ಬ್ರೇಕಿಂಗ್ ನ್ಯೂಸ್
05-12-23 03:12 pm HK News Desk ದೇಶ - ವಿದೇಶ
ನವದೆಹಲಿ, ಡಿ.5: 2008ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ರೂವಾರಿ, ಲಷ್ಕರ್ ಉಗ್ರವಾದಿ ಸಂಘಟನೆಯ ಕಮಾಂಡರ್, ಪಾಕಿಸ್ತಾನದ ಜೈಲಿನಲ್ಲಿದ್ದ ಸಾಜಿದ್ ಮಿರ್ ವಿಷ ಪ್ರಾಶನಕ್ಕೆ ಒಳಗಾಗಿದ್ದಾನೆ.
ಪಾಕಿಸ್ತಾನದ ದೇರಾ ಖಾಝಿ ಖಾನ್ ಸೆಂಟ್ರಲ್ ಜೈಲಿನಲ್ಲಿದ್ದ ಆತನಿಗೆ ವಿಷಾಹಾರ ನೀಡಲಾಗಿದ್ದು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಜೈಲಿನಲ್ಲಿ ಖಾಸಗಿಯಾಗಿ ನೇಮಕಗೊಂಡಿದ್ದ ಅಡುಗೆ ಕುಕ್ ವಿಷಾಹಾರ ನೀಡಿದ್ದಾನೆ ಎನ್ನಲಾಗುತ್ತಿದ್ದು ಘಟನೆ ಬಳಿಕ ಆ ವ್ಯಕ್ತಿ ನಾಪತ್ತೆಯಾಗಿದ್ದಾನೆ.
ಭಾರತದ ವಿರುದ್ಧ ಹಲವಾರು ಆತ್ಮಹತ್ಯಾ ದಾಳಿ, ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ಛೂಬಿಡುತ್ತಿದ್ದ , ಭಯೋತ್ಪಾದಕ ಕೃತ್ಯಗಳಿಗೆ ಕೆಲಸವನ್ನು ಸಾಜಿದ್ ಮಿರ್ ಮಾಡುತ್ತಿದ್ದ. ಮುಂಬೈ ಸರಣಿ ಬಾಂಬ್ ಸ್ಫೋಟದ ಆರೋಪದಲ್ಲಿ ಭಾರತದ ಮೋಸ್ಟ್ ವಾಂಟೆಡ್ ಉಗ್ರನೆಂದು ಹೆಸರಿಸಲಾಗಿತ್ತು. ಅಮೆರಿಕ ಈತನ ತಲೆಗೆ 5 ಲಕ್ಷ ಮಿಲಿಯನ್ ಡಾಲರ್ ಬಹುಮಾನ ಘೋಷಣೆ ಮಾಡಿತ್ತು. 2022ರ ಜೂನ್ ನಲ್ಲಿ ಪಾಕಿಸ್ತಾನದ ನ್ಯಾಯಾಲಯ, ಭಯೋತ್ಪಾದಕ ಕೃತ್ಯಗಳಿಗೆ ಫೈನಾನ್ಸ್ ಮಾಡುತ್ತಿದ್ದ ಪ್ರಕರಣದಲ್ಲಿ ಆರೋಪ ಸಾಬೀತಾಗಿ 15 ವರ್ಷ ಜೈಲು ಶಿಕ್ಷೆ ವಿಧಿಸಿತ್ತು.
ಯಾರೀತ ಸಾಜಿದ್ ಮಿರ್ ?
ಭಾರತದ ವಿರುದ್ಧ ಗೆರಿಲ್ಲಾ ಯುದ್ಧ ಸಾರುವಲ್ಲಿ ಪ್ರಮುಖ ಹೊಣೆಗಾರಿಕೆ ಹೊಂದಿದ್ದ ಸಾಜಿದ್ ಮಿರ್, 2008ರ ನವೆಂಬರ್ 26 ರಂದು ಭಾರತದ ವಾಣಿಜ್ಯ ರಾಜಧಾನಿ ಮುಂಬೈ ದಾಳಿಗೆ ಸಂಚು ನಡೆಸಿದ್ದ. ಇದಕ್ಕಾಗಿ ಹತ್ತು ಮಂದಿ ಶಸ್ತ್ರ ಸಜ್ಜಿತ ಭಯೋತ್ಪಾದಕರನ್ನು ತಯಾರು ಮಾಡಿದ್ದ. ಅಮೆರಿಕ ಮೂಲದ ಪಾಕಿಸ್ತಾನಿ ಆಗಿದ್ದ ದಾವೂದ್ ಗಿಲಾನಿ ಅಲಿಯಾಸ್ ಡೇವಿದ್ ಕೋಲ್ಮನ್ ಹೇಡ್ಲಿ ಸಂಚಿನಲ್ಲಿ ಪ್ರಮುಖ ಗೂಢಚರನಾಗಿ ಕೆಲಸ ಮಾಡಿದ್ದು ಪಾಕಿಸ್ತಾನದ ಸೇನಾಧಿಕಾರಿಗಳ ಜೊತೆಗೂಡಿ ಪ್ಲಾನ್ ಜಾರಿಗೊಳಿಸಿದ್ದರು. ಲಷ್ಕರ್ ತೈಬಾ ಸಂಘಟಿಸಿದ್ದ ಅತಿ ದೊಡ್ಡ ಭಯೋತ್ಪಾದಕ ದಾಳಿಯಾಗಿದ್ದು ಭಾರತ ಸೇರಿದಂತೆ ಹಲವು ರಾಷ್ಟ್ರಗಳ 175ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದರು. 26 ವಿದೇಶಿ ಪ್ರಜೆಗಳು, 18 ಪೊಲೀಸ್ ಅಧಿಕಾರಿಗಳು ಸಾವು ಕಂಡಿದ್ದರು. ಮುಂಬೈ ದಾಳಿಯ ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದ ಸಾಜಿದ್ ಮಿರ್, ದಾಳಿಗೆ ಬಂದಿದ್ದ ಉಗ್ರರೊಂದಿಗೆ ಸ್ಯಾಟಲೈಟ್ ಫೋನ್ ಮೂಲಕ ನಿರಂತರ ಸಂಪರ್ಕದಲ್ಲಿದ್ದ.
ಒಂದು ವರ್ಷದ ಹಿಂದೆ ಅಂತಾರಾಷ್ಟ್ರೀಯ ಒತ್ತಡದ ಮೇರೆಗೆ ಬಂಧನಕ್ಕೊಳಗಾಗಿದ್ದ ಸಾಜಿದ್ ಮಿರ್ 15 ವರ್ಷಗಳ ಶಿಕ್ಷೆಗೀಡಾಗಿದ್ದ. ಆದರೆ ಜೈಲಿನಲ್ಲಿರುವಾಗಲೇ ಒಂದೇ ವರ್ಷದಲ್ಲಿ ಸಾಜಿದನಿಗೆ ವಿಷಾಹಾರ ನೀಡಲಾಗಿದ್ದು ಕೊಲೆ ಸಂಚಿನ ಭಾಗ ಎನ್ನಲಾಗುತ್ತಿದೆ.
One of the main conspirators of the dastardly 26/11 Mumbai terror attacks, Sajid Mir, who was lodged in the Central Jail of Dera Ghazi Khan in Pakistan has been poisoned, according to unconfirmed reports. A few months back Mir was shifted from Lahore Central Jail.
27-07-25 01:09 pm
HK News Desk
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
26-07-25 10:41 pm
Mangalore Correspondent
Mangalore, Dharmasthala Case, SIT, whistle bl...
26-07-25 10:05 pm
ಧರ್ಮಸ್ಥಳ ಎಸ್ಐಟಿ ತಂಡದಿಂದ ಮತ್ತೊಬ್ಬರು ಹೊರಕ್ಕೆ ;...
26-07-25 08:20 pm
Mangalore Rajashree Jayaraj Poojary Death: ಬಹ...
26-07-25 04:38 pm
India’s Largest Job Fair ‘Alva’s Pragati 2025...
26-07-25 11:37 am
26-07-25 09:35 pm
HK News Desk
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm
Hyderabad, Udupi, Crime: ಹೈದರಾಬಾದಿನಲ್ಲಿ ರಿಯಲ್...
23-07-25 04:49 pm
ಟೆಲಿಗ್ರಾಮ್ ಆ್ಯಪ್ನಲ್ಲಿ ಹೂಡಿಕೆ ಮೇಲೆ ಕಮಿಷನ್ ; ಆ...
23-07-25 03:25 pm