ಬ್ರೇಕಿಂಗ್ ನ್ಯೂಸ್
01-01-24 02:19 pm HK News Desk ದೇಶ - ವಿದೇಶ
ನವದೆಹಲಿ, ಜ.1: 2024ರ ಕ್ಯಾಲೆಂಡರ್ ವರ್ಷದ ಮೊದಲ ದಿನವೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಹೊಸತಾಗಿ ಸ್ಯಾಟಲೈಟ್ ಉಡಾವಣೆ ಮಾಡಿದೆ. ಬ್ರಹ್ಮಾಂಡದ ಕಪ್ಪು ಕುಳಿಗಳು ಹಾಗೂ ನ್ಯೂಟ್ರಾನ್ ಸ್ಟಾರ್‌ಗಳ ಬಗ್ಗೆ ಅಧ್ಯಯನ ನಡೆಸಲು ಎಕ್ಸ್ ರೇ ಪೋಲಾರ್‌ಮೀಟರ್ ಉಪಗ್ರಹವನ್ನು (ಎಕ್ಸ್‌ಪೋಸ್ಯಾಟ್) ಸೋಮವಾರ ಉಡಾವಣೆ ಮಾಡಿದೆ.
ಇದರೊಂದಿಗೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ 'ನಾಸಾ'ದ ಬಳಿಕ ಬಾಹ್ಯಾಕಾಶದ ಕಪ್ಪು ಕುಳಿಗಳ ಅಧ್ಯಯನಕ್ಕೆ ಮುಂದಾದ ಎರಡನೇ ದೇಶ ಎಂಬ ಹೆಗ್ಗಳಿಕೆ ಭಾರತಕ್ಕೆ ಸೇರಿದೆ. ಈ ಸ್ಯಾಟಲೈಟ್ ಅತ್ಯಾಧುನಿಕ ಖಗೋಳ ವೀಕ್ಷಣಾ ತಂತ್ರಜ್ಞಾನವನ್ನು ಒಳಗೊಂಡಿದ್ದು, ಕಪ್ಪು ಕುಳಿಗಳು ಮತ್ತು ನ್ಯೂಟ್ರಾನ್ ನಕ್ಷತ್ರಗಳ ಅಧ್ಯಯನಕ್ಕೆ ಮೀಸಲಾಗಿದೆ.
ಎಕ್ಸ್ ರೇ ಪೋಟಾನ್‌ಗಳು ಮತ್ತು ಅವುಗಳ ಧ್ರುವೀಕರಣವನ್ನು ಬಳಸಿಕೊಂಡು, ಕಪ್ಪು ಕುಳಿಗಳು ಹಾಗೂ ನ್ಯೂಟ್ರಾನ್ ಸ್ಟಾರ್‌ಗಳಿಂದ ಹೊರಸೂಸುವ ವಿಕಿರಣಗಳ ಅಧ್ಯಯನಕ್ಕೆ ಎಕ್ಸ್‌ಪೋ ಸ್ಯಾಟ್ ಸಹಾಯ ಮಾಡಲಿದೆ. ನಕ್ಷತ್ರಗಳು ಸಾಮಾನ್ಯವಾಗಿ ತಮ್ಮಲ್ಲಿನ ಉರಿಯುವ ಶಕ್ತಿಯನ್ನು ಕಳಕೊಂಡು 'ಮೃತ'ಪಟ್ಟಾಗ ಅವು ತಮ್ಮದೇ ಗುರುತ್ವದ ಅಡಿಯಲ್ಲಿ ಕಪ್ಪು ಕುಳಿಗಳಾಗಿ ಅಥವಾ ನ್ಯೂಟ್ರಾನ್ ನಕ್ಷತ್ರಗಳಾಗಿ ಮಾರ್ಪಡುತ್ತವೆ. ಕಪ್ಪು ಕುಳಿಗಳು ಬ್ರಹ್ಮಾಂಡದಲ್ಲಿಯೇ ಅತ್ಯಧಿಕ ಗುರುತ್ವಾಕರ್ಷಣ ಶಕ್ತಿ ಹೊಂದಿರುತ್ತವೆ. ಈ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸುವುದರಿಂದ ಬಾಹ್ಯಾಕಾಶ ಮತ್ತು ಬ್ರಹ್ಮಾಂಡದ ಬಗೆಗೆನ ನಿಗೂಢತೆಗಳನ್ನು ಭೇದಿಸಲು ಸಹಾಯವಾಗಲಿದೆ.
ಎಕ್ಸ್‌ಪೋ ಸ್ಯಾಟ್ ಉಪಗ್ರಹವು ಸುಮಾರು 250 ಕೋಟಿ ರೂ. ವೆಚ್ಚದ್ದಾಗಿದ್ದು ಐದು ವರ್ಷಗಳ ಕಾಲ ಕಾರ್ಯಾಚರಣೆಯಲ್ಲಿ ಇರುತ್ತದೆ.
Having conquered the Moon in 2023, the Indian Space Research Organisation (Isro) ushered in 2024 with a thunderous launch of the Polar Satellite Launch Vehicle (PSLV) on its 60th flight carrying the XPoSat mission to space.
27-07-25 01:09 pm
HK News Desk
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
27-07-25 09:58 pm
Mangalore Correspondent
Mangalore Police, Ravi Pujari: ಮಂಗಳೂರಿನ ಬಿಲ್ಡ...
27-07-25 08:56 pm
Dharmasthala Case, SIT, ADGP Pranav Mohanty:...
27-07-25 08:14 pm
Dharmasthala Case, Sowjanya case, Mangalore:...
27-07-25 07:49 pm
Mangalore Congress: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್...
26-07-25 10:41 pm
27-07-25 08:39 pm
Mangalore Correspondent
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm