ಬ್ರೇಕಿಂಗ್ ನ್ಯೂಸ್
03-01-24 11:07 pm HK News Desk ದೇಶ - ವಿದೇಶ
ನವದೆಹಲಿ, ಜ.4: ಇರಾನ್ ದೇಶದ ಕೆರ್ಮಾನ್ ನಗರದಲ್ಲಿ ಬುಧವಾರ ಮಧ್ಯಾಹ್ನ ಎರಡು ಬಾಂಬ್ ಸ್ಫೋಟ ಸಂಭವಿಸಿದ್ದು, ನೂರಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ.
ಸಾಹೇಬ್ ಅಲ್- ಝಮಾನ್ ಮಸೀದಿಯ ಆವರಣದಲ್ಲಿ ಶಿಯಾಗಳು ಮೆರವಣಿಗೆ ನಡೆಸುತ್ತಿದ್ದಾಗ ಎರಡು ಬಾಂಬ್ ಸ್ಫೋಟ ಸಂಭವಿಸಿದೆ. ಇರಾನ್ ಜನರಲ್ ಖಾಸಿಂ ಸೋಲೆಮನಿ ಅವರ ಹತ್ಯೆಯ ನಾಲ್ಕನೇ ವರ್ಷಾಚರಣೆ ದಿನವೇ ಬಾಂಬ್ ದಾಳಿ ನಡೆದಿದ್ದು, ಘಟನೆಯನ್ನು ಉಗ್ರವಾದಿ ಸಂಘಟನೆಗಳು ನಡೆಸಿರುವ ಶಂಕೆ ವ್ಯಕ್ತವಾಗಿದೆ.
ಕೆರ್ಮಾನ್ ನಗರದ ಡೆಪ್ಯುಟಿ ಗವರ್ನರ್, ಉಗ್ರರ ದಾಳಿ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಪ್ರಾಥಮಿಕ ವರದಿಯಲ್ಲಿ 103 ಮಂದಿ ಸಾವಿಗೀಡಾಗಿದ್ದು, 50ಕ್ಕೂ ಹೆಚ್ಚು ಮಂದಿ ತೀವ್ರ ಗಾಯಗೊಂಡಿದ್ದಾರೆ. ರಸ್ತೆಯಲ್ಲೆಲ್ಲ ಛಿದ್ರಗೊಂಡ ದೇಹದ ಭಾಗಗಳು ಬಿದ್ದಿರುವ ವಿಡಿಯೋ ವೈರಲ್ ಆಗಿದೆ. ಯಾರು ಈ ಕೃತ್ಯ ಎಸಗಿದ್ದಾರೆಂದು ಯಾರೂ ಅಧಿಕೃತವಾಗಿ ಹೇಳಿಕೊಂಡಿಲ್ಲ.
ಅರಬ್ ಪ್ರತ್ಯೇಕತಾವಾದಿಗಳ ಪ್ರಕಾರ, ಐಸಿಸ್ ಉಗ್ರರು ಮತ್ತು ಸುನ್ನಿ ಜಿಹಾದಿಗಳು ಮಾಡಿರುವ ಸಾಧ್ಯತೆ ಇದೆಯಂತೆ. ಇತ್ತೀಚೆಗೆ ಶಿಯಾಗಳನ್ನು ಗುರಿಯಾಗಿಸಿ ಹಲವಾರು ದಾಳಿ ನಡೆದಿದ್ದು, ಅವನ್ನು ಐಸಿಸ್ ಉಗ್ರರೇ ಮಾಡಿದ್ದಾರೆ ಎನ್ನಲಾಗುತ್ತಿದೆ. 2020ರಲ್ಲಿ ಅಮೆರಿಕದ ಡ್ರೋಣ್ ದಾಳಿಯಲ್ಲಿ ಇರಾನ್ ದೇಶದ ಪವರ್ ಫುಲ್ ವ್ಯಕ್ತಿಯಾಗಿದ್ದ ಸೋಲೆಮನಿ ಸಾವನ್ನಪ್ಪಿದ್ದ. ಆನಂತರ, ಆತನ ಸ್ಥಾನವನ್ನು ಅಯತೊಲ್ಲಾ ಆಲಿ ಖೊಮೇನಿ ಅಲಂಕರಿಸಿದ್ದ.
ಸ್ಥಳೀಯ ಮಾಧ್ಯಮಗಳ ಪ್ರಕಾರ, ಬುಧವಾರ ಮಧ್ಯಾಹ್ನ 2.30ರ ಸುಮಾರಿಗೆ ಎರಡು ಬಾಂಬ್ ಸ್ಫೋಟಗಳು ಸಂಭವಿಸಿವೆ. ಒಂದು ಕಿಮೀ ಅಂತರದಲ್ಲಿ ಬಾಂಬ್ ಬ್ಲಾಸ್ಟ್ ಆಗಿದ್ದು, ಎರಡು ಕೂಡ 15 ನಿಮಿಷಗಳ ನಡುವೆ ನಡೆದಿವೆ.
State broadcaster Irib said dozens more people were wounded when the blasts hit a procession near the Saheb al-Zaman mosque in the southern city of Kerman. It cited Kerman's deputy governor as saying it was a "terrorist attack".
03-02-25 10:38 pm
HK News Desk
BY Vijayendra: ನಾನೇ ಮತ್ತೆ ಅಧ್ಯಕ್ಷನಾಗುತ್ತೇನೆ,...
03-02-25 08:36 pm
ಸಿದ್ದರಾಮಯ್ಯ ಬೇನಾಮಿ ಹೆಸರಲ್ಲಿ ಅಕ್ರಮ ಆಸ್ತಿ ಮಾಡಿದ...
03-02-25 08:20 pm
BJP Shivaraj Tangadagi, BJP: 'ಶುಭವಾಗಲಿ' ಬರೆಯಲ...
03-02-25 03:18 pm
CM Siddaramaiah: ದಿಢೀರ್ ಮಂಡಿ ನೋವು ; ಸಿಎಂ ಸಿದ್...
02-02-25 02:31 pm
03-02-25 11:01 pm
HK News Desk
Conspiracy, Kumbh stampede: ಮಹಾ ಕುಂಭಮೇಳದಲ್ಲಿ...
03-02-25 02:57 pm
NHAI fined toll tax: ಅಂಗವಿಕಲ ಮಹಿಳೆಗೆ 40 ರೂ. ಟ...
01-02-25 09:51 pm
ಎರ್ನಾಕುಲಂ ಜಿಲ್ಲೆಯಲ್ಲಿ ಒಂದೇ ದಿನ 27 ಬಾಂಗ್ಲಾ ದೇಶ...
01-02-25 09:35 pm
2025ರ ಕೇಂದ್ರ ಬಜೆಟ್ ಗುಂಡಿನ ಗಾಯಕ್ಕೆ ಹಾಕಿದ ಬ್ಯಾಂ...
01-02-25 05:51 pm
03-02-25 07:38 pm
Mangalore Correspondent
Mangalore coast Gaurd, NMPT: ತಿಳಿನೀಲ ಸಮುದ್ರದಲ...
02-02-25 09:49 pm
Kotekar Bank Robbery, Shashi Tevar, update: ಬ...
02-02-25 05:02 pm
Air India Express, Mangalore Delhi flight: ಮಂ...
01-02-25 07:47 pm
Kotekar Bank Robbery, Murgan D Devar: ಕೋಟೆಕಾರ...
01-02-25 02:32 pm
03-02-25 05:46 pm
Mangalore Correspondent
Bangalore honeytrap case, Crime: ಮದುವೆಗೆ ವಧು...
02-02-25 09:00 pm
Mangalore Crime, Bantwal Toll, Kodikere Gang:...
01-02-25 10:11 pm
Attack on Bus, Hassan, Crime: ಬೆಂಗಳೂರಿನಿಂದ ಮಂ...
31-01-25 10:22 am
Mangalore court, Rape, Crime: 15 ವರ್ಷದ ಬಾಲಕಿ...
30-01-25 11:37 am