ಬ್ರೇಕಿಂಗ್ ನ್ಯೂಸ್
29-12-23 07:44 pm HK News Desk ದೇಶ - ವಿದೇಶ
ಲಕ್ನೋ, ಡಿ.29: ಮುಸ್ಲಿಂ ಮಹಿಳೆಯನ್ನು ಮದುವೆಯಾಗುವುದಕ್ಕಾಗಿ ಮತಾಂತರಗೊಂಡ ಆರೋಪ ಎದುರಿಸುತ್ತಿರುವ ತಹಸೀಲ್ದಾರ್ ಹುದ್ದೆಯಲ್ಲಿದ್ದ ಆಶಿಷ್ ಗುಪ್ತಾ ಎಂಬಾತನನ್ನು ಉತ್ತರ ಪ್ರದೇಶ ಸರಕಾರ ಸರ್ಕಾರಿ ಹುದ್ದೆಯಿಂದ ವಜಾ ಮಾಡಿದೆ.
ಉತ್ತರ ಪ್ರದೇಶದ ಮೌಧಾ ಜಿಲ್ಲೆಯಲ್ಲಿ ತಹಸೀಲ್ದಾರ್ ಆಗಿದ್ದ ಆಶಿಷ್ ಗುಪ್ತಾ ಎಂಬಾತ ಮುಸ್ಲಿಂ ಮಹಿಳೆಯನ್ನು ಮದುವೆಯಾಗಲು ತನ್ನ ಧರ್ಮವನ್ನೇ ಬದಲಿಸಿದ್ದು, ಮುಸ್ಲಿಂ ಆಗಿ ಮತಾಂತರಗೊಂಡಿದ್ದ. ಅಲ್ಲದೆ, ತನ್ನ ಹೆಸರನ್ನು ಮೊಹಮ್ಮದ್ ಯೂಸುಫ್ ಎಂದು ಬದಲಿಸಿಕೊಂಡಿದ್ದ. ಆಮೂಲಕ ಸರ್ಕಾರಿ ಸೇವೆಯಲ್ಲಿದ್ದು ಸೇವಾ ನಿಮಯಗಳನ್ನು ಉಲ್ಲಂಘಿಸಿದ್ದಾಗಿ ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿತ್ತು. ಹೀಗಾಗಿ ಜಿಲ್ಲಾಧಿಕಾರಿ ಅರುಣ್ ಮಿಶ್ರಾ ಅವರು ಆಶಿಷ್ ಗುಪ್ತಾನನ್ನು ತಹಸೀಲ್ದಾರ್ ಹುದ್ದೆಯಿಂದ ತೆರವುಗೊಳಿಸಿದ್ದಾರೆ.
ಕಳೆದ ಸೆಪ್ಟಂಬರ್ ತಿಂಗಳಲ್ಲಿ ತಹಸೀಲ್ದಾರ್ ಆಶಿಷ್ ಗುಪ್ತಾ ಬಗ್ಗೆ ಆರೋಪ ಕೇಳಿಬಂದಿತ್ತು. ಮೊಹಮ್ಮದ್ ಯೂಸುಫ್ ಹೆಸರಲ್ಲಿ ಈ ವ್ಯಕ್ತಿ ಅಲ್ಲಿನ ಮಸೀದಿಗೆ ತೆರಳುತ್ತಿದ್ದುದನ್ನು ಅಲ್ಲಿನವರು ವಿರೋಧಿಸಿದ್ದರು. ಮುಸ್ಲಿಂ ಅಲ್ಲದ ವ್ಯಕ್ತಿ ಮಸೀದಿಗೆ ಬಂದು ಪ್ರಾರ್ಥನೆ ಮಾಡುತ್ತಿದ್ದಾನೆಂದು ಮಸೀದಿ ಸದಸ್ಯ ಮೊಹಮ್ಮದ್ ಆಶಿಕ್, ಪೊಲೀಸ್ ದೂರು ನೀಡಿದ್ದರು. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದ ವೇಳೆಯೇ ಆಶಿಷ್ ಗುಪ್ತಾನ ಅಸಲಿ ಪತ್ನಿ ಆರತಿ ಪೊಲೀಸ್ ದೂರು ನೀಡಿದ್ದು ತನ್ನ ಪತಿ ಮತಾಂತರಗೊಂಡ ಬಗ್ಗೆ ಆರೋಪಿಸಿದ್ದಾಳೆ. ಅಲ್ಲದೆ, ತನ್ನ ಪತಿಗೆ ಮುಸ್ಲಿಂ ಮಹಿಳೆಯರೊಂದಿಗೆ ಸಂಬಂಧ ಇದೆ. ತನ್ನ ಪತಿಯನ್ನು ಬಲವಂತದಿಂದ ಮತಾಂತರ ಮಾಡಿದ್ದಾರೆಂದು ದೂರು ನೀಡಿದ್ದಳು.
ಅಲ್ಲದೆ, ಇತರ ಮೂವರು ಆರೋಪಿಗಳ ಬಗ್ಗೆಯೂ ಆರತಿ ದೂರಿನಲ್ಲಿ ಹೇಳಿದ್ದು ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆಶಿಷ್ ಗುಪ್ತಾನ ಜೊತೆಗೆ ಸಂಪರ್ಕ ಹೊಂದಿದ್ದ ಮುಸ್ಲಿಂ ಮಹಿಳೆಯರನ್ನು ವಶಕ್ಕೆ ಪಡೆಯುವುದಕ್ಕಾಗಿ ಪೊಲೀಸರು ಹಲವು ಕಡೆ ದಾಳಿ ನಡೆಸಿದ್ದಾರೆ.
The wife of a revenue official has filed a police complaint alleging that her husband, Ashish Gupta, converted to Islam, changed his name to Mohammad Yusuf, and married a Muslim woman in the southern Uttar Pradesh town of Maudaha.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 10:01 pm
HK News Staffer
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm