ಬ್ರೇಕಿಂಗ್ ನ್ಯೂಸ್
21-11-23 03:09 pm HK News Desk ದೇಶ - ವಿದೇಶ
ಚೆನ್ನೈ, ನ 21: ಇಂಡಿಗೋ ಏರ್ಲೈನ್ಸ್ ಎಟಿಆರ್ ಪ್ರಯಾಣಿಕ ವಿಮಾನಕ್ಕೆ ಪ್ರಯಾಣಿಕರ ಲಗೇಜ್ಗಳನ್ನು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ವಿಮಾನಕ್ಕೆ ಸ್ವಲ್ಪ ಹಾನಿಯಾಗಿರುವ ಘಟನೆ ಚೆನ್ನೈನ ಡೊಮೆಸ್ಟಿಕ್ ವಿಮಾನ ನಿಲ್ದಾಣದಲ್ಲಿ ಭಾನುವಾರ ರಾತ್ರಿ ನಡೆದಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.
ತಕ್ಷಣವೇ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ಸ್ ಸೆಕ್ಯುರಿಟಿ (ಬಿಸಿಎಎಸ್) ಫ್ಲೈಟ್ ಸುರಕ್ಷತಾ ಅಧಿಕಾರಿಗಳು ಹಾನಿಗೊಳಗಾದ ವಿಮಾನವನ್ನು ಪರಿಶೀಲನೆ ಮಾಡಿದ್ದು, ಆ ಕ್ಷಣಕ್ಕೆ ವಿಮಾನ ಹಾರಲು ಅನರ್ಹವಾಗಿದೆ ಎಂದು ವಿಮಾನ ಹಾರಾಟ ಅನುಮತಿ ನಿರಾಕರಿಸಿದ್ದಾರೆ. ಈ ಬಗ್ಗೆ ದೆಹಲಿಯ ನಾಗರಿಕ ವಿಮಾನ ಮಹಾನಿರ್ದೇಶನಾಲಯಗೂ (ಡಿಜಿಸಿಎ) ಮಾಹಿತಿ ನೀಡಲಾಗಿದ್ದು, ಘಟನೆ ಬಗ್ಗೆ ವಿವರವಾದ ತನಿಖೆಗೆ ಆದೇಶಿಸಿದೆ. ಮುಂದಿನ ಆದೇಶದವರೆಗೆ ಏರ್ಪೋರ್ಟ್ನಿಂದ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.
ಘಟನೆ ಬಗ್ಗೆ ಇಂಡಿಗೋ ಏರ್ಲೈನ್ಸ್, ಪ್ರಯಾಣಿಕರ ಸಾಮಾನುಗಳನ್ನು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ವಿಮಾನಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಇದರಿಂದಾಗಿ ಚೆನ್ನೈನಿಂದ ತಿರುಚ್ಚಿಗೆ ಇಂಡಿಗೋ ವಿಮಾನದ 24 ಸೇವೆಗಳನ್ನು ರದ್ದುಗೊಳಿಸಲಾಗಿದೆ. ಹಾನಿಗೊಳಗಾದ ವಿಮಾನವನ್ನು ಈಗಾಗಲೇ ದುರಸ್ತಿ ಮಾಡಲಾಗಿದ್ದು, ನವೆಂಬರ್ 22 ರಿಂದ ವಿಮಾನ ಸೇವೆ ಪುನಾರಂಭವಾಗಲಿದೆ. ಪ್ರಯಾಣ ರದ್ದುಗೊಂಡಿರುವ ಪ್ರಯಾಣಿಕರಿಗೆ ಅವರ ಟಿಕೆಟ್ ದರವನ್ನು ಮರು ಪಾವತಿಸಲಾಗುವುದು ಎಂದು ಇಂಡಿಗೋ ಏರ್ಲೈನ್ಸ್ ಹೇಳಿದೆ.
ಅಪಘಾತದ ಕುರಿತು ವಿಮಾನ ನಿಲ್ದಾಣದ ಅಧಿಕಾರಿಗಳ ತನಿಖೆ ನಡೆಸುತ್ತಿದ್ದಾರೆ. ಬಿಸಿಎಎಸ್ ಹಾಗೂ ಡಿಜಿಸಿಎಯಿಂದ ವಿಮಾನದ ಸಂಪೂರ್ಣ ದುರಸ್ತಿ ಹಾಗೂ ವಿಮಾನ ಹಾರಾಟಕ್ಕೆ ಅನುಮತಿ ದೊರೆತ ನಂತರವೇ ವಿಮಾನ ಮತ್ತೆ ಕಾರ್ಯ ನಿರ್ವಹಿಸಲಿದೆ ಎಂದು ಹೇಳಲಾಗಿದೆ.
An Indigo Airlines ATR passenger flight was slightly damaged when a tractor carrying belongings collided with it at the Chennai Domestic Airport on Sunday night. None was, however, injured in the incident. The Bureau of Civil Aviation Security (BCAS) flight safety officials, while inspecting the damaged aircraft, have denied permission to resume operation, stating that the flight is unfit to fly again immediately.
20-03-26 12:02 pm
HK News Staffer
ಹುಬ್ಬಳ್ಳಿ ; ರೀಲ್ಸ್ ಹುಚ್ಚಾಟಕ್ಕೆ 15 ವರ್ಷದ ಬಿಜೆಪ...
20-03-26 12:00 pm
ಶಿವಮೊಗ್ಗದ ಹುಲಿ ಸಿಂಹ ಧಾಮದಲ್ಲಿ ನೀರಾನೆ ದಾಳಿ ; 26...
20-03-26 10:03 am
ಗ್ಯಾಸ್ ಸಿಲಿಂಡರ್ ಅಭಾವ; ಬಹುತೇಕ ಹೋಟೆಲ್ ಗಳು ಬಂದ್...
19-03-26 05:01 pm
DG Ramachandra Rao, Sandesh PG: ರಕ್ಷಕರೇ ಭಕ್ಷಕ...
18-03-26 11:00 pm
19-03-26 04:51 pm
HK News Staffer
ಹೊರ್ಮುಜ್ ಜಲಸಂಧಿಯತ್ತ ಭಾರತ ನೌಕಾಪಡೆ ; ಗಲ್ಫ್ ನಲ್ಲ...
19-03-26 04:35 pm
ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲ ಎನ್ನುವುದೇ ಅಪ...
18-03-26 07:11 pm
ಎಲ್ಲರನ್ನೂ ಕ್ಷಮಿಸಿ ಬಿಡು..! ದಯಾಮರಣಕ್ಕೆ ಅನುಮತಿ ಪ...
16-03-26 11:05 pm
ಆರೆಸ್ಸೆಸ್ ಮತ್ತು ಗುಪ್ತಚರ ಸಂಸ್ಥೆ 'ರಾ' ಬ್ಯಾನ್ ಮಾ...
16-03-26 09:30 pm
19-03-26 11:30 pm
HK News Desk
ಧರ್ಮಸ್ಥಳ 74 ಅಸಹಜ ಸಾವುಗಳ ಪ್ರಕರಣಕ್ಕೆ ಟ್ವಿಸ್ಟ್!...
19-03-26 05:27 pm
ಗ್ಯಾಸ್ ಬಿಲ್ ನಲ್ಲಿ 20 ರು. ಬಾಕಿ ಇದೆಯೆಂದು ಸೈಬರ್...
19-03-26 02:51 pm
ಮೂಡುಬಿದ್ರೆ ; ಕೋಳಿ ಅಂಕಕ್ಕೆ ಪೊಲೀಸ್ ದಾಳಿ, ಆರು ಮಂ...
19-03-26 01:05 pm
ಪಿಲಿಕುಳದಲ್ಲಿ ಏಳು ಮುದ್ದಾದ ಮಕ್ಕಳ ತಾಯಿಯಾದ 'ಗೀತಾ'...
18-03-26 10:42 pm
19-03-26 10:38 pm
Mangaluru Staffer
ಉಜಿರೆ ಜಾತ್ರೆಗೆ ಬಂದಿದ್ದ ಮುಸ್ಲಿಂ ಬಾಲಕನ ಅಪಹರಿಸಿ...
19-03-26 12:16 pm
Mangalore Crime: 9ರ ಹರೆಯದ ಬಾಲಕನಿಗೆ ಅಶ್ಲೀಲ ವೀಡ...
18-03-26 11:01 pm
Indian American Family Robbery: ಒಂದೇ ನಿಮಿಷದಲ್...
15-03-26 12:49 pm
ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ; ಪೋಕ್ಸೋ ಕಾಯ...
12-03-26 11:20 pm