ಬ್ರೇಕಿಂಗ್ ನ್ಯೂಸ್
28-11-23 10:05 pm HK News Desk ದೇಶ - ವಿದೇಶ
ಡೆಹ್ರಾಡೂನ್, ನ.28: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸಿಲ್ಕ್ಯಾರ್ ಸುರಂಗದಲ್ಲಿ ಸಾವಿನ ದವಡೆಗೆ ಸಿಲುಕಿ 17 ದಿನಗಳಿಂದ ಜೀವನ್ಮರಣ ಹೋರಾಟದಲ್ಲಿದ್ದ ಎಲ್ಲ 41 ಕಾರ್ಮಿಕರನ್ನು ಸೇನೆ ಮತ್ತು ತಂತ್ರಜ್ಞರ ತುರ್ತು ಕಾರ್ಯಾಚರಣೆಯಲ್ಲಿ ಸುರಕ್ಷಿತವಾಗಿ ಹೊರಕ್ಕೆ ಕರೆತರಲಾಗಿದೆ.
ಮಂಗಳವಾರ ಸಂಜೆಯಿಂದ ಒಬ್ಬೊಬ್ಬರನ್ನೇ ಪೈಪ್ ಮೂಲಕ ಹೊರಗೆ ಕರೆತರುವ ಕೆಲಸ ಆರಂಭಿಸಿದ್ದು, ರಾತ್ರಿ 9 ಗಂಟೆ ವೇಳೆಗೆ ಎಲ್ಲ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ. ಕಾರ್ಮಿಕರು ಹೊರ ಬರುತ್ತಿದ್ದಂತೆ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ರವಾನಿಸಲಾಗಿದೆ. ಮೂರು ಎನ್ಡಿಆರ್ಎಫ್ ತಂಡಗಳು ಸುರಂಗದ ಒಳಗಡೆ ಪ್ರವೇಶಿಸಿ, ರಕ್ಷಣಾ ಕಾರ್ಯ ನಡೆಸಿವೆ. ಕಾರ್ಮಿಕರು ಹೊರ ಬರುತ್ತಿದ್ದಂತೆ ಸುರಂಗದ ಹೊರಗಡೆ ಜೈಕಾರಗಳು ಮೊಳಗಿದವು. ಎಲ್ಲ 41 ಕಾರ್ಮಿಕರನ್ನು ಹೊರಗೆ ಕರೆತರುತ್ತಿದ್ದಂತೆ ಪ್ರಧಾನಿ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ಸಾರಿಗೆ ಸಚಿವ ನಿತಿನ್ ಗಡ್ಕರಿ ಸಂತಸ ವ್ಯಕ್ತಪಡಿಸಿದ್ದಾರೆ. ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಮತ್ತು ಕೇಂದ್ರ ಸಚಿವ ಜನರಲ್ ವಿ.ಕೆ. ಸಿಂಗ್ ರಕ್ಷಿಸಲ್ಪಟ್ಟ ಕಾರ್ಮಿಕರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.
ನ.12ರಂದು ಸುರಂಗದಲ್ಲಿ ಕೆಲಸ ನಿರತರಾಗಿದ್ದ ಕಾರ್ಮಿಕರು ಬಂಡೆ ಕುಸಿತದಿಂದ ಭೂಮಿಯ ಒಳಗಡೆ ಸಿಕ್ಕಿಕೊಂಡಿದ್ದರು. ಆದರೆ, ಅರ್ಧ ಭಾಗಕ್ಕೆ ಬಂಡೆ ಸಿಲುಕಿದ್ದರಿಂದ ಕಾರ್ಮಿಕರಿಗೆ ಯಾವುದೇ ಅಪಾಯ ಆಗಿರಲಿಲ್ಲ. ಅವರನ್ನು ಹೊರ ತೆಗೆಯುವುದು ಭಾರೀ ಸವಾಲಾಗಿತ್ತು. ನಿರಂತರವಾಗಿ ಸೇನೆ ಸೇರಿದಂತೆ ಎನ್ ಡಿಎಫ್, ಇತರ ರಕ್ಷಣಾ ತಜ್ಞರು ಕಾರ್ಯಾಚರಣೆ ನಡೆಸಿದ್ದರು. ಸತತ 17 ದಿನಗಳಿಂದ ಕತ್ತಲೆ ಕೂಪದಲ್ಲಿ ಜೀವ ಕೈಯಲ್ಲಿ ಹಿಡಿದು ನಿಂತಿದ್ದ ಕಾರ್ಮಿಕರು ಕೊನೆಗೂ ಅಪಾಯದಿಂದ ಪಾರಾಗಿ ಬಂದಿದ್ದಾರೆ. ಕಳೆದ ಒಂದು ವಾರದಿಂದ ಅಮೆರಿಕದ ರಕ್ಷಣಾ ತಜ್ಞರ ಸೂಚನೆಯಂತೆ ಬೆಟ್ಟದ ಮೇಲ್ಭಾಗದಿಂದ ಲಂಬವಾಗಿ ಸುರಂಗ ಕೊರೆಯಲಾಗಿತ್ತು. ನಾಲ್ಕು ದಿನಗಳ ಹಿಂದೆ ಸಣ್ಣ ವ್ಯಾಸದಲ್ಲಿ ರಂಧ್ರ ಕೊರೆದು ಕಾರ್ಮಿಕರು ಸುರಕ್ಷಿತವಾಗಿರುವುದನ್ನು ಖಾತ್ರಿ ಪಡಿಸಲಾಗಿತ್ತು.
ಆನಂತರ 800 ಎಂಎಂ ವ್ಯಾಸದ ಪೈಪ್ ಅನ್ನು ವಿಶೇಷ ಯಂತ್ರದಿಂದ ಜೋಡಿಸಲಾಗಿದ್ದು, ಅದರ ಮೂಲಕ ಕಾರ್ಮಿಕರನ್ನು ಹೊರಗೆ ಕರೆತರಲಾಗಿದೆ. ಎರಡು ದಿನಗಳ ಹಿಂದೆ ಈ ಯಂತ್ರವು ಕೊರೆಯುತ್ತಿದ್ದಾಗಲೇ 47 ಮೀಟರ್ ಅಂತರದಲ್ಲಿ ಬಂಡೆ ಕಲ್ಲಿನಡಿ ಸಿಲುಕಿ ಛಿದ್ರವಾಗಿತ್ತು. ಹಾಗಾಗಿ ಕಾರ್ಮಿಕರನ್ನು ರಕ್ಷಣೆ ಮಾಡುವುದು ಒಂದು ತಿಂಗಳು ವಿಳಂಬ ಆಗಬಹುದೆಂಬ ಮಾತುಗಳನ್ನು ರಕ್ಷಣಾ ತಂಡದವರು ಹೇಳಿದ್ದರು. ಕಾರ್ಮಿಕರಿಗೆ ಆಹಾರ, ಔಷಧಿ ಇನ್ನಿತರ ವಸ್ತುಗಳನ್ನು ಪೂರೈಸಲಾಗಿತ್ತು. ಮಂಗಳವಾರ ಸಂಜೆಯ ವೇಳೆಗೆ ನೇರವಾಗಿ ಕಾರ್ಮಿಕರನ್ನು ಹೊರಕ್ಕೆ ಕರೆತರಲಾಗಿದ್ದು, ಸಾವಿನ ದವಡೆಯಲ್ಲಿ ಸಿಲುಕಿದ್ದ ಕಾರ್ಮಿಕರೆಲ್ಲ ಪುನರ್ಜನ್ಮ ಪಡೆದಂತಾಗಿದೆ.
A successful rescue operation by NDRF and SDRF teams has led to the extraction of all the 41 workers who were trapped inside the Silkyara tunnel in Uttarakhand since November 12. Uttarakhand Chief Minister Pushkar Singh Dhami, Union minister Nitin Gadkari and other officials are also at the rescue site. 'Rat-hole' miners from Uttar Pradesh had teamed up with the Army for the task of manually burrowing through the remaining 10-12 meters of rubble that separated the workers from freedom
26-07-25 02:00 pm
HK News Desk
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
Rameshwaram Cafe Pongal Worm: ರಾಮೇಶ್ವರ ಕೆಫೆಯ...
24-07-25 10:52 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
26-07-25 10:41 pm
Mangalore Correspondent
Mangalore, Dharmasthala Case, SIT, whistle bl...
26-07-25 10:05 pm
ಧರ್ಮಸ್ಥಳ ಎಸ್ಐಟಿ ತಂಡದಿಂದ ಮತ್ತೊಬ್ಬರು ಹೊರಕ್ಕೆ ;...
26-07-25 08:20 pm
Mangalore Rajashree Jayaraj Poojary Death: ಬಹ...
26-07-25 04:38 pm
India’s Largest Job Fair ‘Alva’s Pragati 2025...
26-07-25 11:37 am
26-07-25 09:35 pm
HK News Desk
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm
Hyderabad, Udupi, Crime: ಹೈದರಾಬಾದಿನಲ್ಲಿ ರಿಯಲ್...
23-07-25 04:49 pm
ಟೆಲಿಗ್ರಾಮ್ ಆ್ಯಪ್ನಲ್ಲಿ ಹೂಡಿಕೆ ಮೇಲೆ ಕಮಿಷನ್ ; ಆ...
23-07-25 03:25 pm