ಬ್ರೇಕಿಂಗ್ ನ್ಯೂಸ್
09-02-24 12:24 pm HK News Desk ದೇಶ - ವಿದೇಶ
ನವದೆಹಲಿ, ಫೆ.9: ಅಕ್ರಮ ಮದ್ರಸಾ ಕಟ್ಟಡವನ್ನು ತೆರವುಗೊಳಿಸಿದ ವಿಚಾರದಲ್ಲಿ ಉತ್ತರಾಖಂಡದ ಹಲ್ದ್ವಾನಿ ಎಂಬಲ್ಲಿ ಹಿಂಸಾಚಾರ ಹೊತ್ತಿಕೊಂಡಿದ್ದು, ಇಬ್ಬರು ಮೃತಪಟ್ಟು 250ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಹಿಂಸಾಪೀಡಿತ ಪ್ರದೇಶದಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಕಂಡಲ್ಲಿ ಗುಂಡಿಕ್ಕಲು ಆದೇಶ ಮಾಡಲಾಗಿದೆ. ಇಂಟರ್ನೆಟ್ ಸಂಪರ್ಕವನ್ನು ಸಂಪೂರ್ಣ ಕಡಿತಗೊಳಿಸಲಾಗಿದೆ.
ಕೋರ್ಟ್ ಆದೇಶ ಪ್ರಕಾರ, ಸರಕಾರಿ ಜಾಗವನ್ನು ಕಬಳಿಸಿ ಕಟ್ಟಲಾಗಿದ್ದ ಮಸೀದಿ ಮತ್ತು ಮದ್ರಸಾ ಕಟ್ಟಡವನ್ನು ತೆರವುಗೊಳಿಸಲು ಪೊಲೀಸ್ ಭದ್ರತೆಯಲ್ಲಿ ಅಧಿಕಾರಿಗಳು ತೆರಳಿದ್ದಾಗ ವಿರೋಧಿಗಳ ಗುಂಪು ಸೇರಿದ್ದು ಹಿಂಸಾಚಾರ ನಡೆಸಿದ್ದಾರೆ. ಘಟನೆಯಲ್ಲಿ 50ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ. ಸ್ಥಳದಲ್ಲಿ ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿ ಹಾಕಲಾಗಿದ್ದು, ಪೊಲೀಸರು, ಸ್ಥಳೀಯಾಡಳಿತದ ಅಧಿಕಾರಿಗಳು, ಪೌರ ಕಾರ್ಮಿಕರು, ಸ್ಥಳೀಯ ಪತ್ರಕರ್ತರು ಗಾಯಗೊಂಡಿದ್ದಾರೆ. ಉದ್ರಿಕ್ತ ಗುಂಪು ಪೊಲೀಸರು, ಅಧಿಕಾರಿಗಳ ಮೇಲೆ ಕಲ್ಲು ತೂರಿದ್ದು, ಪೊಲೀಸ್ ಠಾಣೆ ಹೊರಗಿದ್ದ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.
ಬಿಗಿ ಪೊಲೀಸ್ ಭದ್ರತೆಯಲ್ಲಿ ಅಕ್ರಮವಾಗಿ ಸರಕಾರಿ ಜಾಗದಲ್ಲಿ ಕಟ್ಟಲಾಗಿದ್ದ ಮದ್ರಸ ಮತ್ತು ಮಸೀದಿ ಕಟ್ಟಡವನ್ನು ತೆರವುಗೊಳಿಸಿದ್ದಕ್ಕೆ ಉದ್ರಿಕ್ತರು ಪ್ರತೀಕಾರ ತೀರಿಸುವ ನೆಪದಲ್ಲಿ ಹಿಂಸಾಚಾರ ನಡೆಸಿದ್ದಾರೆ. ಸ್ಥಳೀಯ ಮಹಿಳೆಯರು ಸೇರಿದಂತೆ ರಸ್ತೆಯನ್ನು ಅಡ್ಡಗಟ್ಟಿ ಪ್ರತಿಭಟನೆ ನಡೆಸುತ್ತಿದ್ದಂತೆಯೇ ಕಲ್ಲು ತೂರಾಟ, ಹಿಂಸಾಚಾರ ಆರಂಭಗೊಂಡಿದೆ. 20ಕ್ಕೂ ದ್ವಿಚಕ್ರ ವಾಹನಳು, ಪೊಲೀಸರ ಬಸ್ಸುಗಳು ಬೆಂಕಿಗೆ ಆಹುತಿಯಾಗಿವೆ. ಪೊಲೀಸರು ಯಾವುದೇ ರೀತಿಯಲ್ಲಿ ಉದ್ರೇಕಿಸುವ ಕೆಲಸ ಮಾಡಿಲ್ಲ. ಸ್ಥಳೀಯರೇ ಪೊಲೀಸ್ ಠಾಣೆಗೆ ನುಗ್ಗಿ ಬೆಂಕಿ ಹಾಕಿದ್ದಾರೆ. ಪೊಲೀಸರ ಮೇಲೆ ಕಲ್ಲು ತೂರಿದ್ದಾರೆ ಎಂದು ನೈನಿತಾಲ್ ಜಿಲ್ಲಾಧಿಕಾರಿ ವಂದನಾ ಸಿಂಗ್ ತಿಳಿಸಿದ್ದಾರೆ.
ಹಲ್ದ್ ವಾನಿ ಪ್ರದೇಶದಲ್ಲಿ ಶಾಲೆ, ಕಾಲೇಜು ಬಂದ್ ಆಗಿದ್ದು, ಕೇಂದ್ರೀಯ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಹಿಂಸಾ ಪೀಡಿತ ಪ್ರದೇಶದಲ್ಲಿ ಕರ್ಫ್ಯೂ ವಿಧಿಸಿದ್ದು, ಜನರು ಹೊರಬರದಂತೆ ಸೂಚಿಸಲಾಗಿದೆ. ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರು ಸಮಾಜ ವಿದ್ರೋಹಿ ಶಕ್ತಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆದೇಶ ಮಾಡಿದ್ದಾರೆ.
Two people died and 250 were injured in widespread violence over the demolition of an illegal madrasa and an adjoining mosque in Uttarakhand's Haldwani on Thursday. The city has been placed under curfew, with shoot-at-sight orders issued against rioters and internet services completely shut down.
05-12-24 11:02 am
HK News Desk
18ನೇ ವಯಸ್ಸಿಗೆ ಕಮರ್ಶಿಯಲ್ ಪೈಲಟ್ ; ವಿಜಯಪುರ ಮೂಲದ...
04-12-24 08:10 pm
Online Game, Suicide, Bangalore; ಆನ್ಲೈನ್ ಗೇಮಿ...
04-12-24 04:05 pm
Karwar, Ballon Death: ಕಾರವಾರ ; ಗಂಟಲಲ್ಲಿ ಬಲೂನ್...
02-12-24 02:39 pm
Kannada actress Shobitha Shivanna, Suicide: ಕ...
02-12-24 01:55 pm
04-12-24 01:29 pm
HK News Desk
'ಪ್ರಚಂಡ ಫೆಂಗಲ್' ಆರ್ಭಟಕ್ಕೆ ತಮಿಳುನಾಡು ತತ್ತರ ; ಮ...
03-12-24 01:46 pm
ಕೇರಳ ಸಾರಿಗೆ ಬಸ್ಗೆ ಕಾರು ಡಿಕ್ಕಿ ; ಐವರು MBBS ವಿ...
03-12-24 01:06 pm
ತಮಿಳುನಾಡಿನ 14 ಜಿಲ್ಲೆಗಳಲ್ಲಿ ಫೆಂಗಾಲ್ ಹಾವಳಿ ; ಉತ...
02-12-24 10:44 pm
Kasaragod, Muna Shamsuddin: ಲಂಡನ್ನಲ್ಲಿ ಚಾರ್ಲ...
01-12-24 03:54 pm
05-12-24 04:12 pm
Mangalore Correspondent
Udupi, Kundapura, Bride groom missing: ಮದುವೆಗ...
05-12-24 02:49 pm
NIA, Raid, Mangalore, Crime: ಬಿಜೆಪಿ ಮುಖಂಡ ಪ್ರ...
05-12-24 11:52 am
Mangalore, VHP, BJP Protest: ಹಿಂದು ಮೌನವಾಗಿದ್ದ...
04-12-24 10:20 pm
Mangalore, Alvas college Virasat: ಡಿ.10ರಿಂದ 1...
04-12-24 09:10 pm
03-12-24 08:50 pm
Bangalore Correspondent
Kadaba Murder, Managalore Crime: ಸ್ನೇಹಿತನನ್ನೇ...
03-12-24 03:40 pm
ACP Dhanya Nayak, Drugs, Mangalore: ಮುಂದುವರಿದ...
30-11-24 03:03 pm
Bangalore crime, Murder, Assam, Arrest: ಲವ್ ಮ...
29-11-24 10:49 pm
Dharmasthala Robbery, Mangalore crime: ಧರ್ಮಸ್...
29-11-24 12:20 pm