ಬ್ರೇಕಿಂಗ್ ನ್ಯೂಸ್
21-12-23 10:41 pm HK News Desk ದೇಶ - ವಿದೇಶ
ಲಕ್ನೋ, ಡಿ.21: ಸಹೋದರನಿಗೆ ಕಿಡ್ನಿ ದಾನ ಮಾಡಿದ್ದಕ್ಕೆ ಪ್ರತಿಯಾಗಿ ಹಣಕ್ಕಾಗಿ ಪೀಡಿಸಿದ್ದಲ್ಲದೆ, ಒಪ್ಪದ ಪತ್ನಿಗೆ ವಾಟ್ಸಪ್ ಮೂಲಕ ಪತಿ ತ್ರಿವಳಿ ತಲಾಖ್ ಹೇಳಿ ವಿಚ್ಚೇದನ ನೀಡಿರುವ ಘಟನೆ ಉತ್ತರಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ನಡೆದಿದೆ. ಸಂತ್ರಸ್ತ ಮಹಿಳೆ ಈ ಬಗ್ಗೆ ಧನೇಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಜೈತಾಪುರ ನಿವಾಸಿ ತರುನ್ನುಮ್ ಎಂಬಾಕೆ ರಶೀದ್ ಎಂಬಾತನನ್ನು 20 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಮಕ್ಕಳಾಗಿರಲಿಲ್ಲ. ಹೀಗಾಗಿ ರಶೀದ್ ಮತ್ತೊಂದು ಮದುವೆಯಾಗಿದ್ದ. ರಶೀದ್ ಸೌದಿಯಲ್ಲಿ ಉದ್ಯೋಗದಲ್ಲಿದ್ದು ಈ ನಡುವೆ ತರುನ್ನುಮ್ ಸಹೋದರ ಶಾಕೀರ್ ಕಿಡ್ನಿ ವೈಫಲ್ಯಕ್ಕೀಡಾಗಿದ್ದ. ಕಿಡ್ನಿ ಸಿಗದೇ ಇದ್ದರೆ ಪ್ರಾಣಕ್ಕೆ ಅಪಾಯ ಇದೆಯೆಂದು ವೈದ್ಯರ ಹೇಳಿಕೆಯಂತೆ ಸೋದರನ ಪ್ರಾಣ ಉಳಿಸಲು ತರುನ್ನುಮ್ ಮುಂದಾಗಿದ್ದಳು. ಬಳಿಕ ಶಾಕೀರ್ಗೆ ಮುಂಬೈನ ಆಸ್ಪತ್ರೆಯಲ್ಲಿ ಕಿಡ್ನಿ ಜೋಡಣೆ ಮಾಡಲಾಗಿತ್ತು.
ಕಿಡ್ನಿ ಜೋಡಣೆ ಯಶಸ್ವಿಯಾದ ಬಳಿಕ ಪತಿಯ ಮನೆಗೆ ತೆರಳಿದಾಗ, ಪತಿ ಉಲ್ಟಾ ಹೊಡೆದಿದ್ದ. ಕಿಡ್ನಿ ಕೊಟ್ಟಿದ್ದಕ್ಕೆ ಪ್ರತಿಯಾಗಿ 40 ಲಕ್ಷ ರೂ. ಕೇಳಿ ಪಡೆಯುವಂತೆ ಬೇಡಿಕೆ ಇಟ್ಟಿದ್ದ. ಇದಕ್ಕೊಪ್ಪದ ಪತ್ನಿ ತರುನ್ನುಮ್ಗೆ ರಶೀದ್, ವಾಟ್ಸ್‌ಆ್ಯಪ್ ನಲ್ಲಿಯೇ ತ್ರಿವಳಿ ತಲಾಖ್ ನೀಡಿದ್ದಾನೆ. ವಿಚ್ಚೇದನ ಬಳಿಕವೂ ಪತಿಯ ಮನೆಯಲ್ಲೇ ತರುನ್ನುಮ್ ವಾಸವಿದ್ದಳು. ಆದರೆ ಈಗ ಕಿರುಕುಳ ಆರಂಭಿಸಿದ್ದರಿಂದ ಪತಿಯ ಮನೆ ಬಿಟ್ಟು ತಾಯಿ ಮನೆಗೆ ಬಂದು ಪೊಲೀಸ್ ದೂರು ನೀಡಿದ್ದಾಳೆ.
A man gave triple talaq to his wife over WhatsApp after she donated a kidney to her ailing brother. The man works in Saudi Arabia, while the wife stays in Bairiyahi village in Uttar Pradesh’s Gonda district. The incident unfolded after the wife took a decision to save her brother by donating one of her kidneys. Little did she anticipate that the noble act would become the catalyst for the dissolution of her marriage.
09-11-25 06:53 pm
Bangalore Correspondent
ಇಪಿಎಫ್ ಸೊಸೈಟಿಯಲ್ಲಿ 70 ಕೋಟಿ ದುರ್ಬಳಕೆ ; ಅಕೌಂಟೆಂ...
09-11-25 03:47 pm
ISIS Terrorists, Umesh Reddy, Parappana Agrah...
08-11-25 10:29 pm
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
09-11-25 07:49 pm
HK News Desk
ಮುಸ್ಲಿಂ ವ್ಯಕ್ತಿಯ ಎರಡನೇ ಮದುವೆ ನೋಂದಣಿಗೆ ನಿರಾಕರಣ...
07-11-25 05:21 pm
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm