Uttar Pradesh government has banned products sold with a halal certification, hours after an official spokesperson claimed that the tag was being used to spread “propaganda” and “exploit religious sentiment”.
01-12-23 10:57 pm
HK News Desk
BJP Mla Munirathna, Bomb Email to schools in...
01-12-23 10:28 pm
Chikmagaluru news lawyer, Police: ಹೆಲ್ಮೆಟ್ ಹಾ...
01-12-23 06:08 pm
Bangalore School Bomb Mail: ಬಾಂಬ್ ಮೇಲ್ ; ಟೈಪ್...
01-12-23 05:49 pm
Bengaluru, schools get bomb threat on email:...
01-12-23 03:29 pm
01-12-23 08:02 pm
HK News Desk
ದೇವರ ದರ್ಶನಕ್ಕೆ ಹೊರಟವರು ಮಸಣಕ್ಕೆ ; ಚಾಲಕ ನಿದ್ದೆಗ...
01-12-23 05:19 pm
EXIT POLL- ಪಂಚ ರಾಜ್ಯಗಳ ಮತದಾನೋತ್ತರ ಸಮೀಕ್ಷೆ ; ಮ...
30-11-23 09:40 pm
ಯುಪಿಐ ಪಾವತಿ ವ್ಯವಸ್ಥೆಗೆ ಕಡಿವಾಣ ಹಾಕಲು ಚಿಂತನೆ ;...
30-11-23 09:02 pm
ರಾಷ್ಟ್ರಗೀತೆಗೆ ಅವಮಾನ ; 12 ಬಿಜೆಪಿ ಶಾಸಕರ ವಿರುದ್ಧ...
30-11-23 07:29 pm
01-12-23 08:06 pm
Mangalore Correspondent
Sunil Kumar Bajal: ಗ್ರಾಮ ಪಂಚಾಯತ್ ಪುಸ್ತಕ ಬರಹಗಾ...
01-12-23 06:33 pm
Mangalore Ullal, garbage collection van: ತುಕ್...
01-12-23 02:18 pm
S L Boje Gowda, BJP, JDS, Mangalore: ವಿಧಾನ ಪರ...
01-12-23 01:45 pm
Mangalore Catholics, Tipu attack,Kirem: ಟಿಪ್ಪ...
30-11-23 04:43 pm
01-12-23 10:41 pm
Bangalore Correspondent
Fraud Case, Mangalore: ಅಪಾರ್ಟ್ಮೆಂಟ್ ನಲ್ಲಿ ಫ್ಲ...
01-12-23 04:39 pm
Baby Sale Bangalore: ನವಜಾತ ಶಿಶು ಮಾರಾಟ ಕೇಸ್ ;...
30-11-23 07:35 pm
ನಕಲಿ ನೋಟು ಸಪ್ಲೈ , ಇನ್ಶೂರೆನ್ಸ್ ಹೆಸ್ರಲ್ಲಿ ಜನರಿ...
30-11-23 07:24 pm
Bangalore Mangalore News, Mobile Naked Photos...
30-11-23 03:15 pm