ಬ್ರೇಕಿಂಗ್ ನ್ಯೂಸ್
27-11-23 06:22 pm HK News Desk ದೇಶ - ವಿದೇಶ
ಪುಣೆ, ನ.27: ಇದೇ ಮೊದಲ ಬಾರಿಗೆ ಪ್ರಯಾಣಿಕರಿಗೇ ಅಚ್ಚರಿಯಾಗುವ ಘಟನೆ ನಡೆದಿದೆ. ವಿಮಾನ ಟಿಕೆಟ್ ಬುಕ್ ಆಗಿದೆ. ಚೆಕಿಂಗ್ ಎಲ್ಲಾ ಮುಗಿದು ಪ್ರಯಾಣಕ್ಕಾಗಿ ವಿಮಾನದೊಳಕ್ಕೆ ಹತ್ತಿದ ಮಹಿಳೆಗೆ ಶಾಕ್ ಆಗಿದೆ. ಯಾಕಂದ್ರೆ ಅವರ ಸೀಟ್ 10ಎ ಸೀಟೇ ನಾಪತ್ತೆಯಾಗಿದೆ. ಸೀಟಿನ ಕುಶನ್ ಇರಲೇ ಇಲ್ಲ. ಸುಖಕರ ಪ್ರಯಾಣ ನರಕವಾಗಿದ ಘಟನೆ ಪುಣೆ-ನಾಗ್ಪುರ ಇಂಡಿಗೋ ವಿಮಾನದಲ್ಲಿ ನಡೆದಿದೆ.
ಗಂಡ - ಹೆಂಡತಿ ಪುಣೆಯಿಂದ ನಾಗ್ಪುರಕ್ಕೆ ತೆರಳಲು ಇಂಡಿಗೋ 6ಇ-6798 ವಿಮಾನ ಟಿಕೆಟ್ ಬುಕ್ ಮಾಡಿದ್ದಾರೆ. ಪುಣೆ ವಿಮಾನ ನಿಲ್ದಾಣಕ್ಕೆ ತೆರಳಿದ ದಂಪತಿ ಚೆಕೆಂಗ್ ಮುಗಿಸಿದ್ದಾರೆ. ತಮ್ಮ ಲಗೇಜ್ ಬ್ಯಾಗ್ಗಳನ್ನು ನೀಡಿ ಸೀಟ್ ನಂಬರ್ ಕೂಡ ಪಡೆದಿದ್ದಾರೆ. ಪತ್ನಿಗೆ 10ಎ ಸೀಟು ನೀಡಲಾಗಿತ್ತು, ಇಂಡಿಗೋ 6ಇ-6798 ವಿಮಾನ ಹತ್ತಿದ ದಂಪತಿ ತಮ್ಮ ಸೀಟಿನ ಬಳಿ ತಲುಪಿದಾಗ ಅಚ್ಚರಿಯಾಗಿದೆ. ಕಾರಣ ಗಂಡನ ಪಕ್ಕದಲ್ಲೇ ಹೆಂಡತಿಯ 10ಎ ಸೀಟು ಅಲಾಟ್ ಮಾಡಲಾಗಿತ್ತು ಆದ್ರೆ ಸೀಟ್ ಕುಶನ್ ಮಾಯವಾಗಿತ್ತು. ಅಚ್ಚರಿಗೊಂಡ ದಂಪತಿ, ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಸಿಬ್ಬಂದಿ ಸೀಟಿನ ಕೆಳಗೆ ಹುಡುಕಲು ತಿಳಿಸಿದ್ದಾರೆ. ದಂಪತಿಗಳಿಬ್ಬರು ಸೀಟಿನ ಪಕ್ಕದಲ್ಲಿ, ಕೆಳಗೆ ಹುಡುಕಿದ್ದಾರೆ. ಆದರೆ ಎಲ್ಲೂ ಪತ್ತೆಯಾಗಿಲ್ಲ.
ಮತ್ತೆ ಸಿಬ್ಬಂದಿ ಕರೆದು ಮಾಹಿತಿ ನೀಡಿದ್ದಾರೆ. ಈ ವೇಳೆ ವಿಮಾನ ಸಿಬ್ಬಂದಿಗಳು ಬೇರೊಂದು ಕುಶನ್ ತಂದು ಸೀಟಿಗೆ ಜೋಡಿಸಿದ್ದಾರೆ. ಆದರೆ ಈ ಕುಶನ್ ಸೀಟಿಗೆ ಸರಿಯಾಗಿ ಹೊಂದಿಕೆಯಾಗುತ್ತಿರಲಿಲ್ಲ. ಈ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ದಂಪತಿಗಳು ಇಂಡಿಗೋದಂತ ವಿಮಾನದಲ್ಲಿ ಈ ರೀತಿ ಕುಶನ್ ಮಿಸ್ ಆಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಈ ರೀತಿಯ ನಿರ್ಲಕ್ಷ್ಯ ವಿಮಾನದಲ್ಲಿ ಹೆಚ್ಚಾಗಿ ಕಾಣಿಸುತ್ತಿದೆ. ಪ್ರತಿ ಪ್ರಯಾಣದ ಬಳಿಕ ಪ್ರತಿಯೊಂದು ಸೀಟು, ಸಂಪೂರ್ಣ ವಿಮಾನ ಶುಚಿಗೊಳಿಸುತ್ತಾರೆ. ಆದರೂ ಸೀಟು ಮಿಸ್ಸಾಗಿರುವುದು ಯಾರೂ ಗಮನಸಿಲ್ಲ ಅನ್ನೋದು ನಿರ್ಲಕ್ಷ್ಯದ ಪರಮಾವಧಿ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.
A passenger named Sagarika Patnaik was in for a surprise when she boarded an IndiGo flight from Pune to Nagpur on November 26. Her allotted seat was missing the seat cushion while the backrest cushion was still in place. Yes, you read that right! Her husband Subrat Patnaik tweeted a picture of the seat, and it has since been gaining significant traction on social media.
26-07-25 02:00 pm
HK News Desk
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
Rameshwaram Cafe Pongal Worm: ರಾಮೇಶ್ವರ ಕೆಫೆಯ...
24-07-25 10:52 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
26-07-25 10:41 pm
Mangalore Correspondent
Mangalore, Dharmasthala Case, SIT, whistle bl...
26-07-25 10:05 pm
ಧರ್ಮಸ್ಥಳ ಎಸ್ಐಟಿ ತಂಡದಿಂದ ಮತ್ತೊಬ್ಬರು ಹೊರಕ್ಕೆ ;...
26-07-25 08:20 pm
Mangalore Rajashree Jayaraj Poojary Death: ಬಹ...
26-07-25 04:38 pm
India’s Largest Job Fair ‘Alva’s Pragati 2025...
26-07-25 11:37 am
26-07-25 09:35 pm
HK News Desk
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm
Hyderabad, Udupi, Crime: ಹೈದರಾಬಾದಿನಲ್ಲಿ ರಿಯಲ್...
23-07-25 04:49 pm
ಟೆಲಿಗ್ರಾಮ್ ಆ್ಯಪ್ನಲ್ಲಿ ಹೂಡಿಕೆ ಮೇಲೆ ಕಮಿಷನ್ ; ಆ...
23-07-25 03:25 pm