ನೀವಾರ್ ಹೊಡೆತಕ್ಕೆ ಐವರು ಬಲಿ ; ಕ್ಷೀಣವಾದ ಸೈಕ್ಲೋನ್, ವಿಪತ್ತಿನಿಂದ ಪಾರು

26-11-20 03:46 pm       Headline Karnataka News Network   ದೇಶ - ವಿದೇಶ

ಎರಡು ದಿನಗಳಿಂದ ಭಾರೀ ಮಳೆ ಮತ್ತು ಬಿರುಗಾಳಿಗೆ ತತ್ತರಿಸಿದ್ದ ಚೆನ್ನೈ ಮತ್ತು ಪುದುಚೇರಿ ಮಹಾ ವಿಪತ್ತಿನಿಂದ ಪಾರಾಗಿದೆ.

ಚೆನ್ನೈ, ನವೆಂಬರ್ 26: ತಮಿಳ್ನಾಡು ಕರಾವಳಿಗೆ ಅಪ್ಪಳಿಸಿದ್ದ ನೀವಾರ್ ಚಂಡಮಾರುತ ಕ್ಷೀಣವಾಗ ತೊಡಗಿದೆ. ಎರಡು ದಿನಗಳಿಂದ ಭಾರೀ ಮಳೆ ಮತ್ತು ಬಿರುಗಾಳಿಗೆ ತತ್ತರಿಸಿದ್ದ ಚೆನ್ನೈ ಮತ್ತು ಪುದುಚೇರಿ ಮಹಾ ವಿಪತ್ತಿನಿಂದ ಪಾರಾಗಿದೆ. ನೀವಾರ್ ಚಂಡಮಾರುತಕ್ಕೆ ತುತ್ತಾಗಿ ತಮಿಳುನಾಡಿನಲ್ಲಿ ಐದು ಮಂದಿ ಬಲಿಯಾಗಿದ್ದಾರೆ.

ಕರಾವಳಿಯಲ್ಲಿ ವಾಸವಿದ್ದ ಒಂದು ಲಕ್ಷಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಪುದುಚೇರಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಿರುವುದನ್ನು ಮುಂದುವರಿಸಲಾಗಿದ್ದು ಜನರು ಮನೆಯಿಂದ ಹೊರಬಾರದೆಂದು ಸೂಚನೆ ನೀಡಲಾಗಿದೆ. ಉಳಿದಂತೆ, ಮಳೆಯ ತೀವ್ರತೆ ಕಡಿಮೆಯಾದ ಪ್ರದೇಶಗಳಲ್ಲಿ ಬಸ್ ಸಂಚಾರವನ್ನು ಪುನರ್ ಆರಂಭಿಸಲು ಅನುಮತಿ ನೀಡಲಾಗಿದೆ.

ವಿಲ್ಲುಪುರಂ, ತಿರುವಾರೂರು, ತಂಜಾವೂರು, ಕುದ್ದಲೂರು, ನಾಗಪಟ್ಟಿಣಂ, ಪುದುಕೋಟೈ ಜಿಲ್ಲೆಗಳಲ್ಲಿ ಎರಡು ದಿನಗಳಿಂದ ರಾಜ್ಯ ಸಾರಿಗೆಯನ್ನು ಬಂದ್ ಮಾಡಲಾಗಿತ್ತು. ಇಂದು ಮಧ್ಯಾಹ್ನದಿಂದ ಕೆಲವು ಬಸ್ ಗಳು ಸಂಚಾರ ಆರಂಭಿಸಿವೆ.

ಮುಂದಿನ ಆರು ಗಂಟೆಗಳ ಅವಧಿಯಲ್ಲಿ ಉತ್ತರ ತಮಿಳುನಾಡು ಕರಾವಳಿ ಮೂಲಕ ನೀವಾರ್ ಚಂಡಮಾರುತ ಕ್ಷೀಣವಾಗುತ್ತಾ ಚಲಿಸಲಿದ್ದು, ರಾತ್ರಿ ವೇಳೆಗೆ ಮಳೆ, ಗಾಳಿ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇದೇ ವೇಳೆ, ರಾಜ್ಯ ಮುಖ್ಯ ಕಾರ್ಯದರ್ಶಿ ಮಾಹಿತಿ ನೀಡಿ, ಚಂಡಮಾರುತ ಪರಿಣಾಮ ಮೂವರು ಸಾವನ್ನಪ್ಪಿದ್ದು, ಮೂರು ಮಂದಿ ಗಾಯಗೊಂಡಿದ್ದಾರೆ.  101 ಮನೆಗಳು ಮಳೆಗೆ ಕುಸಿದು ಬಿದ್ದಿರುವುದಾಗಿ ತಿಳಿಸಿದ್ದಾರೆ.

ಚೆನ್ನೈ ಮತ್ತು ಕೆಲವು ಜಿಲ್ಲೆಗಳು ಹಾಗೂ ಪುದುಚೇರಿಯಲ್ಲಿ ಎರಡು ದಿನಗಳಿಂದ ವಿಮಾನ ಮತ್ತು ರೈಲು ಸೇವೆಯನ್ನೂ ರದ್ದುಪಡಿಸಲಾಗಿತ್ತು.  

ಇದೇ ವೇಳೆ, ತಮಿಳುನಾಡು ಮತ್ತು ಪುದುಚೇರಿ ಮುಖ್ಯಮಂತ್ರಿಗಳ ಜೊತೆ ಕೇಂದ್ರ ಗೃಹಸಚಿವ ಅಮಿತ್ ಷಾ ಫೋನ್ ಮೂಲಕ ಮಾತನಾಡಿದ್ದು, ಎಲ್ಲ ರೀತಿಯ ನೆರವು ನೀಡುವ ಭರವಸೆ ನೀಡಿದ್ದಾರೆ. 

The 'very severe' cyclonic storm Nivar, which has weakened into a 'severe' cyclonic storm, has crossed the coast near Puducherry at midnight and five persons have been dead.