ಬ್ರೇಕಿಂಗ್ ನ್ಯೂಸ್
17-02-24 11:07 pm HK News Desk ದೇಶ - ವಿದೇಶ
ಮುಂಬೈ, ಫೆ 17: ಆಮಿರ್ ಖಾನ್ ನಟನೆಯ ಸೂಪರ್ ಹಿಟ್ ಸಿನಿಮಾ ‘ದಂಗಲ್’ನಲ್ಲಿ ಯಂಗ್ ಬಬಿತಾ ಕುಮಾರಿ ಪೋಗಟ್ ಪಾತ್ರ ಮಾಡಿದ್ದ ನಟಿ ಸುಹಾನಿ ಭಟ್ನಾಗರ್ ಅವರು ನಿಧನರಾಗಿದ್ದಾರೆ. ಅವರಿಗೆ 19 ವರ್ಷ ವಯಸ್ಸಾಗಿತ್ತು. ಇಂದು ( ಫೆಬ್ರವರಿ 17 ) ಅವರು ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ.
ಆಮಿರ್ ಖಾನ್ ಪ್ರೊಡಕ್ಷನ್ಸ್ ಅವರು ಈ ವಿಷಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. “ಸುಹಾನಿ ನಿಧನದ ವಿಷಯ ನಮಗೆ ತುಂಬ ಬೇಸರ ತಂದಿದೆ. ಸುಹಾನಿ ತಾಯಿ ಪೂಜಾ ಅವರಿಗೆ, ಇಡೀ ಕುಟುಂಬಕ್ಕೆ ಸಂತಾಪಗಳು. ಸುಹಾನಿ ಪ್ರತಿಭಾನ್ವಿತ ಹುಡುಗಿ, ಟೀಮ್ ಪ್ಲೇಯರ್ ಕೂಡ ಹೌದು. ಸುಹಾನಿ ಇಲ್ಲದೆ ದಂಗಲ್ ಸಿನಿಮಾ ಅಪೂರ್ಣ. ಸುಹಾನಿ ಸದಾ ನಮ್ಮ ಹೃದಯದಲ್ಲಿ ಇರುತ್ತಾರೆ, ಅವಳ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದೆ
ಸುಹಾನಿ ಅವರು ಕೆಲ ದಿನಗಳಿಂದ ದೆಹಲಿಯ AIIMS ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೆಲ ಮಾತ್ರೆಗಳಿಂದ ರಿಯಾಕ್ಷನ್ ಆಗಿ ಸುಹಾನಿ ಅವರು ಆಸ್ಪತ್ರೆ ಸೇರಿದ್ದರು ಎನ್ನಲಾಗಿದೆ. ಈ ಬಗ್ಗೆ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.
ಸುಹಾನಿ ಯಾವ ಸಿನಿಮಾದಲ್ಲಿ ನಟಿಸಿದ್ದರು?
2016ರಲ್ಲಿ ತೆರೆ ಕಂಡ ‘ದಂಗಲ್’ ಸಿನಿಮಾದಲ್ಲಿ ಸುಹಾನಿ ನಟಿಸಿದ್ದರು. ಈ ಚಿತ್ರವನ್ನು ನಿತೀಶ್ ತಿವಾರಿ ಅವರು ನಿರ್ದೇಶನ ಮಾಡಿದ್ದರು. ಈ ಸಿನಿಮಾವನ್ನು ಆಮಿರ್ ಖಾನ್ ಅವರು ನಿರ್ಮಾಣ ಮಾಡಿದ್ದರು. ಆಮಿರ್ ಖಾನ್, ಸಾಕ್ಷಿ ತನ್ವಾರ್, ಫಾತಿಮಾ ಸನಾ ಶೇಖ್, ಝೈರಾ ವಾಸಿಮ್, ಸಾನ್ಯಾ ಮಲ್ಹೋತ್ರ, ಅಪರಶಕ್ತಿ ಖುರಾನಾ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದರು.
'ಸತ್ಯಮೇವ ಜಯತೇ' ಎನ್ನುವ ಕಾರ್ಯಕ್ರಮದಲ್ಲಿ ಪೋಗಟ್ ಸಹೋದರಿಯನ್ನು ಆಮಿರ್ ಖಾನ್ ಅವರು ಸಂದರ್ಶನ ಮಾಡಿದ್ದರು. ಆ ನಂತರದಲ್ಲಿ ಸಿನಿಮಾ ಸ್ಕ್ರಿಪ್ಟ್ ರೆಡಿ ಆಗಿತ್ತು.
Suhani Bhatnagar, who acted as child Babita Phogat in Aamir Khan's Dangal, died on Saturday morning. She was only 19 years old. The cause of her death is still not known. She used to live in sector 17, Faridabad. She will be cremated at the Ajronda crematorium in Sector 15, Faridabad. Suhani used to post pictures of herself on Instagram. However, her last post was from November 2021.
28-07-25 11:07 am
HK News Desk
Raichur Building Fall: ರಾಯಚೂರಿನಲ್ಲಿ ಚರಂಡಿ ಬ್ಲ...
27-07-25 01:09 pm
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
28-07-25 12:28 pm
HK News Desk
Israel, Arabic Language: ಇಸ್ರೇಲ್ ಸೈನಿಕರಿಗೆ ಇಸ...
26-07-25 03:31 pm
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
28-07-25 01:14 pm
Mangalore Correspondent
Sullia, Rain, Mangalore Death: ಸುಳ್ಯದಲ್ಲಿ ಮಳೆ...
28-07-25 10:51 am
Mangalore Kodakkena Restaurant owner Suicide:...
27-07-25 09:58 pm
Mangalore Police, Ravi Pujari: ಮಂಗಳೂರಿನ ಬಿಲ್ಡ...
27-07-25 08:56 pm
Dharmasthala Case, SIT, ADGP Pranav Mohanty:...
27-07-25 08:14 pm
27-07-25 08:39 pm
Mangalore Correspondent
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm