ಬ್ರೇಕಿಂಗ್ ನ್ಯೂಸ್
15-02-24 11:14 pm HK NEWS ದೇಶ - ವಿದೇಶ
ಪಾಟ್ನಾ, ಫೆ.15: ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದ ಮಹಿಳೆಯನ್ನು ಅಂತ್ಯ ಸಂಸ್ಕಾರಕ್ಕಾಗಿ ಒಯ್ಯುತ್ತಿದ್ದಾಗ ದಿಢೀರ್ ಆಗಿ ಬದುಕಿ ಬಂದ ಘಟನೆ ಬಿಹಾರದಲ್ಲಿ ನಡೆದಿದೆ.
ಮೃತದೇಹವನ್ನು ಛತ್ತೀಸ್ಗಢದಿಂದ ಬಿಹಾರಕ್ಕೆ ತರುವಾಗ 18 ಗಂಟೆ ಪ್ರಯಾಣ ತಗಲಿತ್ತು. ಪ್ರಯಾಣದ ಬಳಿಕ ಆಕೆ ಏಕಾಏಕಿ ಮಾರ್ಗಮಧ್ಯೆ ಮಹಿಳೆ ಜೀವ ಪಡೆದಿದ್ದು ಕುಟುಂಬಸ್ಥರು ಅಚ್ಚರಿಗೆ ಒಳಗಾಗಿದ್ದಾರೆ. ರಾಮವತಿ ದೇವಿ ಎಂಬ ಮಹಿಳೆ ಈ ರೀತಿ ಮರುಜನ್ಮ ಪಡೆದಾಕೆ. ಈಕೆ ಬಿಹಾರದ ಬೇಗುಸರಾಯ್ ಜಿಲ್ಲೆಯ ನೀಮಾ ಚಂದ್‌ಪುರ ಗ್ರಾಮದ ನಿವಾಸಿ. ತನ್ನ ಇಬ್ಬರು ಮಕ್ಕಳಾದ ಮುರಾರಿ ಶಾವೋ ಮತ್ತು ಘನಶ್ಯಾಮ್ ಶಾವೋ ಜೊತೆ ಇತ್ತೀಚೆಗೆ ಛತ್ತೀಸ್‌ಗಢಕ್ಕೆ ತೆರಳಿದ್ದರು. ಫೆಬ್ರವರಿ 11 ರಂದು ರಾಮವತಿಗೆ ಉಸಿರಾಟದ ಸಮಸ್ಯೆ ಉಂಟಾಗಿತ್ತು. ತಕ್ಷಣವೇ ಆಕೆಯನ್ನು ಕೊರ್ವಾ ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ವೇಳೆ ಆಕೆ ಮೃತಪಟ್ಟಿರುವುದಾಗಿ ಅಲ್ಲಿನ ವೈದ್ಯರು ತಿಳಿಸಿದ್ದರು.
ಪುತ್ರರಿಬ್ಬರು ತಾಯಿಯನ್ನು ತಮ್ಮೂರಿಗೆ ತಂದು ಅಂತ್ಯಸಂಸ್ಕಾರ ಮಾಡಲು ಬಯಸಿದ್ದು, ಅದರಂತೆ ಬಿಹಾರಕ್ಕೆ ಶವವನ್ನು ವಾಪಸ್ ತರುತ್ತಿದ್ದರು. ಫೆಬ್ರವರಿ 12 ರಂದು ಖಾಸಗಿ ವಾಹನದಲ್ಲಿ ದೇಹವನ್ನು ಬೇಗುಸರೈಗೆ ತರಲಾಗುತ್ತಿತ್ತು. ಛತ್ತೀಸ್ಗಢದಿಂದ 18 ಗಂಟೆಗಳ ಪ್ರಯಾಣದ ನಂತರ ಬಿಹಾರದ ಔರಂಗಾಬಾದ್ ತಲುಪಿದಾಗ ಅಚ್ಚರಿ ಎಂಬಂತೆ ರಾಮವತಿ ಇದ್ದಕ್ಕಿದ್ದಂತೆ ಎದ್ದು ಕುಳಿತಿದ್ದಾರೆ.
ಇದನ್ನು ಕಂಡು ಕುಟುಂಬಸ್ಥರು ಬೆಚ್ಚಿಬಿದ್ದಿದ್ದಾರೆ. ರಸ್ತೆ ಬದಿ ವಾಹನ ನಿಲ್ಲಿಸಿ ಆಕೆಯನ್ನು ಭಯದಿಂದಲೇ ಪರೀಕ್ಷಿಸಿದ್ದಾರೆ. ಮಹಿಳೆ ಜೀವಂತವಾಗಿರುವುದನ್ನು ಕಂಡುಕೊಂಡ ಅವರು ಬೇಗುಸರಾಯ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಆಕೆಯನ್ನು ವೆಂಟಿಲೇಟರ್‌ನಲ್ಲಿರಿಸಿ ಚಿಕಿತ್ಸೆ ನೀಡುತ್ತಿದ್ದಾರೆ.
ವಾಹನದಲ್ಲಿ ಕರೆತರುತ್ತಿದ್ದಾಗ ಕಾರ್ಡಿಯೋ ಪಲ್ಮನರಿ ರೆಸಸಿಟೇಶನ್ (ಸಿಪಿಆರ್) ಆಗಿ ಮಹಿಳೆ ಬದುಕಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಅಂದರೆ, ವಾಹನ ಅಲುಗಾಡಿದಾಗ ದೇಹ ಕುಲುಕಿ ಮಹಿಳೆಗೆ ಉಸಿರಾಟ ಮರು ಆರಂಭವಾಗಿದೆ. ಹೃದಯಸ್ತಂಭನ ಉಂಟಾದಾಗ ಸಿಪಿಆರ್ ಮಾಡಲಾಗುತ್ತದೆ. ಅದಿಲ್ಲಿ ಸಹಜವಾಗಿ ಆಗಿದೆ ಎಂದಿದ್ದಾರೆ.
An elderly woman who was declared dead in Chhattisgarh, miraculously came back to life as soon as she entered her native state Bihar.
28-07-25 11:07 am
HK News Desk
Raichur Building Fall: ರಾಯಚೂರಿನಲ್ಲಿ ಚರಂಡಿ ಬ್ಲ...
27-07-25 01:09 pm
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
28-07-25 12:28 pm
HK News Desk
Israel, Arabic Language: ಇಸ್ರೇಲ್ ಸೈನಿಕರಿಗೆ ಇಸ...
26-07-25 03:31 pm
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
28-07-25 01:14 pm
Mangalore Correspondent
Sullia, Rain, Mangalore Death: ಸುಳ್ಯದಲ್ಲಿ ಮಳೆ...
28-07-25 10:51 am
Mangalore Kodakkena Restaurant owner Suicide:...
27-07-25 09:58 pm
Mangalore Police, Ravi Pujari: ಮಂಗಳೂರಿನ ಬಿಲ್ಡ...
27-07-25 08:56 pm
Dharmasthala Case, SIT, ADGP Pranav Mohanty:...
27-07-25 08:14 pm
27-07-25 08:39 pm
Mangalore Correspondent
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm