ಬ್ರೇಕಿಂಗ್ ನ್ಯೂಸ್
29-11-23 09:38 pm HK News Desk ದೇಶ - ವಿದೇಶ
ಕೋಲ್ಕತ್ತಾ, ನ.29: ಪಶ್ಚಿಮ ಬಂಗಾಳದಲ್ಲಿ ಭ್ರಷ್ಟ ಟಿಎಂಸಿ ಸರಕಾರವನ್ನು ಕಿತ್ತೊಗೆಯಬೇಕಿದ್ದರೆ, 2024ರಲ್ಲಿ ಮತ್ತೆ ನರೇಂದ್ರ ಮೋದಿ ಅವರನ್ನು ದೇಶದ ಪ್ರಧಾನಿಯಾಗಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದ್ದಾರೆ.
ಕೊಲ್ಕತ್ತಾದಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಮಮತಾ ಬ್ಯಾನರ್ಜಿ ಸಂಪುಟದಲ್ಲಿ ಹಲವು ಸಚಿವರು ಭ್ರಷ್ಟಾಚಾರ, ಹಗರಣಗಳಲ್ಲಿ ಸಿಕ್ಕಿಬಿದ್ದು ಅರೆಸ್ಟ್ ಆಗಿದ್ದಾರೆ. ಆದರೆ ಅವರನ್ನು ಪಕ್ಷದಿಂದ ಕಿತ್ತೊಗೆಯುವ ಅಥವಾ ಸಚಿವ ಸಂಪುಟದಿಂದ ವಜಾ ಮಾಡುವ ಕೆಲಸವನ್ನು ಮಾಡಿಲ್ಲ. ಇದು ಮಮತಾ ಬ್ಯಾನರ್ಜಿ ಭ್ರಷ್ಟಾಚಾರವನ್ನು ಪೋಷಣೆ ಮಾಡುತ್ತಿದ್ದಾರೆ ಅನ್ನುವುದಕ್ಕೆ ಸಾಕ್ಷಿ ಎಂದರು.
2026ರಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರಕಾರವನ್ನು ಅಧಿಕಾರಕ್ಕೆ ತರಬೇಕೆಂಬ ಇಚ್ಛೆ ಇದ್ದಲ್ಲಿ ನೀವು 2024ರಲ್ಲಿ ಮೋದಿ ಅವರನ್ನು ಮತ್ತೆ ಪ್ರಧಾನಿ ಪಟ್ಟಕ್ಕೇರಿಸಬೇಕು. ತೃಣಮೂಲ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳು ಹಲವಾರು ವರ್ಷಗಳಿಂದ ಈ ರಾಜ್ಯವನ್ನು ಆಳ್ವಿಕೆ ಮಾಡಿದ್ದರಿಂದ ಒಟ್ಟು ವ್ಯವಸ್ಥೆಯೇ ಹಾಳಾಗಿ ಹೋಗಿದೆ. ಕಳೆದ ಬಾರಿ ಮಮತಾ ಬ್ಯಾನರ್ಜಿ ಪರಿವರ್ತನೆ ತರುತ್ತೇನೆಂದು ಹೇಳಿ ಅಧಿಕಾರಕ್ಕೆ ಬಂದಿದ್ದರು. ಮಮತಾಜೀ ಯಾವ ರೀತಿಯ ಪರಿವರ್ತನೆ ತಂದಿದ್ದಾರೆ. ಭ್ರಷ್ಟಾಚಾರ ನಿಲ್ಲಿಸಿದ್ದಾರೆಯೇ.. ರಾಜಕೀಯ ದ್ವೇಷ, ಹಿಂಸೆಯನ್ನು ನಿಲ್ಲಿಸಿದ್ದಾರೆಯೇ.. ತುಷ್ಟೀಕರಣ ನೀತಿಯನ್ನು ನಿಲ್ಲಿಸಿದ್ದಾರೆಯೇ.. ಯಾವುದಾದ್ರೂ ಪರಿವರ್ತನೆ ಪಶ್ಚಿಮ ಬಂಗಾಳದಲ್ಲಿ ಆಗಿದೆಯೇ ಎಂದು ಪ್ರಶ್ನಿಸಿದ ಅಮಿತ್ ಷಾ, ಭ್ರಷ್ಟ ಟಿಎಂಸಿಯನ್ನು ತಳಮಟ್ಟದಿಂದಲೇ ಕಿತ್ತೊಗೆಯಬೇಕು ಎಂದಿದ್ದರೆ, ನೀವು 2024ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಕೈಯನ್ನು ಬಲಪಡಿಸಿ, ಅತಿ ಹೆಚ್ಚು ಸಂಸದರನ್ನು ಗೆಲ್ಲಿಸಿ ಎಂದು ಕರೆ ನೀಡಿದರು.
ನಾನು ಗುಜರಾತಿನಿಂದ ಇಲ್ಲಿಗೆ ಆಗಮಿಸಿದ್ದೇನೆ. ನನ್ನ ರಾಜಕೀಯ ಜೀವನದಲ್ಲಿ ಒಬ್ಬ ರಾಜಕಾರಣಿಯ ಮನೆಯಲ್ಲಿ ಇಷ್ಟೊಂದು ಬಂಡಲ್ ಹಣದ ಕಂತೆಯನ್ನು ನೋಡಿದ್ದಿಲ್ಲ. ಭ್ರಷ್ಟಾಚಾರದಿಂದಾಗಿ ಟಿಎಂಸಿ ಪಶ್ಚಿಮ ಬಂಗಾಳದ ಜನರ ಗೌರವವನ್ನು ಮಣ್ಣು ಪಾಲು ಮಾಡುತ್ತಿದೆ. ಜ್ಯೋತಿಪ್ರಿಯ ಮಲಿಕ್, ಅನುಬ್ರತಾ ಮೊಂಡಲ್, ಪಾರ್ಥ ಚಟರ್ಜಿ ಹೀಗೆ.. ದನದ ಕಳ್ಳ ಸಾಗಣೆಯಿಂದ ತೊಡಗಿ ಕಲ್ಲಿದ್ದಲು ಕಳವು ಹೀಗೆ ನಾನಾ ರೀತಿಯ ಹಗರಣಗಳನ್ನು ಮಾಡಿದ್ದಾರೆ. ಬಂಗಾಳದ ಜನರ ಕೋಟಿ ಕೋಟಿ ದುಡ್ಡನ್ನು ಇವರು ಲೂಟಿ ಮಾಡಿದ್ದಾರೆ. ನಾನಿವತ್ತು ಮಮತಾಜೀಗೆ ಸವಾಲು ಹಾಕುತ್ತೇನೆ, ಧೈರ್ಯ ಇದ್ದರೆ ಇವರನ್ನು ತಮ್ಮ ಪಾರ್ಟಿಯಿಂದ ಸಸ್ಪೆಂಡ್ ಮಾಡಲಿ. ಆದರೆ ಆಕೆ ಇದನ್ನು ಮಾಡಿಲ್ಲ. ದಿನವೂ ದುರ್ಗಾ ದೇವಿಯ ಹೆಸರೇಳುತ್ತಾ ತನ್ನ ಅಳಿಯ ಅಭಿಷೇಕ್ ಬ್ಯಾನರ್ಜಿ ಹೆಸರು ಮುನ್ನೆಲೆಗೆ ಬರದಂತೆ ನೋಡುತ್ತಿದ್ದಾರೆ ಎಂದು ಹೇಳಿದರು.
ಇತ್ತೀಚೆಗೆ ಅಕ್ಟೋಬರ್ ತಿಂಗಳಲ್ಲಿ ಇಡಿ ಅಧಿಕಾರಿಗಳು ರೇಶನ್ ವಿತರಣೆಯಲ್ಲಿ ಆಗಿರುವ ಅವ್ಯವಹಾರದ ಪ್ರಕರಣದಲ್ಲಿ ಸಚಿವ ಜ್ಯೋತಿಪ್ರಿಯ ಮಲಿಕ್ ಅವರನ್ನು ಬಂಧಿಸಿದ್ದರು. ಕಳೆದ ವರ್ಷ ಸಚಿವರಾದ ಪಾರ್ಥ ಚಟರ್ಜಿ ಮತ್ತು ಟಿಎಂಸಿ ಶಾಸಕರಾದ ಮಾಣಿಕ್ ಭಟ್ಟಾಚಾರ್ಯ, ಜಿಬನ್ ಕೃಷ್ಣ ಸಹಾ ಅವರನ್ನು ಶಿಕ್ಷಕರ ನೇಮಕಾತಿ ಹಗರಣದಲ್ಲಿ ಬಂಧಿಸಲಾಗಿತ್ತು. ಟಿಎಂಸಿ ಪ್ರಭಾವಿ ನಾಯಕರಾಗಿದ್ದ ಅನುಬ್ರತಾ ಮೊಂಡಲ್ ಈಗಾಗಲೇ ದನ ಕಳ್ಳಸಾಗಣೆ ಪ್ರಕರಣದಲ್ಲಿ ಸಿಕ್ಕಿಬಿದ್ದು ತಿಹಾರ್ ಜೈಲಿನಲ್ಲಿದ್ದಾರೆ.
West Bengal should ensure the Bharatiya Janata Party’s victory in so many Lok Sabha seats in 2024 so that Narendra Modi can say he became Prime Minister again because of the state, Union home minister Amit Shah said at a rally in Kolkata on Wednesday.
27-07-25 01:09 pm
HK News Desk
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
26-07-25 10:41 pm
Mangalore Correspondent
Mangalore, Dharmasthala Case, SIT, whistle bl...
26-07-25 10:05 pm
ಧರ್ಮಸ್ಥಳ ಎಸ್ಐಟಿ ತಂಡದಿಂದ ಮತ್ತೊಬ್ಬರು ಹೊರಕ್ಕೆ ;...
26-07-25 08:20 pm
Mangalore Rajashree Jayaraj Poojary Death: ಬಹ...
26-07-25 04:38 pm
India’s Largest Job Fair ‘Alva’s Pragati 2025...
26-07-25 11:37 am
26-07-25 09:35 pm
HK News Desk
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm
Hyderabad, Udupi, Crime: ಹೈದರಾಬಾದಿನಲ್ಲಿ ರಿಯಲ್...
23-07-25 04:49 pm
ಟೆಲಿಗ್ರಾಮ್ ಆ್ಯಪ್ನಲ್ಲಿ ಹೂಡಿಕೆ ಮೇಲೆ ಕಮಿಷನ್ ; ಆ...
23-07-25 03:25 pm