ಬ್ರೇಕಿಂಗ್ ನ್ಯೂಸ್
30-01-24 01:38 pm HK News Desk ದೇಶ - ವಿದೇಶ
ನವದೆಹಲಿ, ಜ.30: ಅಮೆರಿಕದ ಸೇನಾಪಡೆ ಸದ್ಯದಲ್ಲೇ ಇರಾನ್ ಮೇಲೆ ದಾಳಿ ನಡೆಸಲಿದೆ. ಅದಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದೆ ಎಂದು ಪೆಂಟಗಾನ್ ಮೂಲಗಳನ್ನು ಉಲ್ಲೇಖಿಸಿ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇತ್ತೀಚೆಗೆ ಇರಾನ್ ಪ್ರೇರಿತ ಬಂಡುಕೋರರು ಅಮೆರಿಕದ ನೌಕಾಪಡೆ ಮೇಲೆ ದಾಳಿ ನಡೆಸಿದ್ದು ಮೂವರು ಯೋಧರು ಸಾವನ್ನಪ್ಪಿದ್ದರು. ಕೃತ್ಯದ ಹಿನ್ನೆಲೆಯಲ್ಲಿ ಪ್ರತಿದಾಳಿ ನಡೆಸಬೇಕೆಂದು ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಅವರಿಗೆ ರಾಜಕೀಯ ಸಲಹೆಗಾರರು ಒತ್ತಡ ಹೇರಿದ್ದಾರೆ.
ಆದರೆ ಜೋ ಬಿಡೆನ್ ಇನ್ನೂ ಪ್ರತಿ ದಾಳಿಗೆ ಓಕೆ ಎಂದಿಲ್ಲ. ಇಸ್ರೇಲ್- ಹಮಾಸ್ ಸಂಘರ್ಷ ನಡೆಯುತ್ತಿರುವುದರಿಂದ ಅಮೆರಿಕವು ಇರಾನ್ ಮೇಲೆ ದಾಳಿ ನಡೆಸುವುದಕ್ಕೆ ಮೀನ ಮೇಷ ಎಣಿಸುತ್ತಿದೆ. ಆದರೆ ಸೇನಾ ಪಡೆ ಮತ್ತು ರಾಜಕೀಯ ತಜ್ಞರು ತೀವ್ರ ಪ್ರತಿದಾಳಿ ನಡೆಸಲೇಬೇಕೆಂದು ಅಧ್ಯಕ್ಷ ಜೋ ಬಿಡೆನ್ ಮೇಲೆ ಒತ್ತಡ ಹೇರಿದ್ದಾರೆ. ಇತ್ತೀಚೆಗೆ ಅಮೆರಿಕದ ಸೇನಾ ಪಡೆಯ ಮೇಲೆ ಇರಾನ್ ಸೇನಾಪಡೆಯಿಂದಲೇ ಡ್ರೋಣ್ ದಾಳಿಯಾಗಿತ್ತು ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ಇರಾನ್ ಹೊರಗಿನ ಸೇನಾಪಡೆ ಮತ್ತು ಬಂಡುಕೋರರ ಮೇಲೆ ಪ್ರತಿದಾಳಿ ನಡೆಸಬೇಕೆಂಬ ಅಭಿಪ್ರಾಯ ಬಲಗೊಳ್ಳುತ್ತಿದೆ.
ಈ ವಿಚಾರದಲ್ಲಿ ಜೋ ಬಿಡೆನ್ ತನ್ನ ರಾಜಕೀಯ ಸಲಹೆಗಾರರ ಜೊತೆಗೆ ಚರ್ಚಿಸುತ್ತಿದ್ದಾರೆ. ಚರ್ಚೆಯ ಬಳಿಕವೇ ಈ ಬಗ್ಗೆ ಜೋ ಬಿಡೆನ್ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಲಿದ್ದಾರೆ. ಇತ್ತೀಚೆಗೆ ಇರಾನ್ ದಾಳಿಯ ಬಳಿಕ ಪೆಂಟಗಾನ್ ಮೂಲಗಳನ್ನು ಉಲ್ಲೇಖಿಸಿ ಅಲ್ಲಿನ ಮಾಧ್ಯಮಗಳು ಅಮೆರಿಕವು, ಇರಾನ್ ಜೊತೆಗೆ ಯುದ್ಧ ಬಯಸುವುದಿಲ್ಲ. ನಾವು ಅತಿಕ್ರಮಣವನ್ನೂ ಮಾಡುವುದಿಲ್ಲ. ಆದರೆ ಏನು ಆಗಬೇಕೋ ಅದನ್ನು ಮಾಡಿಯೇ ಮಾಡುತ್ತೇವೆ ಎಂದಿದ್ದವು. ವೈಟ್ ಹೌಸ್ ನಲ್ಲಿ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬಿ ಕೂಡ ಇದೇ ಮಾತುಗಳನ್ನು ಉಲ್ಲೇಖಿಸಿದ್ದರು. ಇರಾನಿನ ಟೆಹ್ರಾನಲ್ಲಿರುವ ಬಂಡುಕೋರ ಗುಂಪುಗಳೇ ಈ ದಾಳಿ ನಡೆಸಿವೆ. ಇಸ್ಲಾಮಿಕ್ ಉಗ್ರವಾದಿ ಗುಂಪುಗಳಲ್ಲ ಎಂದವರು ಹೇಳಿದ್ದರು.
The United States is reportedly preparing to launch retaliatory attacks against Iran-backed groups, which were allegedly behind the recent drone attack on US troops in Jordan, killing three soldiers. According to Pentagon sources, the retaliation would likely begin in the next couple of days and come in waves against a range of targets once the president gave the go-ahead, Politico reported, citing officials.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 10:01 pm
HK News Staffer
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm