ಬ್ರೇಕಿಂಗ್ ನ್ಯೂಸ್
23-11-23 08:40 pm HK News Desk ದೇಶ - ವಿದೇಶ
ಮಹಾರಾಷ್ಟ್ರ, ನ.23: ಸಾಕು ಪ್ರಾಣಿಗಳ ಕ್ಲಿನಿಕ್ನಲ್ಲಿ ಸಾಕು ನಾಯಿಯೊಂದು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಪುಣೆಯಲ್ಲಿ ಇಬ್ಬರು ವೈದ್ಯರು ಸೇರಿದಂತೆ ನಾಲ್ವರ ವಿರುದ್ಧ ಪೊಲೀಸ್ ಕೇಸ್ ದಾಖಲಾಗಿದೆ. ಶ್ವಾನದ ಮಾಲಕಿ ನೀಡಿದ ದೂರಿನ ಮೇರೆಗೆ ಪೊಲೀಸರು ಪೆಟ್ ಕ್ಲಿನಿಕ್ನ ವೈದ್ಯರನ್ನು ವಿಚಾರಣೆಗೂ ಒಳಪಡಿಸಿದ್ದಾರೆ.
ಇಲ್ಲಿನ ಪಾಶಾನ್ ಉಪನಗರದಲ್ಲಿರುವ ಪೆಟ್ ಕ್ಲಿನಿಕ್ಗೆ ನವೆಂಬರ್ 17ರಂದು ಸಂಜೆ 35 ವರ್ಷದ ಮಹಿಳೆಯೊಬ್ಬರು ತಮ್ಮ 'ಹನಿ' ಎಂಬ ಲ್ಯಾಬ್ರಡಾರ್ ಶ್ವಾನವನ್ನು ಕರೆತಂದಿದ್ದರು. ವಾರ್ಷಿಕ ವ್ಯಾಕ್ಸಿನೇಷನ್ ಹಾಗೂ ಉಗುರು ಟ್ರಿಮ್ಮಿಂಗ್ಗೆಂದು ಶ್ವಾನವನ್ನು ಪೆಟ್ ಕ್ಲಿನಿಕ್ನ ವೈದ್ಯರಿಗೆ ಮಾಲಕಿ ಒಪ್ಪಿಸಿದ್ದರು. ಡಾ. ಶುಭಂ ರಜಪೂತ್ ಹಾಗೂ ಇತರ ಇಬ್ಬರು ಸೇರಿಕೊಂಡು ಶ್ವಾನವನ್ನು ಮರಕ್ಕೆ ಕಟ್ಟಲು ಪ್ರಯತ್ನಿಸುತ್ತಿದ್ದರು. ಆದರೆ, ಡಾ. ರಜಪೂತ್ ಕಟ್ಟಿದ್ದ ಬೆಲ್ಟ್ ಶ್ವಾನದ ಕುತ್ತಿಗೆಗೆ ಬಿಗಿದುಕೊಂಡಿದೆ. ಪರಿಣಾಮ ಶ್ವಾನ ಕುಸಿದು ಕೆಳಗೆ ಬಿದ್ದಿದೆ.
ನಂತರ ಚಿಕಿತ್ಸೆಗಾಗಿ ವೈದ್ಯರ ಕೊಠಡಿಗೆ ಶ್ವಾನವನ್ನು ಎತ್ತಿಕೊಂಡು ಹೋಗಲಾಗಿದೆ. ಆಗ 15 ನಿಮಿಷಗಳ ಬಳಿಕ ಮತ್ತೊಬ್ಬ ವೈದ್ಯ ಶ್ವಾನ ಮೃತಪಟ್ಟಿದೆ ಎಂದು ಮಾಲಕಿಗೆ ತಿಳಿಸಿದ್ದಾರೆ. ಆದರೆ, ಶ್ವಾನದ ಸಾವಿನ ಕಾರಣದ ಕುರಿತು ಸರಿಯಾದ ಮಾಹಿತಿಯನ್ನು ಈ ವೈದ್ಯರು ನೀಡಿಲ್ಲ. ಹೀಗಾಗಿ ಈ ಘಟನೆಯ ನಂತರ ಮಾಲಕಿ ಚತುರ್ಶೃಂಗಿ ಪೊಲೀಸ್ ಠಾಣೆಗೆ ಬಂದು ಡಾ.ಸಜೀನ್ ರಾಜಾಧ್ಯಕ್ಷ (60), ಡಾ.ಶುಭಂ ರಜಪೂತ್ (35) ಮತ್ತು ಇಬ್ಬರು ಅಪರಿಚಿತ ವ್ಯಕ್ತಿಗಳು ಸೇರಿ ಒಟ್ಟು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ದೂರುದಾರ ಮಾಲಕಿಯು ಲ್ಯಾಬ್ರಡಾರ್ ಶ್ವಾನ 'ಹನಿ'ಯನ್ನು ಕಳೆದ 8 ವರ್ಷಗಳಿಂದ ಸಾಕುತ್ತಿದ್ದರು. ಅದನ್ನು 40 ದಿನಗಳ ಮರಿಯಾಗಿದ್ದಾಗಲೇ ಮನೆಗೆ ತರಲಾಗಿತ್ತು. ಕ್ಲಿನಿಕ್ನಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಶ್ವಾನ ಮೃತಪಟ್ಟಿದೆ ಎಂದು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
In a startling turn of events at Pune’s Chaturshrungi Police Station, a routine dog vaccination took a tragic turn, leading to a legal dispute and raising questions about the handling of the situation by two local veterinary doctors.
26-07-25 02:00 pm
HK News Desk
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
Rameshwaram Cafe Pongal Worm: ರಾಮೇಶ್ವರ ಕೆಫೆಯ...
24-07-25 10:52 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
26-07-25 10:41 pm
Mangalore Correspondent
Mangalore, Dharmasthala Case, SIT, whistle bl...
26-07-25 10:05 pm
ಧರ್ಮಸ್ಥಳ ಎಸ್ಐಟಿ ತಂಡದಿಂದ ಮತ್ತೊಬ್ಬರು ಹೊರಕ್ಕೆ ;...
26-07-25 08:20 pm
Mangalore Rajashree Jayaraj Poojary Death: ಬಹ...
26-07-25 04:38 pm
India’s Largest Job Fair ‘Alva’s Pragati 2025...
26-07-25 11:37 am
26-07-25 09:35 pm
HK News Desk
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm
Hyderabad, Udupi, Crime: ಹೈದರಾಬಾದಿನಲ್ಲಿ ರಿಯಲ್...
23-07-25 04:49 pm
ಟೆಲಿಗ್ರಾಮ್ ಆ್ಯಪ್ನಲ್ಲಿ ಹೂಡಿಕೆ ಮೇಲೆ ಕಮಿಷನ್ ; ಆ...
23-07-25 03:25 pm