ಬ್ರೇಕಿಂಗ್ ನ್ಯೂಸ್
31-01-24 04:52 pm HK News Desk ದೇಶ - ವಿದೇಶ
ಕೋಲ್ಕತ್ತಾ, ಜ 31: ಭಾರತ್ ಜೋಡೊ ನ್ಯಾಯ ಯಾತ್ರೆಯಲ್ಲಿರುವ ರಾಹುಲ್ ಗಾಂಧಿ ಅವರ ಕಾರಿನ ಮೇಲೆ ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ದಾಳಿ ನಡೆಸಲಾಗಿದೆ.
ಭಾರತ್ ಜೋಡೋ ನ್ಯಾಯ್ ಯಾತ್ರೆ’ ಅಂಗವಾಗಿ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಅಪರಿಚಿತ ವ್ಯಕ್ತಿಗಳು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಪಕ್ಷದ ರಾಜ್ಯ ಮುಖ್ಯಸ್ಥ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ.
![]()

ಘಟನೆಯಲ್ಲಿ ವಾಹನದ ಹಿಂಬದಿಯ ಕಿಟಕಿ ಗಾಜು ಜಖಂಗೊಂಡಿದೆ ಆದರೆ ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ.
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ದೃಶ್ಯಗಳು ರಾಹುಲ್ ಗಾಂಧಿಯವರು ತಮ್ಮ ವಾಹನದಿಂದ ಹೊರಬಂದ ನಂತರ ಹಾನಿಗೊಳಗಾದ ಭಾಗವನ್ನು ಪರಿಶೀಲಿಸುತ್ತಿರುವುದನ್ನು ತೋರಿಸಿದೆ
ರಾಹುಲ್ ಗಾಂಧಿ ಅವರ ಭಾರತ್ ಜೊಡೋ ಯಾತ್ರೆ ಪಶ್ಚಿಮ ಬಂಗಾಳ ರಾಜ್ಯಕ್ಕೆ ಎಂಟ್ರಿ ಕೊಟ್ಟ ಹೊತ್ತಲ್ಲೇ ಅಲ್ಲಿನ ಸಿಎಂ ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್ ಪಕ್ಷದ ಜೊತೆ ಸೀಟು ಹಂಚಿಕೆ ಮಾಡಿಕೊಳ್ಳದೆ ಏಕಾಂಗಿಯಾಗಿ ಸ್ಪರ್ಧೆ ಮಾಡುವ ನಿಲುವು ಪ್ರಕಟಿಸಿದರು. ಇಂಡಿ ಮೈತ್ರಿ ಕೂಟದಲ್ಲಿ ಅಂಗ ಪಕ್ಷ ಆಗಿದ್ರೂ ಕೂಡಾ ಕಾಂಗ್ರೆಸ್ ಜೊತೆ ಸೀಟು ಹಂಚಿಕೆ ಮಾತುಕತೆ ನಡೆಸದೇ ಏಕಾಏಕಿಯಾಗಿ ಪಶ್ಚಿಮ ಬಂಗಾಳದ ಎಲ್ಲಾ ಕ್ಷೇತ್ರಗಳಲೂ ಏಕಾಂಗಿ ಸ್ಪರ್ಧೆ ಮಾಡೋದಾಗಿ ಸಿಎಂ ಮಮತಾ ಬ್ಯಾನರ್ಜಿ ಪ್ರಕಟಿಸುವ ಮೂಲಕ ಕಾಂಗ್ರೆಸ್ ವಿರುದ್ಧ ನೇರಾನೇರ ಸಮರಕ್ಕೆ ನಿಂತರು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ, ಗುಂಪಿನಲ್ಲಿ ಇರುವವರು ಯಾರೋ ಒಬ್ಬರು ದಾಳಿ ನಡೆಸಿಬಹುದು ಎಂದಿದ್ದಾರೆ. ಇದೊಂದು ಸಣ್ಣ ಘಟನೆ. ಆದರೆ ಗಂಭೀರ ಸ್ವರೂಪದ ದಾಳಿಯೂ ಆಗಬಹುದಿತ್ತು ಎಂದು ಚೌಧರಿ ಹೇಳಿದ್ದಾರೆ.
ಇತ್ತ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೂಡಾ ಬುಧವಾರ ಮಾಲ್ಡಾದಲ್ಲೇ ಇದ್ದಾರೆ. ಜನೋಸಂಜೋಗ್ ಯಾತ್ರೆಯನ್ನು ಅವರು ನಡೆಸುತ್ತಿದ್ದಾರೆ. ಈ ಯಾತ್ರೆ ವೇಳೆ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಮಮತಾ ಬ್ಯಾನರ್ಜಿ, ನಾನು ರಾಜಕೀಯದ ಬಗ್ಗೆ ಅತಿ ವಿರಳವಾಗಿ ಮಾತನಾಡುತ್ತೇನೆ. ಆದರೆ ಕೆಲವು ಪಕ್ಷಗಳ ನಾಯಕರು ಚುನಾವಣೆ ಬಂದರೆ ಸಾಕು ಕೋಗಿಲೆಗಳ ರೀತಿ ಕೂಗಲು ಶುರು ಮಾಡುತ್ತಾರೆ. ಆದರೆ ನಮ್ಮ ಹೋರಾಟ ಏನಿದ್ದರೂ ಬಿಜೆಪಿ ಜೊತೆ. ನಾವು ಈ ಹೋರಾಟವನ್ನ ಏಕಾಂಗಿಯಾಗಿ ಮಾಡುತ್ತೇವೆ. ಬಿಜೆಪಿಯನ್ನು ಸೋಲಿಸಲು ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಮಮತಾ ಬ್ಯಾನರ್ಜಿ ಹೇಳಿದರು.
A car in which Rahul Gandhi was travelling in West Bengal's Malda district as part of 'Bharat Jodo Nyay Yatra' was pelted with stones by unidentified persons on Wednesday, claimed state party chief Adhir Ranjan Chowdhury. The rear window pane of the vehicle was smashed in the incident but Gandhi did not suffer any injury.
20-02-26 09:20 pm
HK News Desk
ಸಾರಿಗೆ ನೌಕರರ ಮುಷ್ಕರ ತಾತ್ಕಾಲಿಕ ಹಿಂದಕ್ಕೆ ; 26 ತ...
19-02-26 09:29 pm
ಪರಮೇಶ್ವರ್ ಅಥವಾ ಡಿಕೆಶಿ ಯಾರಾಗ್ತಾರೆ ಮುಂದಿನ ಮುಖ್ಯ...
19-02-26 03:11 pm
ವಿಧಾನಸೌಧ ಒಳಗಡೆ ಮಾಧ್ಯಮಗಳಿಗೆ ಲಕ್ಷ್ಮಣ ರೇಖೆ ; ಭದ್...
18-02-26 09:02 pm
ಮಹಾರಾಷ್ಟ್ರದಿಂದ ಬೈಕ್ ನಲ್ಲಿ ಬಾಗಲಕೋಟಗೆ ಬರುತ್ತಿದ...
18-02-26 06:03 pm
20-02-26 08:45 pm
HK News Desk
ಗಲ್ಫ್ ದೇಶಗಳತ್ತ ಅಮೆರಿಕದ ಯುದ್ಧ ವಿಮಾನಗಳು ; ಇರಾನ್...
19-02-26 11:04 pm
'ಉಚಿತ' ಕೊಡುಗೆಗಳು ದೇಶದ ಅಭಿವೃದ್ಧಿಗೆ ಅಡ್ಡಿ ; ಆದಾ...
19-02-26 10:10 pm
ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಶೋಚನೀಯ ಸ್ಥಿತಿ ; ಕ...
17-02-26 08:50 pm
ಸೋಶಿಯಲ್ ಮೀಡಿಯಾ ಸ್ಟಾರ್ ಚಿನ್ನು ಪಾಪು ಸಾವಿನ ಬೆನ್ನ...
16-02-26 12:53 pm
20-02-26 06:05 pm
Mangalore Correspondent
Kotekar, Mangalore News: ಕೋಟೆಕಾರು ಪ.ಪಂ ಸದಸ್ಯ...
20-02-26 04:18 pm
ಕುತ್ಲೂರಿನಲ್ಲಿ ನಕ್ಸಲ್ ಕರಪತ್ರ ಹಂಚಿದ್ದ ಪ್ರಕರಣ ;...
19-02-26 10:37 pm
2013ರಲ್ಲಿ ಶಿಲಾನ್ಯಾಸಗೊಂಡಿದ್ದ ಅಬ್ಬಕ್ಕ ಭವನ ನಿರ್ಮ...
19-02-26 09:50 pm
ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವಿಗೆ ಆಗ್ರಹ, ಹೋರಾಟ...
19-02-26 06:08 pm
20-02-26 10:08 pm
Mangaluru Staffer
ಲಕ್ಕುಂಡಿ ನಿಧಿ ಹೆಸ್ರಲ್ಲಿ ಜನರಿಗೆ ಟೋಪಿ ; ಹಂಡಿಯೊಳ...
20-02-26 09:07 pm
ಗಂಡ ಸತ್ತ ಒಂದೇ ವಾರಕ್ಕೆ ಪತ್ನಿಗೆ ಪೊಲೀಸಪ್ಪನ ಕಿರುಕ...
20-02-26 08:54 pm
ಮುಡಾ ಹಗರಣ, ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ನೀಡಿ...
20-02-26 08:44 pm
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಮಸೀದಿಯಿಂದ ಕಲ್ಲು –...
20-02-26 03:03 pm