ಬ್ರೇಕಿಂಗ್ ನ್ಯೂಸ್
29-12-23 01:02 pm HK News Desk ದೇಶ - ವಿದೇಶ
ಮುಂಬೈ, ಡಿ.29: ಮುಂಬೈ ಮೂಲದ ಮುಸ್ಲಿಂ ಯುವತಿಯೊಬ್ಬರು ಕಾಲ್ನಡಿಗೆಯಲ್ಲೇ ರಾಮನ ಜನ್ಮಭೂಮಿ ಅಯೋಧ್ಯೆಗೆ ಪ್ರಯಾಣ ಬೆಳೆಸಿದ್ದಾರೆ. ರಾಮನ ಮೇಲಿನ ಭಕ್ತಿ ಮತ್ತು ಮತ ಸೌಹಾರ್ದಕ್ಕಾಗಿ ಪಾದಯಾತ್ರೆ ಕೈಗೊಂಡಿರುವ ಶಬನಮ್ ಈಗ ಸೋಶಿಯಲ್ ಮೀಡಿಯಾದಲ್ಲಿ ಐಕಾನ್ ಆಗಿದ್ದಾರೆ.
ಶಬನಮ್ ತನ್ನ ಗೆಳೆಯರಾದ ರಮಣ್ ರಾಜ್ ಶರ್ಮಾ ಮತ್ತು ವಿನೀತ್ ಪಾಂಡೆ ಜೊತೆಯಲ್ಲಿ ಮುಂಬೈನಿಂದ 1,425 ಕಿಲೋಮೀಟರ್ ದೂರದ ಅಯೋಧ್ಯೆಗೆ ಕಾಲ್ನಡಿಗೆ ಮೂಲಕವೇ ತಲುಪಲು ಹೊರಟಿದ್ದಾರೆ. ಶಬನಮ್ ಮುಸ್ಲಿಂ ಧರ್ಮೀಯರಾಗಿದ್ದರೂ, ಭಗವಾನ್ ರಾಮನ ಮೇಲೆ ಭಕ್ತಿ ಹೊಂದಿದ್ದಾರೆ. ಶಬನಮ್ ಈಗ ಮಧ್ಯಪ್ರದೇಶದ ಸಿಂಧವಾ ಜಿಲ್ಲೆ ತಲುಪಿದ್ದು ಪ್ರತಿದಿನ 25-30 ಕಿಲೋಮೀಟರ್ ಪಾದಯಾತ್ರೆ ಮಾಡುತ್ತಿದ್ದಾರೆ.
ಸುದೀರ್ಘ ಕಾಲ್ನಡಿಗೆ ಯಾತ್ರೆಯ ದಣಿವಿನ ಹೊರತಾಗಿಯೂ, ಮೂವರು ಕೂಡ ತಮ್ಮನ್ನು ರಾಮನ ಮೇಲಿನ ಭಕ್ತಿಯೇ ಮುಂದುವರಿಸಿಕೊಂಡು ಹೋಗುತ್ತಿದೆ ಎಂದು ಹೇಳಿದ್ದಾರೆ. ಈ ಮೂವರು ಈಗಾಗಲೇ ಮಧ್ಯಪ್ರದೇಶದ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿದ್ದಾರೆ.
ರಾಮನ ಆರಾಧನೆಯು ಯಾವುದೇ ನಿರ್ದಿಷ್ಟ ಧರ್ಮ ಅಥವಾ ಪ್ರದೇಶಕ್ಕೆ ಸೀಮಿತವಾಗಿಲ್ಲ. ಇದು ಗಡಿ, ಭಾಷೆ, ಧರ್ಮಗಳನ್ನು ಮೀರಿದೆ. ಇಡೀ ಜಗತ್ತನ್ನು ಒಳಗೊಳ್ಳುತ್ತಿದೆ. ಭಗವಾನ್ ರಾಮನು ಜಾತಿ ಅಥವಾ ಧರ್ಮವನ್ನು ಮೀರಿ ಎಲ್ಲರಿಗೂ ಸೇರಿದವನು ಎಂದು ಶಬನಮ್ ದೃಢವಾಗಿ ಹೇಳುತ್ತಾರೆ. ಶಬನಮ್ ಯಾತ್ರೆಗೆ ಯಾವುದೇ ಸಮಸ್ಯೆಯಿಲ್ಲ. ಆಕೆಗೆ ಸೂಕ್ತ ಭದ್ರತೆ ಒದಗಿಸುವುದರ ಜೊತೆಗೆ, ಊಟ ಮತ್ತು ವಸತಿ ವ್ಯವಸ್ಥೆಯಲ್ಲಿ ಪೊಲೀಸರು ಸಾಥ್ ನೀಡಿದ್ದಾರೆ. ಮಹಾರಾಷ್ಟ್ರದ ಸೂಕ್ಷ್ಮ ಪ್ರದೇಶಗಳ ಮೂಲಕ ಹಾದುಹೋಗುವಾಗ ಪೊಲೀಸರು ರಕ್ಷಣೆಯನ್ನೂ ನೀಡಿದ್ದಾರೆ.
ಮುಸ್ಲಿಂ ಮಹಿಳೆ ಶಬನಮ್ ನಡೆಗೆ ಸಾಮಾಜಿಕ ಮಾಧ್ಯಮದಲ್ಲಿ ಕೆಲವರು ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಅನೇಕ ಮುಸ್ಲಿಮರು ಶಬನಮ್ ಅವರಿಗೆ ಬೆಂಬಲವನ್ನೂ ವ್ಯಕ್ತಪಡಿಸಿದ್ದಾರೆ. ಮತ ಸೌಹಾರ್ದ ಸಾರುವುದಕ್ಕಾಗಿ ಮಹಿಳೆಯ ದಿಟ್ಟ ನಡಿಗೆ ಎಂದು ಹೇಳಿದ್ದಾರೆ.
In a tale that challenges stereotypes and exemplifies the universal nature of faith, Shabnam, a young Muslim woman from Mumbai, has embarked on a journey from Mumbai to Ayodhya. Accompanied by her companions, Raman Raj Sharma and Vineet Pandey, Shabnam set out to cover a distance of 1,425 kilometres on foot.
27-07-25 01:09 pm
HK News Desk
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
27-07-25 09:58 pm
Mangalore Correspondent
Mangalore Police, Ravi Pujari: ಮಂಗಳೂರಿನ ಬಿಲ್ಡ...
27-07-25 08:56 pm
Dharmasthala Case, SIT, ADGP Pranav Mohanty:...
27-07-25 08:14 pm
Dharmasthala Case, Sowjanya case, Mangalore:...
27-07-25 07:49 pm
Mangalore Congress: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್...
26-07-25 10:41 pm
27-07-25 08:39 pm
Mangalore Correspondent
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm