ಬ್ರೇಕಿಂಗ್ ನ್ಯೂಸ್
11-01-24 05:09 pm HK News Desk ದೇಶ - ವಿದೇಶ
ಅಯೋಧ್ಯೆ, ಜ.11: ರಾಮ ಮಂದಿರದಲ್ಲಿ ಜ.22ರಂದು ರಾಮಲಲ್ಲಾ ವಿರಾಜಮಾನರಾಗಲಿದ್ದಾರೆ. ಕಟ್ಟಡ ಅಪೂರ್ಣ ಆಗಿದ್ದರೂ, ರಾಮನ ವಿಗ್ರಹ ಪ್ರತಿಷ್ಠೆಗೈದು ದೇವಸ್ಥಾನ ಲೋಕಾರ್ಪಣೆ ಮಾಡಲು ಸಿದ್ಧತೆ ನಡೆದಿದೆ. ಮೊದಲ ಮಹಡಿ ಸಂಪೂರ್ಣ ಸಿದ್ಧವಾಗಿದ್ದು, ಅದರಲ್ಲಿ ರಾಮಲಲ್ಲಾ ವಿಗ್ರಹವನ್ನು ಸ್ಥಾಪಿಸಲಾಗುವುದು. ಈ ನಡುವೆ, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ರಾಮಮಂದಿರಕ್ಕಾಗಿ ದೇಶ- ವಿದೇಶದ ರಾಮನ ಭಕ್ತರಿಂದ 5,500 ಕೋಟಿ ರೂ.ಗೂ ಹೆಚ್ಚು ದೇಣಿಗೆ ಪಡೆದಿರುವ ಬಗ್ಗೆ ಮಾಹಿತಿ ನೀಡಿದೆ.
ದೇಣಿಗೆ ನೀಡಿರುವವರಲ್ಲಿ ಗುಜರಾತಿಗಳೇ ಮುಂಚೂಣಿಯಲ್ಲಿದ್ದಾರೆ. ರಾಮಮಂದಿರ ನಿರ್ಮಾಣಕ್ಕೆ ಗುಜರಾತ್ನ ಇಬ್ಬರು ಉದ್ಯಮಿಗಳು ಗರಿಷ್ಠ ದೇಣಿಗೆ ನೀಡಿದ್ದಾರೆ. ಅತಿ ಹೆಚ್ಚು ದೇಣಿಗೆ ನೀಡಿದವರ ಪಟ್ಟಿಯಲ್ಲಿ ಮೊರಾರಿ ಬಾಪು ಹೆಸರು ಅಗ್ರಸ್ಥಾನದಲ್ಲಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವೆಬ್ಸೈಟ್ ಮಾಹಿತಿ ಪ್ರಕಾರ, ಮೊರಾರಿ ಬಾಪು ಅವರು ರಾಮ ಮಂದಿರಕ್ಕಾಗಿ 11.3 ಕೋಟಿ ರೂ. ದೇಣಿಗೆ ಕೊಟ್ಟಿದ್ದಾರೆ.
ಮೊರಾರಿ ಬಾಪು ಗುಜರಾತ್ನ ಭಾವನಗರದಲ್ಲಿ ನೆಲೆಸಿದ್ದು ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. ಅವರಿಂದ ಸ್ಫೂರ್ತಿ ಪಡೆದ ಅಮೆರಿಕ, ಕೆನಡಾ ಮತ್ತು ಬ್ರಿಟನ್ನಲ್ಲಿರುವ ಅವರ ಅಭಿಮಾನಿಗಳು ಪ್ರತ್ಯೇಕವಾಗಿ ಒಟ್ಟು 8 ಕೋಟಿ ರೂ. ದೇಣಿಗೆ ಕೊಟ್ಟಿದ್ದಾರೆ.
ಇದಲ್ಲದೆ, ಎರಡನೇ ಅತಿ ಹೆಚ್ಚು ದೇಣಿಗೆ ನೀಡಿದವರೂ ಗುಜರಾತಿನವರೇ ಆಗಿದ್ದಾರೆ. ಗುಜರಾತ್ನ ವಜ್ರದ ಉದ್ಯಮಿ ಗೋವಿಂದಭಾಯ್ ಧೋಲಾಕಿಯಾ ಅವರು ರಾಮಮಂದಿರ ನಿರ್ಮಾಣಕ್ಕೆ 11 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಧೋಲಾಕಿಯಾ ಅವರು ಸೂರತ್ ಸೇರಿದಂತೆ ಹಲವೆಡೆ ಶ್ರೀರಾಮಕೃಷ್ಣ ಎಕ್ಸ್ಪೋರ್ಟ್ಸ್ ಹೆಸರಲ್ಲಿ ವಜ್ರದ ಕಂಪನಿ ಹೊಂದಿದ್ದಾರೆ. ಇವರು ಪ್ರತಿ ವರ್ಷವೂ ದೀಪಾವಳಿ ಸಮಯದಲ್ಲಿ ತಮ್ಮ ನೂರಾರು ಉದ್ಯೋಗಿಗಳಿಗೆ ಮತ್ತು ಅವರ ಕುಟುಂಬಗಳಿಗೆ ದುಬಾರಿ ಉಡುಗೊರೆಗಳನ್ನು ನೀಡುತ್ತಿದ್ದು ಹೆಸರು ಗಳಿಸಿದವರು.
Ram Lalla will be immersed in the ram temple on January 22. Though the building is incomplete, preparations are on to dedicate the temple by installing an idol of Lord Ram. The first floor is fully ready and an idol of Ram Lalla will be installed in it. Meanwhile, the Shri Ram Janmabhoomi Teerth Kshetra Trust has received donations of over Rs 5,500 crore from devotees of Lord Ram in the country and abroad for the Ram temple.
27-07-25 01:09 pm
HK News Desk
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
27-07-25 09:58 pm
Mangalore Correspondent
Mangalore Police, Ravi Pujari: ಮಂಗಳೂರಿನ ಬಿಲ್ಡ...
27-07-25 08:56 pm
Dharmasthala Case, SIT, ADGP Pranav Mohanty:...
27-07-25 08:14 pm
Dharmasthala Case, Sowjanya case, Mangalore:...
27-07-25 07:49 pm
Mangalore Congress: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್...
26-07-25 10:41 pm
27-07-25 08:39 pm
Mangalore Correspondent
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm