ಬ್ರೇಕಿಂಗ್ ನ್ಯೂಸ್
25-02-24 09:32 pm HK News Desk ದೇಶ - ವಿದೇಶ
ನವದೆಹಲಿ, ಫೆ.25: ದ್ವಾಪರ ಯುಗದಲ್ಲಿ ಶ್ರೀಕೃಷ್ಣ ಪರಮಾತ್ಮನೇ ಸೃಷ್ಟಿಸಿದ್ದ ಎಂದು ಹೇಳಲಾಗುವ ಗುಜರಾತ್ ಕರಾವಳಿಯಲ್ಲಿ ಮುಳುಗಿರುವ ದ್ವಾರಕಾ ನಗರಿಯ ಅವಶೇಷಗಳನ್ನು ಪ್ರಧಾನಿ ನರೇಂದ್ರ ಮೋದಿ ಸಮುದ್ರದಾಳಕ್ಕೆ ಹೋಗಿ ಕಣ್ತುಂಬಿಕೊಂಡಿದ್ದಾರೆ. ಅಲ್ಲದೆ, ಕೃಷ್ಣನಿಗೆ ಪ್ರಿಯವಾದ ನವಿಲು ಗರಿಯನ್ನು ದ್ವಾರಕೆಯ ಭೂಮಿಯಲ್ಲಿರಿಸಿ ದೇವರಿಗೆ ಅರ್ಪಿಸಿ ನಮಿಸಿದ್ದಾರೆ.
ನೌಕಾಪಡೆಯ ನುರಿತ ಸ್ಕೂಬಾ ಡೈವರ್ ಗಳ ಸಹಾಯದಿಂದ ಮೋದಿಯವರು ಹೆಲ್ಮೆಟ್ ರೀತಿಯ ಕೃತಕ ಉಸಿರಾಟದ ಸಾಧನವನ್ನು ಮುಖಕ್ಕೆ ಹಾಕ್ಕೊಂಡು ಸಮುದ್ರದಲ್ಲಿ ಮುಳುಗಿದ್ದಾರೆ. ಆನಂತರ, ಸಮುದ್ರದಲ್ಲಿ ಮುಳುಗಡೆಯಾಗಿದೆ ಎನ್ನಲಾಗುವ ದ್ವಾರಕಾ ನಗರಿಯ ಅವಶೇಷಗಳನ್ನು ಸ್ವತಃ ವೀಕ್ಷಿಸಿದ್ದಾರೆ. ಸಮುದ್ರದ ತಳದಲ್ಲಿ ಮೊಣಕಾಲು ಮಡಚಿಕೊಂಡು ಪದ್ಮಾಸನ ರೀತಿಯಲ್ಲಿ ಕುಳಿತುಕೊಂಡು ಕೆಲಹೊತ್ತು ಮೋದಿಯವರು ಧ್ಯಾನಸ್ಥರಾಗಿದ್ದಾರೆ. ಬಳಿಕ ತಾನು ಒಯ್ದಿದ್ದ ನವಿಲು ಗರಿಯನ್ನು ದ್ವಾರಕೆಯ ಗೋಡೆಗಳ ರಂಧ್ರಕ್ಕೆ ಸಿಕ್ಕಿಸಿದ್ದಾರೆ.
ಶ್ರೀಕೃಷ್ಣನ ನೆಲೆಯನ್ನು ನೋಡಿದ್ದು ನನಗೆ ಅದ್ಭುತ ಅನುಭವ ನೀಡಿತು. ಒಂದು ಕ್ಷಣ ನನ್ನನ್ನೇ ನಾನು ಮರೆಯುವಂತಾಯಿತು. ಹಳೆಯ ಯುಗವನ್ನು ಕಣ್ಣಾರೆ ನೋಡಿದಂತಹ ಅನುಭವ ಸಿಕ್ಕಿದೆ. ಭಗವಾನ್ ಕೃಷ್ಣ ನಮಗೆಲ್ಲ ಒಳಿತನ್ನು ಮಾಡಲಿ ಎಂದು ಮೋದಿ ತಮ್ಮ ಅನುಭವ ಹೇಳಿಕೊಂಡಿದ್ದಾರೆ. ದ್ವಾರಕಾ ದ್ಪೀಪದ ಬಳಿಯಲ್ಲಿ ಜನಸಾಮಾನ್ಯರಿಗೆ ಸ್ಕೂಬಾ ಡೈವಿಂಗ್ ಅವಕಾಶ ನೀಡಿದ್ದು, ಪ್ರವಾಸಿಗರು ಸಾಗರದಾಳ ನೋಡಲು ಬರುತ್ತಿದ್ದಾರೆ. ಹೀಗಾಗಿ ಮೋದಿ ಆಗಮನ ಪ್ರವಾಸೋದ್ಯಮ ಉತ್ತೇಜನದ ಉದ್ದೇಶವನ್ನೂ ಹೊಂದಿತ್ತು. ಇದಕ್ಕೂ ಮುನ್ನ ದ್ವಾರಕೆಯ ದ್ವೀಪದಿಂದ ಗುಜರಾತ್ ಕರಾವಳಿಯ ಓಕಾ ಬಂದರನ್ನು ಸಂಪರ್ಕಿಸುವ 3 ಕಿಮೀ ಉದ್ದದ ದೇಶದ ಅತಿದೊಡ್ಡ ತೂಗುಸೇತುವೆ ‘ಸುದರ್ಶನ್ ಸೇತು’ವನ್ನು ಮೋದಿಯವರು ಲೋಕಾರ್ಪಣೆ ಮಾಡಿದ್ದಾರೆ.
ದ್ವಾರಕಾ ನಗರಿ ನೋಡಲು ಸ್ಕೂಬಾ ಡೈವಿಂಗ್
ಪುರಾಣ ಗ್ರಂಥದಲ್ಲಿ ಹೇಳಿದಂತೆ, ಕಂಸನ ವಧೆಯ ಬಳಿಕ ಶ್ರೀಕೃಷ್ಣ ತನ್ನದೇ ಆದ ಪ್ರತ್ಯೇಕ ನಗರವನ್ನು ಸಮುದ್ರದಲ್ಲಿ ಸೃಷ್ಟಿಸುತ್ತಾನೆ. ಸಮುದ್ರ ತಟದಿಂದ ಪ್ರತ್ಯೇಕವಾಗಿ ತೇಲಿಕೊಂಡೇ ಇತ್ತು ಎನ್ನಲಾಗಿದ್ದ ಆ ನಗರಿ ಆನಂತರ ಶ್ರೀಕೃಷ್ಣ ಕಾಲವಾದ ನಂತರ ಸಮುದ್ರದಲ್ಲಿ ಮುಳುಗಡೆಯಾಗಿತ್ತು. ಅಲ್ಲಿನ ಸ್ಥಳಕ್ಕೆ ಈಗಲೂ ದ್ವಾರಕೆ ಎಂದೇ ಹೆಸರಿದೆ. ಇತ್ತೀಚೆಗೆ ಕೆಲವು ವರ್ಷಗಳ ಹಿಂದೆ ಆ ಜಾಗದಲ್ಲಿ ಉತ್ಘನನ ನಡೆಸಿದಾಗ ದ್ವಾರಕಾ ನಗರಿಯಿದ್ದ ಲಕ್ಷಣಗಳು ಸಮುದ್ರದಾಳದಲ್ಲಿ ಕಂಡುಬಂದಿದ್ದವು. ಹಿಂದಿನ ಕಾಲದಲ್ಲಿ ಅದ್ಭುತ ನಗರವೊಂದು ಇಲ್ಲಿತ್ತು ಎಂದು ವಿಜ್ಞಾನಿಗಳು ಹೇಳಿದ್ದರು. ಅಲ್ಲದೆ, ಈ ನಗರವು 2500 ವರ್ಷಗಳ ಹಿಂದಿನದ್ದು ಎಂದು ಅಭಿಪ್ರಾಯ ಪಟ್ಟಿದ್ದರು. ಶ್ರೀಕೃಷ್ಣನ ಕಾಲಾವಧಿಯ ಬಗ್ಗೆ ಖಚಿತ ಉಲ್ಲೇಖ ಇಲ್ಲವಾದರೂ, ಪುರಾಣ ಗ್ರಂಥಗಳಲ್ಲಿ ಹೇಳಿದ ದ್ವಾರಕಾ ನಗರಿಯೇ ಸಮುದ್ರ ತಳದಲ್ಲಿದೆ ಎಂದು ಹೇಳಲಾಗುತ್ತಿದೆ. ಅದೀಗ ಸ್ಕೂಬಾ ಡೈವರ್ ಗಳ ಆಕರ್ಷಕ ತಾಣವಾಗಿದ್ದು, ಜಗತ್ತಿನ ನಾನಾ ಕಡೆಗಳಿಂದ ಪ್ರವಾಸಿಗರು ಬರುತ್ತಿದ್ದಾರೆ.
To pray in the city of Dwarka, which is immersed in the waters, was a very divine experience. I felt connected to an ancient era of spiritual grandeur and timeless devotion. May Bhagwan Shri Krishna bless us all. pic.twitter.com/yUO9DJnYWo
— Narendra Modi (@narendramodi) February 25, 2024
Prime Minister Narendra Modi on Sunday went underwater, in the deep sea, enjoyed scuba diving off the Arabian Sea coast at the Panchkui beach in Gujarat and offered prayers at the site where the ancient city of Dwarka was believed to have submerged post Lord Krishna’s demise. It is believed that the ancient city was linked closely with Lord Krishna and was a hub of grandeur and prosperity.
16-01-25 05:30 pm
HK News Desk
Sp Belagavi, Minister Laxmi Hebbalkar car acc...
15-01-25 09:17 pm
ಮುಡಾ ಪ್ರಕರಣ ; ಸಿಬಿಐ ತನಿಖೆ ಕೋರಿದ್ದ ಅರ್ಜಿ ಜ.27ಕ...
15-01-25 08:22 pm
Dolly Chaiwala, Mangalore; ಅಮೆರಿಕದ ಬಿಲ್ ಗೇಟ್ಸ...
15-01-25 06:37 pm
Minister Zameer Ahmed, Bangalore; ಹಸು ಕೆಚ್ಚಲು...
15-01-25 06:21 pm
16-01-25 09:01 pm
HK News Desk
Actor Saif Ali Khan attack stabbed: ಬಾಲಿವುಡ್...
16-01-25 04:24 pm
Bonnie Blue: 12 ಗಂಟೆಯಲ್ಲಿ 1,000ಕ್ಕೂ ಅಧಿಕ ಪುರು...
15-01-25 10:51 pm
Mallikarjun Kharges, L N T chairman: ಕಾಂಗ್ರೆಸ...
15-01-25 10:06 pm
ಮಹಾ ಕುಂಭ ಮೇಳಕ್ಕೆ ಗೂಗಲ್ ಪುಷ್ಪ ವೃಷ್ಟಿ ! ಮೊಬೈಲ್...
14-01-25 07:18 pm
16-01-25 10:12 pm
Mangalore Correspondent
Mangalore News, Shaheen death: ಶಟ್ಲ್ ಆಡುತ್ತಿದ...
16-01-25 03:54 pm
Mangalore, MP Brijesh Chowta: ಪಾಕಿಸ್ತಾನಕ್ಕೆ ಜ...
16-01-25 12:58 pm
Udupi Yakshagana News, Police ಅನುಮತಿ ಇಲ್ಲದೆ ರ...
15-01-25 10:47 pm
Banner, Nalin Kumar Kateel, D V Sadananda Gow...
15-01-25 08:01 pm
16-01-25 03:10 pm
HK News Desk
Fake Stock Market scam, Mangalore, Police: ನಕ...
15-01-25 11:06 pm
Kerala rape News: ಇನ್ಸ್ಟಾಗ್ರಾಂನಲ್ಲಿ ಪರಿಚಯ, ರ...
14-01-25 10:40 pm
Mangalore crime, Diesel thieves: ಸುರತ್ಕಲ್ ; ಟ...
14-01-25 04:47 pm
Mangalore, Tannirbhavi beach, crime: ತಣ್ಣೀರುಬ...
13-01-25 03:30 pm